ಸರ್ ಜಿಮ್ ಕಾರ್ಬೆಟ್ಟ್ ಶಿಕಾರಿ ಗುರು

ಸರ್ ಜಿಮ್ ಕಾರ್ಬೆಟ್ (ಬಿಳಿ ಸಾಹೇಬ)

“ಗುಡ್ಡದ ಹಿಂಬದಿಯಲ್ಲಿ ಕಂಡ ಆ ನರಬಕ್ಷಕಿ ಒಂದೇಸಮನೆ ಚಲಿಸಿ ದೊಡ್ಡ ಬಂಡೆಯ ಮರೆಗೆ ಕರೆದೋಯ್ದಿತ್ತು, ಸುಮಾರು ಜನರ ಪ್ರಾಣ ತೆಗೆದು ಸುತ್ತಮುತ್ತ ಹಲವಾರು ಹಳ್ಳಿಗಳ ಜನರ ಜೀವಭಯಕ್ಕೆ ಕಾರಣವಾಗಿದ್ದ ಆ ಹುಲಿ ನನ್ನ ಬಂದೂಕಿಗೆ ಕೇವಲ 50 ಮೀಟರ್ ನೇರದಲ್ಲಿ ಕಾಣಿಸುತಿತ್ತು. ಇನ್ನೇನು ಗುಂಡು ಹಾರಿಸಬೇಕು ಅಷ್ಟರಲ್ಲಿ ಬಂಡೆಯ ಗುಹೆಯ ಒಳಗಿನಿಂದ ನಾಲ್ಕು ಪುಟ್ಟ ಮರಿಗಳು ನೆಗೆದು ನೆಗೆದು ಹೊರಬಂದವು. ಆಗ ಆ ಹುಲಿ ನನ್ನ ಇರುವನ್ನು ಗುರಿತಿಸಿ ಆಕ್ರಮಣ ಮಾಡಲು ಕುಕ್ಕುರುಗಾಲಿನಲ್ಲಿ ಸಿದ್ದವಾದಾಗ ನಾನು ಅದನ್ನೇ ಎಚ್ಚರಿಕೆಯಿಂದ ನೋಡುತ್ತಾ ಹಿಮ್ಮುಖವಾಗಿ ಚಲಿಸಿ ಪೊದೆಯಾ ಆಚೆ ಬಂದೆ ಆಗ ನನಗೆ ಅರಿವಾಯಿತು ಇದು ನಾನು ಬೆನ್ನಟಿದ  ನರಭಕ್ಷಕಿಯಲ್ಲ ಎಂದು”

ಇದು ಸರ್ ಜಿಮ್ ಕಾರ್ಬೆಟ್ ಬರೆದ “Man-Eaters” ಎಂಬ ಕೃತಿಯಲ್ಲಿ ಬರುವ ನೈಜ ಘಟನೆ ಈಗೆ ಅನೇಕ ಮೈ ಜುಮ್ಮೆನೆಸುವ ಸಂದರ್ಭಗಳ್ಳನ್ನು ಓದುಗರು ಅವರ ಕೃತಿಗಳನ್ನು ಓದಿ ರೋಮಾಂಚಿತರಾಗಬಹುದು. ಅಷ್ಟಕ್ಕೂ ಯಾರೀ ಕಾರ್ಪೆಟ್  ಸಾಬ್ ?

