ಸರ್ವರಿಗೂ ಪ್ರೀತಿ ನಮ್ಮ ತೇಜಸ್ವಿ

ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ

ಮಾನ್ಯ ಶ್ರೀ ಕುವೆಂಪು ರವರು ಶ್ರೀ ರಾಮಾಯಣ ದರ್ಶನಂ ರಚಿಸುತ್ತಿದ್ದ ಕಾಲ,  ಕಾವ್ಯವನ್ನು ಹಾಗಷ್ಟೇ ರಚಿಸಲು ಶುರು ಮಾಡಿದ್ದರು. ಒಂದೇ ಸಮನೆ ಬರೆದು ಬರೆದು ಮುಂದಕ್ಕೆ ಸಾಗಲು ಹಠಾತನೇ ಸ್ಫೂರ್ತಿ ನಿಂತು ಹೋಗಿ ವಾರಾನುಗಟ್ಟಲೆ ಕಾವ್ಯ ಮುಂದಕ್ಕೆ ಹೋಗಲೇ ಇಲ್ಲಾ. ಈಗೆ ಶ್ರೀ ಕುವೆಂಪುರವರು ಚಡಪಡಿಸುತಿದ್ದಾಗ ತಮ್ಮ ಮಗು ಕೈಗೂಸು ತೇಜಸ್ವಿಯವರು ಊಟ ಮಾಡದೆ ರಚ್ಚೆ ಹಿಡಿದು ಅಳುತಿದ್ದಾಗ ಹಠಾತ್ತನೆ ಹೊಳೆದ ಸಾಲು “ಏಕೆ ಅಳುವೇ ತೇಜಸ್ವಿಯೇ” ಮಗು ಸಮಾಧಾನಪಟ್ಟಿತೋ ಇಲ್ಲವೋ ಆದರೆ ಕುವೆಂಪು ರವರ ಲೇಖನಿ ಮಾತ್ರ ನಿಲ್ಲಲಿಲ್ಲ ಹಾಗೂ ಮುಂದೆಲ್ಲೂ ಕಾವ್ಯವು ನಿಲ್ಲದೆ ಶ್ರೀ ರಾಮಾಯಣ ದರ್ಶನಂ ರಚಿತಗೊಂಡು ಜನಪ್ರಿಯವಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿಯು ಲಭಿಸಿತು.

ಈಗೆ ಶ್ರೀ ತೇಜಸ್ವಿಯವರ ಸ್ಫೂರ್ತಿ ಎಲ್ಲರಿಗಿಂತ ಮೊದಲು ತಮ್ಮ ತಂದೆಗೆ ಮೊದಲು ಲಭಿಸಿತು. ತೇಜಸ್ವಿಯವರು ಹುಟ್ಟಿದು ಸೆಪ್ಟೆಂಬರ್ 8 1938 ಶಿವಮೊಗ್ಗದ ಕುಪ್ಪಳ್ಳಿಯಲ್ಲಿ . ತಾವು ಅನುವಾದಿಸಿದ ಮಹಾಯುದ್ಧದ ಕಥೆಗಳ್ಲಲಿ ಆ ಭೀಕರತೆಯ ಕಾಲದಲ್ಲಿ ತಾನು ಜನಿಸಿದ್ದು ಎಂದು ಬರೆದುಕೊಂಡಿದ್ದಾರೆ. ಅವರು ಶಿಕ್ಷಣಾಭ್ಯಾಸ ಮೈಸೂರಿನಲ್ಲಿ ಮುಗಿಸಿ ಕನ್ನಡ ಬಿ ಎ  (ಆನರ್ಸ್) ಹಾಗೂ ಎಂ ಎ ಪದವೀಧರರಾಗಿ ಯಾವುದೇ ಸರಕಾರಿ ಹುದ್ದೆಯನ್ನು ಅಪೇಕ್ಷಿಸದೆ ಚಿಕ್ಕಮಗಳೂರಿನ ತಾಲೂಕು ಮೂಡಿಗೆರೆಯಲ್ಲಿ ಕೃಷಿ ಉದ್ಯಮದಲ್ಲಿ ತೊಡಗಿಕೊಂಡರು ಕಾರಣ ಅವರಿಗಿದಿದ್ದ ಅದಮ್ಯ ನಿಸರ್ಗ ಪ್ರೇಮ.

