ಸಬ್ಬಸಿಗೆ ಸೊಪ್ಪು

ಸಬ್ಬಸಿಗೆ ಸೊಪ್ಪು

ಸುಗಂಧಿತ ಸಬ್ಬಸಿಗೆ ಸೊಪ್ಪಿನ ಪರಿಚಯ ಸಾಮಾನ್ಯವಾಗಿ ಎಲ್ಲರಿಗು ಇರುತ್ತದೆ. ಸಬ್ಬಸಿಗೆಯನ್ನು ವಿಧವಾದ ಅಡುಗೆಗಳಲ್ಲಿ ರುಚಿ ಹಾಗು ಸಾರವನ್ನು ಹೆಚ್ಚಿಸಲು ಉಪಯೋಗಿಸಲಾಗುತ್ತದೆ.

ಅನೆಥಮ್ ಗ್ರಾವಿಲೊಯೆನ್ಸ್ (Anethum Graveolens) ಎಂಬ ವೈಜ್ಞಾನಿಕ ಹೆಸರುಳ್ಳ ಏಕಮಾತ್ರ ಜಾತಿಯ ಬಹುವಾರ್ಷಿಕ ಗಿಡಮೂಲಿಕೆಯಾಗಿದೆ. ಏಷ್ಯಾ ಯುರೋಪ್ ಖಂಡಗಳಲ್ಲಿ ಬಹಳಷ್ಟು ಬಳಕೆಯಲ್ಲಿದ್ದು, ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಸರಿಸುಮಾರು 10 ರಿಂದ 20 ಸೆಂಟಿಮೀಟರ್ ಉದ್ದ ಬೆಳೆದು ಎಳೆಯ ಖಾಂಡಗಳನ್ನು ಹೊಂದಿದ್ದು ಸೂಜಿಯಂತೆ ಎಳೆಸಾದ ಎಲೆಗಳನ್ನು ಹೊಂದಿರುವ ಸಸ್ಯಗಳಲ್ಲಿ ಬಿಳಿಯ ಹೂಗಳು ಕಂಡುಬರುತ್ತವೆ. ನಮ್ಮ ಭಾರತದಲ್ಲಿ ಸಬ್ಬಸಿಗೆಯನ್ನು ಪಲ್ಯಗಳು, ವಡೆ, ಸಾರು, ಚಟ್ನಿ, ಉಪ್ಪಿಟ್ಟು ಇತ್ಯಾದಿ ಖಾದ್ಯಗಳಲ್ಲಿ ಬಳಸುತ್ತಾರೆ.

ಖಾದ್ಯದ ಸಾರವನ್ನು ಹೆಚ್ಚಿಸುವುದಲ್ಲದೆ ತನ್ನದೇ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಕಬ್ಬಿಣಂಶ, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟಾಸಿಯಂ, ಸೋಡಿಯಂ ನಂತಹ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿರುತ್ತದೆ.

ನಮ್ಮ ಆಹಾರ ಪದ್ದತಿಯಲ್ಲಿ ಸಬ್ಬಸಿಗೆಯನ್ನು ಬಳಸುವುದರಿಂದ ದೇಹದಲ್ಲಿನ ಪೌಷ್ಟಿಕಾಂಶದ ಕೊರತೆಗಳನ್ನು ನೀಗಿಸುವಲ್ಲಿ ಸಹಾಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಆರೋಗ್ಯವಾಗಿಡಲು ಸಹ ಸಹಕಾರಿ. ಮಲಬದ್ಧತೆ, ಅಜೀರ್ಣ ಸಮಸ್ಯೆಗಳು, ಮುತ್ತಿನ ಸಮಸ್ಯೆ, ಎದೆಹಾಲು ಹೆಚ್ಚಿಸಲು ಸಹ ಸಬ್ಬಸಿಕೆಯನ್ನು ಮನೆಮದ್ದಾಗಿ ಉಪಯೋಗಿಸಲಾಗುತ್ತದೆ.

ಇತ್ತೀಚಿನ ಪೀಳಿಗೆಗಳಲ್ಲಿ ಹೆಚ್ಚಾಗಿ ಕಂಡುಬರುವ ನಿದ್ರಾಹೀನತೆ, ಬೊಜ್ಜು, ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಉಪಯುಕ್ತವಾಗಿದೆ.

ಶಿಲ್ಪ

Related post

Leave a Reply

Your email address will not be published. Required fields are marked *