ಸಾವಿರದ ಎಂಟನೂರ ಎಪ್ಪತೈದು ಜೂಲೈ 25 ರಂದು ಈಗಿನ ಉತ್ತರಕಾಂಡದ ನೈನಿತಾಲಿನಲ್ಲಿ ಹುಟ್ಟಿದ ಈ ಕಾರ್ಪೆಟ್ ಸಾಬ್ ಪೂರ್ಣ ಹೆಸರು “ ಎಡ್ವರ್ಡ್ ಜೇಮ್ಸ್ ಕಾರ್ಬೆಟ್”. ಇವರ ತಂದೆ “ಕ್ರಿಸ್ಟೋಫರ್ ವಿಲಿಯಂ ಕಾರ್ಬೆಟ್” ಹುಟ್ಟಿದು ಭಾರತದ ಮೀರತ್ ನಲ್ಲಿ, ತಾತ ಐರಿಷ್. ತನ್ನ ತಂದೆಯ ಒಂಬತ್ತನೆ ಮಗನಾಗಿ ಜನಿಸಿದ ಜಿಮ್ ತನ್ನ ನಾಲಕ್ಕನೆ ವಯಸ್ಸಿನ್ನಲ್ಲಿ ತಂದೆಯನ್ನು ಕಳೆದುಕೊಂಡ. ಹಿಮಾಲಯದ ದಟ್ಟ ಕಾಡುಗಳ ನಡುವೆ ಇದ್ದ ಕಾಲದುಂಗಿ ಎಂಬ ಊರಿನಲ್ಲಿ ಇಡೀ ಕುಟುಂಬ ವಾಸವಿದದ್ದು. ಬಡ ಪೋಸ್ಟ್ ಮಾಸ್ಟರ್ ಹಾಗಿದ್ದ ಇವರ ತಂದೆಗೆ ಇದ್ದ ಸಂಬಳ ಇಡೀ ಕುಟುಂಬದ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಬಾಲಕನಾಗಿದ್ದಾಗ ಜಿಮ್ ಕ್ಯಾಟೆರ್ಪಿಲಿನಲ್ಲಿ ಗುರಿ ಹಿಡಿದು ಸಣ್ಣ ಪುಟ್ಟ ಬೇಟೆ ಹಾಡುವುದನ್ನು ಕಲಿತ. ತಂದೆಯ ಕಾಲನಂತರ ಮನೆಯಲ್ಲಿ ಇದ್ದ ಚರೆ ಬಂದೂಕಿನಿಂದ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಬೇಟೆಯಾಡಲು ಶುರುಮಾಡಿದ ಹಾಗೂ ಅದು ಅವರ ಅಗಾಧ ಕುಟುಂಬಕ್ಕೆ ಹೊಟ್ಟೆ ಪಾಡಾಗಿತ್ತು. ಈಗೆ ಬಾಲ್ಯವಸ್ಥೆಯಲ್ಲಿಯೇ ವನ್ಯಸಂಕುಲದ ಜೊತೆ ಬೆರೆತು ಅನೇಕ ಪಕ್ಷಿ-ಪ್ರಾಣಿಗಳ ಧ್ವನಿಯನ್ನು ಅನುಕರಿಸುವುದ್ದನ್ನು ಕಲಿತ ಜಿಮ್ ಮುಂದೆ ಆ ವಿದ್ಯೆಯ ಸಹಾಯದಿಂದ ಅನೇಕ ನರಹಂತಕ ಹುಲಿ ಚಿರತೆ ಗಳನ್ನು ಬೇಟೆಯಾಡಿದ. ಪ್ರೌಡಾವಸ್ಥೆಗೆ ಬರುವದರೊಳಗೆ ಜಿಮ್ ಪ್ರಾಣಿಗಳ ಜೊತೆ ಬೆರೆತು ಅವುಗಳನ್ನು ಅಧ್ಯಯನಿಸಿ ಅಪಾರ ಜ್ಞಾನವನ್ನು ಸಂಪಾಧಿಸಿಕೊಂಡ.

ತಮ್ಮ ಕೃತಿ ಮ್ಯಾನ್ ಈಟರ್ಸ್ ಆಫ್ ಕುಮಾವ್ ನಲ್ಲಿ ನರಭಕ್ಷಕ ಹುಲಿ ಚಿರತೆಗಳ ಬಗ್ಗೆ ಜಿಮ್  ವಿವರವಾಗಿ ಹೇಳುತ್ತಾರೆ.

