ಸಖಿಯ ಬೆಳಕು
ಬೇಕೆಂದಾಗ ಬೇಡಲೊಂದು ಮಡಿಲೂ ಇದೆ
ಮನಸ್ಸಿಂದ ಪೂಜಿಸಲು ಉರಲ್ಲೊಂದು
ಗುಡಿಯೂ ಇದೆ
ನಿನ್ನಿಚ್ಚೆಯಂತೆ ಬಾಳಲು ನನಗೂ ಆಸೆ ಇದೆ,
ಕಷ್ಟಕ್ಕೂ ನೀ ಬೇಕು,,ಸುಖಕ್ಕೂ ನೀ ಬೇಕು
ನಿನ್ನೊಂದಿಗೆನೆ ನಾ ಬರಬೇಕು..ನಿನೊಂದಿಗೆನೆ
ನಾ ಬರಬೇಕು..//
ನೀ ಹೋಗೊ ದಾರಿಯಲಿ ಕಣ್ಣಾಯಿಸು ಒಮ್ಮೆ
ಹೆಜ್ಜೆಗಳು ದಾರಿ ತಪ್ಪಿ ಹೊಗಿವೆ,,
ಮನ ಮನಗಳು ಬೆರೆಯದೆ ಜಗದ ತುಂಬ
ತುಂಬೋಗಿದೆ ಇಂದು ಏಕಾಂತವೇ..
ಇರುಳ ಹೊನಲಿನ ಅಂಚಿಗೊಮ್ಮೆ
ನೀ ಹಾದು ಹೋಗು ಹೀಗೆ.,,
ಕಂಡು ಬೆರಗಾಗುವೆ ನೀನೆ ಬಗೆ ಬಗೆಯ
ಮುಖವಾಡದ ಹಗೆ….//
ನನ್ನದು ಅವರದು ಎಲ್ಲವೂ ನಿನ್ನದೆ
ಬದುಕಿನ ಬೆನ್ನಿಗಂಟಿದಂತೆ ನಿನ್ನ ಆಟವು…
ದಾರಿಗೊಂದು ನೆರಳು ಮನೆಗೊಂದು ಸೂರು
ಎಲ್ಲದರಲ್ಲೂ ಅಡಗಿದೆ ನಿನ್ನ ನೋಟವು…//
ಸಿಕ್ಕ ಹರುಷವು ನೂರ್ಕಾಲ ಇರದಿದ್ದರೂ
ದಿನದ ನಗುವಲ್ಲಿ ಮತ್ತೆ ಮತ್ತೆ ಬಾ ಹಾದು ಹೋಗಲು
ಕಳೆದ ಕ್ಷಣವ ಏಣಿಕೆ ನನಗೇನು ಬೇಡ,,,
ದ್ರೋಹವ ಸುಟ್ಟು ನಂಬಿಕೆಯ ಗೆಲ್ಲಿಸಿ
ಬಾ ಮತ್ತೊಮ್ಮೆ ಜಗದ ಕಣ್ಣಲ್ಲಿ ಬೆಳಕಾಗಲು
ಬಾ ಮತ್ತೊಮ್ಮೆ ಜಗದ ಕಣ್ಣಲಿ ಬೆಳಕಾಗಲು..
ಶಿವು ಅಣ್ಣಿಗೇರಿ