ಆಡು ಮುಟ್ಟದ ಸೊಪ್ಪಿಲ್ಲ ಹಾಗೂ ಶ್ರೀ ತೇಜಸ್ವಿಯವರು ಕೈಹಿಡದ ವಿಷಯಗಳಿಲ್ಲ ಮುಂದೆ ಕನ್ನಡ ಓದುಗರಿಗೆ “ಪೂಚಂತೇ” ಎಂದು ಜನಪ್ರಿಯರಾಗಿ ಅವರು ಎಲ್ಲಾ ಬಗೆಯ ಕೃತಿಯಲ್ಲಿ ತೊಡಗಿಸಿಕೊಂಡು ಕನ್ನಡ ತಾಯಿಯ ಸೇವೆ ಮಾಡಿದರು. ಅಂತರ್ಜಾಲವಿಲ್ಲದಿದ್ದ ಕಾಲದಲ್ಲಿ ಅವರು ಅನೇಕ ವಿಷಯಗಳ ಬಗ್ಗೆ ತಮ್ಮ ಕೃತಿಯಾಗಿ ಅನುವಾದಿಸಿದ್ದಾರೆ.  ಫ್ಲೈಯಿಂಗ್ ಸಾಸರ್ ನಲ್ಲಿ ಅನ್ಯಜೀವಿಗಳ ಬಗ್ಗೆ ವಿಜ್ಞಾನ ಮಾಹಿತಿಯನ್ನು ಸಂಗ್ರಹಿಸಿ ಎರಡು ಪುಸ್ತಕಗಳನ್ನು ಪ್ರಕಟಿಸಿದರು. ಏರೋಪ್ಲೇನ್ ಚಿಟ್ಟೆ ಎಂಬ ಕಥಾಸಂಕಲನದಲ್ಲಿ “ ಚಿಟ್ಟೆಗಳು, ಬಾವಲಿಯ ವಿಚಿತ್ರ ಸಂಗತಿಗಳು, ಕಪ್ಪೆಯನ್ನು ನುಂಗಬಯಸಿದ ಹಾವಿನ ಬಗ್ಗೆ ಹಾಗೂ ಇನ್ನು ಅನೇಕ ಕೀಟಗಳ ಬಗ್ಗೆ ಬರೆದರು. ತಮ್ಮ ಮಿಸ್ಸಿಂಗ್ ಲಿಂಕ್ ಪುಸ್ತಕದಲ್ಲಿ ಮಾನವನ ಪೂರ್ವಜರನ್ನು ದಾಖಲೆಗಳ ಸಮೇತ ಪ್ರಕಟಿಸಿ ಕನ್ನಡದ ಓದುಗರೆಲ್ಲರೂ ಹುಬ್ಬೇರಿಸುವಂತೆ ಮಾಡಿದರು.  ಹಾಗೆ ಜೊತೆಗೆ ಪೆಸಿಫಿಕ್ ದ್ವೀಪಗಳು, ನೈಲ್ ನದಿಯ ಬಗ್ಗೆ, ಅಮೇಝೋನ್ ಕಾಡುಗಳ ಭೀಕರತೆಯನ್ನು ಪರಿಚಯಿಸುತ್ತ ಒಂದು ಕಡೆ ಕರ್ವಾಲೋ, ಚಿದಂಬರರಹಸ್ಯ, ಜುಗಾರಿ ಕ್ರಾಸ್ ಮುಂತಾದ ಕಾದಂಬರಿಗಳನ್ನು ಬರೆದರು.  ಕರ್ವಾಲೋ ಕಾದಂಬರಿಯಲ್ಲಿ ಬರುವ ಮಂದಣ್ಣನ ಪಾತ್ರವು ಈಗಿನ ತಲೆಮಾರಿಗೂ ಜನಪ್ರಿಯ. ತಮ್ಮ ಎಲ್ಲಾ ಕೃತಿಗಳಲ್ಲಿಯೂ ತಮ್ಮ ಅಗಾಧ ನಿಸರ್ಗ ಪ್ರೀತಿಯನ್ನು ತನ್ನ ಬುದ್ಧಿಶಕ್ತಿಯ ಜೊತೆ ಬೆರಸಿ ಕನ್ನಡದಲ್ಲಿ ಅನೇಕ ನವ್ಯ ಸಾಹಿತ್ಯ ಕೃತಿಗಳು ಬರಲು ಕಾರಣವಾದರು.