“ಮನುಷ್ಯ, ಹುಲಿ ಅಥವಾ ಚಿರತೆಯ ಸಹಜವಾದ ಆಹಾರವಲ್ಲ ತಮ್ಮ ಗಾಯಗಳಿಂದಾದ ನ್ಯೂನತೆ ಹಾಗೂ ವಯೋಸಹಜವಾದ ಸಾಂದರ್ಭಿಕ ಒತ್ತಡಗಳಿಂದ ಅವು ಕ್ರಮೇಣ ನರಭಕ್ಷಕಗಳಾಗುತ್ತವೆ. ಗಾಯವೆಂದರೆ ಮೂರು ಬಗೆಯಾಗಿ ವಿಂಗಡಿಸಬಹುದು ಒಂದು ಸಹಜವಾದ ನೈಸರ್ಗಿಕವಾಗಿ ಆದ ಗಾಯ (ಬಂಡೆಯ ಮೇಲಿನಿಂದ ಬಿದ್ದೋ ಅಥವಾ ಮರದ ಚೂಪಾದ ರೆಂಬೆ ಕೊಂಬೆಗೋ ತಗುಲಿಸಿಕೊಂಡು ಆದದ್ದು) ಇನ್ನೊಂದು ಶಿಕಾರಿ ಹುಚ್ಚಿನ ಶ್ರೀಮಂತರು ತಮ್ಮ ಅರೆ ಬರೇ ಅನುಭವದಿಂದ ಬೇಟೆಯಾಡಲು ಹೋಗಿ ನಿಖರವಾದ ಗುರಿಯಿಲ್ಲದೇ ಪ್ರಾಣಿಯ ಕಣ್ಣಿಗೋ, ಕಾಲಿಗೋ ಅಥವಾ ದವಡೆಗೋ ಗುಂಡು ಹೊಡೆದು ಗಾಯ ಗೊಳಿಸುವುದು ಮತ್ತೊಂದು ಬೇಟೆಯಾಡುವಾಗ ಇವು ಮುಳ್ಳು ಹಂದಿಯಂತ ಪ್ರಾಣಿಗಳನ್ನು ಕೆದಕಿ ತಾಳ್ಮೆ ಕಳೆದುಕೊಂಡು ಆಕ್ರಮಣ ಮಾಡಿದಾಗ ಕಣ್ಣಿಗೋ, ದವಡೆಗೋ ಅವುಗಳ ಚೂಪಾದ ಮುಳ್ಳುಗಳಿಂದ ಗಾಯಗಗೊಂಡು, ಗಾಯಗಳು ವೃಣವಾಗುವಂತದ್ದು. ಆಗ ಇವುಗಳಿಗೆ ತಮ್ಮ ನೈಜ್ಯ ಬೇಟೆಯಾಡಲು  ಅಸಹಾಯಕತೆ ಆವರಿಸುತ್ತದೆ. ಇನ್ನೊಂದು ಕಾರಣ  ತಮ್ಮ ಮುಪ್ಪಿನಲ್ಲಿ ಇವು ದೈಹಿಕವಾಗಿ ತಮ್ಮ ಬೇಟೆಯ ಚುರುಕನ್ನು ಕಳೆದುಕೊಳ್ಳುತ್ತವೆ ಆಗ ಸುಲಭವಾಗಿ ಸಿಗುವ ಮನುಷ್ಯ ಇವುಗಳ ಬೇಟೆಯಿಂದ ಆಹಾರವಾಗುತ್ತಾನೆ. ಬದುಕಲು ಆಹಾರಕ್ಕಾಗಿ ಸಂದರ್ಭದ ಒತ್ತಡಗಳಿಂದಾಗಿ ಇವು ನರಭಕ್ಷಕಗಳಗುತ್ತವೆಯೇ  ಹೊರತು ಮಾಂಸದ ರುಚಿಯಿಂದಲ್ಲ. ಇನ್ನು ಹುಲಿ ಅಥವಾ ಚಿರತೆ ತಮ್ಮ ಬೇಟೆಯನ್ನು ಸವಿಯುತ್ತಿದಾಗ ಅಥವಾ ತಮ್ಮ ಮರಿಗಳ ಜೊತೆ ಇದ್ದ ಸಂದರ್ಭದಲ್ಲಿ  ಮನುಷ್ಯ ಕಾಣಿಸಿಕೊಂಡರೆ ಅವು ಬೀತಿಯಿಂದ ದಾಳಿ ಮಾಡುತ್ತಾವೆ ಆದರೆ ಮನುಷ್ಯನನ್ನು ತಿನ್ನುವುದಿಲ್ಲ. ಇವು ನರಭಕ್ಷಕಗಳಲ್ಲ ನರಹಂತಕಗಳು”

