ಸಹಜಾತ

ಅಕ್ಕನ ಕಂಡರೆ ಅದೆಷ್ಟು ಪ್ರೀತಿ ಇವಗೆ
ಅವಳ ಸೆರಗ ಹಿಡಿದು ಸುತ್ತಾಡುವಗೆ
ಭೂ ತಾಯಿಯ ತಮ್ಮ ಚಂದಿರಗೆ

ನೀಲಾಕಾಶದ ಒಡೆಯನು
ಪಡುವಣದಿ ಮೂಡಿದವನು
ಇವನೇ ಬಾಲ ಚಂದಿರನು

ದಿನ ದಿನವೂ ಅರಳಿ ನಗುವವನು
ಪಕ್ಷಕ್ಕೊಮ್ಮೆ ಬೆಳಗುವವನು
ಪೌರ್ಣಮಿಯ ಚಂದಿರನು

ಇವನ ಕಂಡ ಸಮುದ್ರರಾಜ
ಭರತದ ಅಲೆಗಳಲಿ ಜಿಗಿದಾಡಿದ
ಇಳಿತ ಸಪ್ಪಳದಿ ತೊನೆದಾಡಿದ

ವಸುಂಧರೆಯ ಪ್ರಿಯ ಸಹೋದರ
ಪ್ರೀತಿಯ ಚಂದಿರ ನೀನೆಷ್ಟು ಸುಂದರ…

ಸಿ.ಎನ್. ಮಹೇಶ್

Related post