ಶ್ರೀ ತೇಜಸ್ವಿ ಎಂದರೆ ಒಂದು ಜೀವಂತ ವಿಶ್ವಕೋಶವಿದ್ದಂತೆ ಅವರು ಶ್ರೀ ಪ್ರದೀಪ್ ಕೆಂಜಿಗೆಯವರನ್ನು ಜೊತೆಯಾಗಿಟ್ಟುಕೊಂಡು ಶುರು ಮಾಡಿದ ಮಿಲೇನಿಯುಮ್ ಸರಣಿ ಈಗಲೂ ಜನಪ್ರಿಯ.  ಸರಣಿಯಲ್ಲಿ ಪ್ರಕಟಗೊಂಡ ಪ್ಯಾಪಿಯೊನ್ ( ಬಾಗ 1 2 3), ಮಹಾಪಲಾಯನ ಪುಸ್ತಕವು ಮದ್ಯ ಶತಮಾನದ ಕಮ್ಯುನಿಸಂ ಕ್ರೂರತೆಯನ್ನು ಪರಿಚಯಿಸಿದರೆ, ದೇಶ ವಿದೇಶ, (ಬಾಗ 1, 2, 3, 4) ಪಾಶ್ಚಿಮಾತ್ಯ ದೇಶದ ಸಂಸ್ಕೃತಿ ಹಾಗೂ ವಾಸ್ತವತೆಯನ್ನು ಪರಿಚಯಿಸಿತು. ಮಹಾಯುದ್ಧ (ಬಾಗ 1, 2, 3) ಪುಸ್ತಕಗಳಲ್ಲಿ ಹಿಟ್ಲರ್, ಮಿತ್ರಪಡೆ, ಗ್ರೇಟ್ ಬ್ರಿಟನ್, ಹಾಗೂ ಅಮೇರಿಕಾ ಜಪಾನ್ ಮೇಲೆ ಹಾಕಿದ ಅಣು ಬಾಂಬಿನ ತೀವ್ರತೆಯನ್ನು ಮಾಹಿತಿ ಸಮೇತ ಅನುವಾದಗೊಂಡವು. ಈಗೆ ಅವರ ಎಲ್ಲಾ ಪುಸ್ತಕಗಳು ಹಿಂದಿನ, ಇಂದಿನ ಹಾಗೂ ಮುಂದಿನ ತಲೆಮಾರುಗಳಿಗೆ ಉಪಯೋಗವಾಗುವಂತವು ಹಾಗೂ ಮತ್ತೆ ಮತ್ತೆ ಓದಬೇಕೆನಿಸುವುದು.

ಶ್ರೀ ತೇಜಸ್ವಿಯವರು ನುರಿತ ಸ್ಥಿರ ಚಿತ್ರ ಛಾಯಾಗ್ರಾಹಕರಾಗಿಯೂ ಜನಪ್ರಿಯ. ತಮ್ಮ ಹಕ್ಕಿ ಪುಕ್ಕ ಪುಸ್ತಕದಲಿ ಇರುವ ವರ್ಣಮಯ ಪಕ್ಷಿ ಚಿತ್ರಗಳು ತಮ್ಮ ಕ್ಯಾಮೆರಾದಲ್ಲೇ ತೆಗೆದಿದ್ದು. ಈಗಿನ ತಲೆಮಾರಿಗೆ ಜಿಮ್ ಕಾರ್ಬೆಟ್ ಹಾಗೂ ಕೆನ್ನೆತ್ ಆಂಡರ್ಸನ್ ಆಂಗ್ಲ ಬೇಟೆ ಕೃತಿಗಳನ್ನು ಅನುವಾದಿಸಿ ಎಷ್ಟೋ ಜನರಲ್ಲಿ ಪ್ರಾಣಿ ಪ್ರೀತಿಯನ್ನು ಉದಯಿಸಿದರು.

ಈಗೆ ತೇಜಸ್ವಿಯವರ ಬಗ್ಗೆ ಬರೆಯುವುದು ಮೂಟೆ ಹಕ್ಕಿಯಲ್ಲಿ ಒಂದು ಕಾಳನ್ನು ಹೊರತೆಗೆದಂತೆ. ಈದಿನ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟಿದಹಬ್ಬದ ನೆನಪಲ್ಲಿ ಅವರ ಸಾಹಿತ್ಯ, ನೈಸರ್ಗಿಕ ಪ್ರೀತಿಯನ್ನು ನೆನೆಯೋಣ.

ಚಂದ್ರಶೇಖರ ಕುಲಗಾಣ

Related post