ಈಗೆ ಹುಲಿ ಚಿರತೆಗಳಿಂದ ದಾಳಿಗೊಳಗಾದ ಗ್ರಾಮಗಳಲ್ಲಿ ಜಿಮ್ ಮೊದಲು ದೇಹವನ್ನು ಶವಪರೀಕ್ಷೆಗೆ ಕಳುಹಿಸಿ ವರದಿ ಬಂದ ನಂತರ ಆ ಪರಿಸರದಲ್ಲಿ ನಿಜವಾಗಿಯೂ ಇರುವುದು ನರಭಕ್ಷಕ ಪ್ರಾಣಿಯ ಅಥವಾ ಮುನುಷ್ಯನ ಕಾಡಿನ ಅತಿಕ್ರಮಣದಿಂದಾದ ದಾಳಿಯ ಎಂದು ತೀರ್ಮಾನಿಸಿ ಅದು ನರಭಕ್ಷಕವಾದರೆ ಮಾತ್ರ  ಬೇಟೆಗೆ ಸಾಜ್ಜಾಗುತಿದ್ದರು ಇಲ್ಲವೆಂದರೆ ಜನರಿಗೆ ಧೈರ್ಯ ಹಾಗೂ ತಿಳಿ ಹೇಳಿ ಹಿಂದಿರುಗುತ್ತಿದರು.

ಸ್ವಾತಂತ್ರ ಪೂರ್ವದಲ್ಲಿ ಈಗಿನ ಹಾಗೆ ಬಂದೂಕಿನ ಮೂಲಕ ಅರಿವಳಿಕೆಯನ್ನು ಚುಚ್ಚಿ ಪ್ರಾಣಿಗಳನ್ನು ಹಿಡಿಯುವ ತಾಂತ್ರಿಕತೆ ಭಾರತದಲ್ಲಿ ಇರಲಿಲ್ಲ. ಈಗೆಲ್ಲಾ ಅರಣ್ಯ ಇಲಾಖೆಯವರು ಪ್ರಾಣಿ ವೈದ್ಯರ ನೆರವಿನಿಂದ ಅರವಳಿಕೆಗಳನ್ನುಬಳಿಸಿ ಪ್ರಾಣಿಗಳಿಗೆ ಜ್ಞಾನ ತಪ್ಪಿಸಿ ಅವನ್ನು ಹಿಡಿದು ಪುನರ್ವಸತಿ ಕಲ್ಪಿಸಿ ಅವುಗಳ ಸಂತತಿಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಆಗ ಈ ಬಗೆಯ ತಾಂತ್ರಿಕತೆಯ ಕೊರತೆಯಿಂದಾಗಿ ಸರಕಾರವು ಬೇಟೆಗಾರರಿಗೆ ಹಣದ ಅಥವಾ ಬಹುಮಾನದ ಆಸೆಯನ್ನು ಒಡ್ಡಿ ಈ ತರಹದ ನರಭಕ್ಷಕಗಳನ್ನು ಕೊಲ್ಲಿಸುತಿತ್ತು. ಜಿಮ್ ತನ್ನ ಮೊದಲ ನರಭಕ್ಷಕನ ಶಿಕಾರಿ ಮಾಡಿದ್ದು ಸಾವಿರದ ಒಂಬೈನೂರ ಏಳು (1907) ಚಂಪಾವತದಲ್ಲಿ ಆ ಹುಲಿ ಸುಮಾರು ನಾನ್ನೂರು ಜನರನ್ನ ತಿಂದಿತ್ತು. ಆನಂತರ ಜಿಲ್ಲಾಡಳಿತ ಗಳ ಕೋರಿಕೆಯ ಮೇರೆಗೆ ರುದ್ರಪ್ರಯಗ್,ಛಾವಗರ್, ಪೊವೆಲಘರ್, ಕುಮಾವ್, ಕಾಂದ, ಪೈಪಲ್ ಪಾನಿ, ಮುಕ್ತೇಸರಾ, ಪನ್ನಾರ್,ಚೂಕ, ತಾಕಿ ಇನ್ನು ಮುಂತಾದ ಪ್ರದೇಶದಲ್ಲಿ ನೂರಾರು ಜನರ ಭಕ್ಷಣೆ ಮಾಡಿದ್ದ ನರಭಕ್ಷಕಗಳನ್ನು ಶಿಕಾರಿ ಮಾಡಿ ಜನರ ಹಾಗೂ ಸರಕಾರದ ನೆಮ್ಮದಿಗೆ ಕಾರಣರಾದರು. ಈ ಎಲ್ಲಾ ಬೇಟೆಗಳನ್ನು ತಮ್ಮ ಕೃತಿಗಳ ಕಥೆಯ ರೂಪದಲ್ಲಿ ರೋಚಕವಾಗಿ  ಬರೆದಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿದ ಕೃತಿಗಳನ್ನು ಶ್ರೀಯುತ ಪೂರ್ಣಚಂದ್ರ ತೇಜಸ್ವಿ ಯವರು ಮೊದಲ ಬಾರಿಗೆ ರುದ್ರಪ್ರಯಾಗದ ನರಭಕ್ಷಕ ಹೆಸರಿನಲ್ಲಿ ಅನುವಾದಿಸಿ ಕನ್ನಡದ ಓದುಗರಿಗೆ ಪರಿಚಯಿಸಿದರು. ಇದರಿಂದ ಉತ್ತೇಜಿತರಾಗಿ ಶ್ರೀಯುತ ಟಿ ಎಸ್ ವಿವೇಕಾನಂದನಂದರು ಹಿಮಾಲಯದ ನರಭಕ್ಷಕಗಳು ಎಂಬ ಅಷ್ಟೂ ಕಥೆಗಳನ್ನು ಸಂಪುಟ ರೂಪದಲ್ಲಿ ಹೊರತಂದಿದ್ದಾರೆ. ಜಿಮ್ ಕಾರ್ಬೆಟ್ ಕಥಾ ಸರಣಿ ಎಂದೇ ಪ್ರಸಿದ್ಧವಾದ ಅವರ ಅಷ್ಟೂ ಕಥೆಗಳಲ್ಲಿ ವನ್ಯಜೀವಿ ಸಂಕುಲದ ಮೇಲಿನ ಪ್ರೀತಿ, ನರಭಕ್ಷಕಗಳ ಮೇಲಿನ ಹಳ್ಳಿ ಜನರ ಭಯ, ಮೂಡ ನಂಬಿಕೆ, ಜಿಮ್ ಅವರಿಗೆ ಒದಗಿದ ಕೊಲ್ಲಲೇಬೇಕಾದ ಒತ್ತಡ, ಊರಿನ ಜನರ ಅಸಹಾಯಕತೆ, ಬೇಟೆಯಲ್ಲಿನ ರೋಚಕತೆ, ಶಿಕಾರಿಯ ವೇಳೆಯಲ್ಲಿ ಒದಗಿದ ಪ್ರಾಣಾಪಾಯ,ಹಾಗೂ ವೃತ್ತಿಪರ ಶಿಸ್ತು ಇವೆಲ್ಲವೂ ಕೂಡಿದೆ.

ಇವರ ಕೊನೆಯ ಶಿಕಾರಿ ತಾಕಿನ ನರಭಕ್ಷಕ ಎಂದು ಅವರೇ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ ನರಭಕ್ಷಕಗಳನ್ನಷ್ಟ್ಟೇ ಶಿಕಾರಿ ಮಾಡುತಿದ್ದ ಜಿಮ್  ಆನಂತರ ಬಂದೂಕನ್ನು ಉಪಯೋಗಿಸದೆ ಕ್ಯಾಮೆರಾ ಉಪಯೋಗಿಸಿ ಹಲವಾರು ಸ್ತಬ್ದ ಚಿತ್ರಗಳನ್ನು ಹಾಗೂ ಸಾಕ್ಷ್ಯ ಚಿತ್ರಗಳನ್ನು ತೆಗೆದಿದ್ದಾರೆ. ಅವರೇ ಹೇಳಿಕೊಂಡಂತೆ ಬಂದೂಕಿನಲ್ಲಿ ಶೂಟ್ ಮಾಡುವುದಕ್ಕಿಂತ ಕ್ಯಾಮೆರಾದಲ್ಲಿ ಶೂಟ್ ಮಾಡುವುದು ಹೆಚ್ಚು ಖುಷಿಯ ವಿಚಾರ ಹಾಗೂ ಮನಸಿಗೆ ನೆಮ್ಮದಿ ಕೊಡುತ್ತದೆ ಎಂದು.

ಜಿಮ್ ತಮ್ಮ ಸಾಕ್ಷ್ಯಚಿತ್ರದ ಮೂಲಕ ಇಂಡೋ ಚೀನಾ ಹಾಗೂ ಚೀನಾದ ಉತ್ತರದ ಕಾಡುಗಳಲ್ಲಿ ಸಿಗುವ ನಮ್ಮ ಭಾರತದ ಹುಲಿಗಳಿಗಿಂತ ತುಸು ಚಿಕದ್ದಾದ ಹುಲಿಯ ಪ್ರಬೇದವನ್ನು ಬೆಳಕಿಗೆ ತಂದಿದ್ದಾರೆ ಈ ಪ್ರಬೇದವನ್ನು ವಿಶ್ವ ಪ್ರಾಣಿ ತಜ್ಞರು ಜಿಮ್ ಕಾರ್ಬೆಟ್ ಗೌರವಾರ್ಥವಾಗಿ “ಪ್ಯಾಂಥರ ಟೈಗ್ರಿಸ್ ಕಾರ್ಬೇಟಿ ಎಂದೇ ಗುರುತಿಸಿದ್ದಾರೆ. ಭಾರತದಲ್ಲಿ ಹುಲಿ ಸಂತತಿ ಕ್ಷೀಣಿಸು ಜಿಮ್ ತ್ತಿರುವುದರ ಬಗ್ಗೆ ಸರಕಾರಕ್ಕೆ ತಮ್ಮ ಸಾಕ್ಷ್ಯಚಿತ್ರಗಳಿಂದ ಎಚ್ಚರಿಸಿ ಅವುಗಳ ಸಂರಕ್ಷಣೆಗೆ ಜೋಡಿಸಿದ ಮೊದಲ ಕೈ ಅವರದ್ದು. ಅವರು ಬಾಳಿ ಬದುಕ್ಕಿದ ಪರಧಿಯ ಎಲ್ಲಾ ಗ್ರಾಮದ ಜನತೆಗೆ ತಮ್ಮ ಸಮಾಜ ಸೇವೆಯಿಂದ ಪ್ರೀತಿ ಪಾತ್ರರಾಗಿ ಉತ್ತರಪ್ರದೇಶ ಸರಕಾರ ಅವರು ಹುಟ್ಟಿದ ಕಾಲದುಂಗಿಯ ಅವರ ಮನೆಯನ್ನು ಸಂರಕ್ಷಿಸಿ ಮ್ಯೂಸಿಯಂ ಹಾಗಿ ಪರಿವರ್ತಿಸಿದೆ. ಇನ್ನು ಭಾರತ ಸರಕಾರವು ಕಾಂದ, ನೈನಿತಾಲ್, ಕೋಸಿ ನದಿ ತೀರಾ ಹಾಗೂ ಗಡವಾಲ್ ಪ್ರದೇಶದಿಂದ ಸುತ್ತುವರೆದ ಇಡೀ ಕಾಡನ್ನು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಕ ಪ್ರದೇಶಎಂದು ನಾಮಕರಣ ಮಾಡಿದೆ ಇದು ನಮ್ಮ ಘನ ಸರಕಾರ ಜಿಮ್ ರವರಿಗೆ ತೋರಿದ ಗೌರವ. ಅಷ್ಟೇ ಅಲ್ಲಾ ಕಾಲದುಂಗಿ ಹಾಗೂ ನೈನಿತಾಲ್ ನಡುವಿನ ರಸ್ತೆಗೆ “ಕಾರ್ಬೆಟ್ ರಸ್ತೆ” ಎಂದು ಕಾಲದುಂಗಿಯ ಪ್ರೌಢ ಶಾಲೆಗೆ “ಕಾರ್ಬೆಟ್ ಹೈಸ್ಕೂಲ್” ಎಂದು ಹೆಸರಿಟ್ಟಿದ್ದಾರೆ.

ಜಿಮ್ ಬರಿಯ ಶಿಕಾರಿಯನಷ್ಟೇ ಅಲ್ಲ ಯುದ್ಧರಂಗದಲ್ಲಿಯೂ ಸಹ ಬ್ರಿಟಿಷ್ ಪರವಾಗಿ ಫ್ರಾನ್ಸ್ ವಿರುದ್ಧ ಹಾಗೂ ಮಹಾಯುದ್ಧದಲ್ಲಿಯೂ ಕೂಡ ಹೋರಾಡಿ Indian Army Reserve of Officers, A Decoration of Voluntary officers, Officer of the British Empire, Companion of the Indian Empire ಎಂಬ ಬಿರುದುಗಳನ್ನು ದೊರೆಕಿಸಿಕೊಂಡು ಇವುಗಳ ಕಾಲದಿಂದ ಬಂದ ಅಷ್ಟೂ ಹಣವನ್ನು ತಮ್ಮ ಕುಮ್ಮಾವ್ ಪ್ರಾಂತ್ಯಕ್ಕೆ ನಗರಾಭಿವೃದ್ಧಿಗೆ ಕೊಟ್ಟುಬಿಡುತ್ತಾರೆ. ಸಾವಿರದ ಒಂಬೈನೂರ ಇಪ್ಪತೆರಡರಿಂದ ಒಂಬೈನೂರ ಮೂವತ್ತಾರನೇ (1922-1936) ಇಸವಿಯ ಮದ್ಯೆ ಕೀನ್ಯದ ಕಿಲಿಮಂಜಾರೋ ಪರ್ವತದ ಸೀಮೆಯಲ್ಲಿನ ದಂಗೇಕೋರರ ಉಪಟಳವನ್ನು ಹಡಗಿಸಿದುದ್ದಕೆ  ಅಲ್ಲಿನ ಸರಕಾರವು ಸ್ವಲ್ಪ ಭೂಮಿಯನ್ನು ಅವರ ಸೇವೆಯ ಗೌರವರ್ಥವಾಗಿ ಕೊಟ್ಟಿರುತ್ತದೆ.

ಜೀವನಪೂರ್ತಿ ಅವಿವಾಹಿತರಾಗಿ ಉಳಿದ ಜಿಮ್  ತನ್ನ ಸಹೋದರಿ ಮ್ಯಾಗಿಯ ಆರೈಕೆಯಲ್ಲಿಯೇ ಉಳಿದುಬಿಡುತ್ತಾರೆ. ಭಾರತಕ್ಕೆ ಸ್ವಾತಂತ್ರ ಬಂದು ಇಲ್ಲಿನ ಬಿಳಿಯರ ಮೇಲಿನ ಆಕ್ರಮಣ ಶುರುವಾಗಿ ಸಹೋದರಿಯ ಸಲಹೆಯ ಮೇರೆಗೆ ಕುಮ್ಮಾವ್ ಪ್ರಾಂತ್ಯದ ಜನರ ಒಪ್ಪಿಗೆಯ ಪಡೆದು  ಕೀನ್ಯದ ತಮ್ಮ ಪುಟ್ಟ ಪ್ರದೇಶಕ್ಕೆ ಹೊರಟೇ ಬಿಡುತ್ತಾರೆ. ಅಲ್ಲಿನ ನೈರಿ ಎಂಬ ಊರಿನಲ್ಲಿ  ನೆಲಸಿ ಅಲ್ಲಿನ ಆನೆ ಸಿಂಹಗಳ ಬಗ್ಗೆ ಅಧ್ಯಯನ ಶುರುಮಾಡುತ್ತಾರೆ. ತಮಗೆ ದೊರೆತ ಜಾಗದಲ್ಲಿ ಟ್ರೀಹೌಸ್ ಎಂಬ ವಿಶ್ರಾಂತಿ ಧಾಮವನ್ನು ನಿರ್ವಹಿಸುತ್ತಿದಾಗ ಲಂಡನ್ ರಾಣಿ ವಿಕ್ಟೋರಿಯಾ ಇವರ ಬಗ್ಗೆ ಅರಿತು ಆ ಜಾಗಕ್ಕೆ ಅತಿಥಿಯಾಗಿ ತನ್ನ ಗಂಡನೊಟ್ಟಿಗೆ ಬರುತ್ತಾಳೆ. ರಾಣಿಯ ಗೌರವರ್ಥವಾಗಿ ಜಿಮ್ ಇಡೀ ರಾತ್ರಿ ತನ್ನ ಬಂದುಕನ್ನು ಹಿಡಿದು ಅವರ ರಕ್ಷಣೆಗಾಗಿ ಕಾವಲು ಕಾಯುತ್ತಾರೆ.

ಈಗೆ ಜಿಮ್ ತನ್ನ ಕೊನೆಯ ದಿನಗಳನ್ನು ಕೀನ್ಯದಲ್ಲಿ ಕಳೆದು ಸಾವಿರದ ಒಂಬೈನೂರ ಐವತೈದು ಏಪ್ರಿಲ್ 19 (19-04-1955) ರಂದು ಹೃದಯಾಘಾತದಿಂದ ಸಾವನಪ್ಪುತ್ತಾರೆ.

ಇಂದು ಜಿಮ್ ಕಾರ್ಬೆಟ್ ನೆನಪಿಗಾಗಿ ಅವರು ಬರೆದ ಅನೇಕ ಕೃತಿಗಳು ಇಂದಿನ ಪೀಳಿಗೆಗೆ ವನ್ಯಮೃಗಗಳ ಹಾಗೂ ವನ್ಯ ಸಂಪತ್ತನ್ನು ಪರಿಚಯಿಸುತ್ತದೆ. ಹಾಗೆ ಕಾಲದುಂಗಿಯ ಹಳೆಯ ಪೀಳಿಗೆಯ ಜನರು ತಮ್ಮ ಪ್ರೀತಿಯ ಕಾರ್ಪೆಟ್ ಸಾಬ್ ಮತ್ತೆ ಬರುವನೆಂದು ಈಗಲೂ ಮುಗ್ದತೆಯಿಂದ  ಕಾಯುತ್ತಿದಾರೆಂದರೆ ಜಿಮ್ ಎಷ್ಟರ ಮಟ್ಟಿಗೆ ಅವರ ಹೃದಯದಲ್ಲಿ ಮನೆ ಮಾಡಿದ್ದರೆಂದು ನೀವೇ ಊಹಿಸಿ.

ಈ ಲೇಖನ ಅವರ ಮೇಲಿನ ಪ್ರೀತಿ ಅಭಿಮಾನದಿಂದ ಬರೆದುದ್ದು. ಓದುಗರು ಶ್ರೀಯುತ ತೇಜಸ್ವಿ ಹಾಗೂ ಟಿ ಎಸ್ ವಿವೇಕಾನಂದರು ಅನುವಾದಿಸಿದ ಕಥಾ ಸರಣಿಯನ್ನು ಓದಿದರೆ ನಿಜವಾಗಲೂ ಪ್ರಾಣಿಸಂಕುಲ ಹಾಗೂ ವನ್ಯಸಂಕುಲದ  ಮೇಲಿನ ಪ್ರೀತಿ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲಾ!

ಇವರ ಮುಂದಿನ ಪೀಳಿಗೆಯಲ್ಲಿ ಇವರದೇ ಮಾದರಿಯಲ್ಲಿ ಬರುವ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಹೆಸರು ಮಾಡಿದವರಿನ್ನೊಬ್ಬರು ಇದ್ದಾರೆ ಅವರೇ “ಕೆನ್ನತ್ ಅಂಡೆರ್ಸನ್” ಮುಂದಿನ ಲೇಖನದಲ್ಲಿ ಅವರ ಬಗ್ಗೆ ತಿಳಿದದ್ದು ಬರೆಯುತ್ತೇನೆ.

ವಂದನೆಗಳು

ಕು ಶಿ ಚಂದ್ರಶೇಖರ್

Related post