ಸಹ್ಯಾದ್ರಿ ವನ ಉಳಿಸಿಕೊಳ್ಳಲು ಅಭಿಯಾನ

ಸಹ್ಯಾದ್ರಿ ವನ ಉಳಿಸಿಕೊಳ್ಳಲು ಅಭಿಯಾನ

ಬೆಂಗಳೂರು ಜ್ಞಾನ ಭಾರತಿ ಪುಣ್ಯಧಾಮವಾಗಿರುವುದು ನಮ್ಮೆಲ್ಲರ ಸುಕ್ರುತ. ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದ ಬಯೋ ಪಾರ್ಕ್ ಆಮ್ಲಜನಕದ ಕಣಜವಾಗಿ, ಇಂಗಾಲ ಹೀರಿಕೊಳ್ಳುವ ಕೆಲಸ ಮಾಡುತ್ತಿದೆ. ನೀರಿನ ಆಸರೆಯೂ ಹಾಗೂ ಅಂತರ್ಜಲ ಮರುಪೂರಣ ಕೇಂದ್ರವೂ ಆಗಿದ್ದು ಬೆಂಗಳೂರಿಗರ ಸೌಭಾಗ್ಯ. ಹೈಕೋರ್ಟ್ ನಿರೀಕ್ಷೆಯಂತೆ ಇಕೋತೆರಪಿ ಕಾರ್ಯಕ್ರಮ ಡಾ.ಯಲ್ಲಪ್ಪ ರೆಡ್ಡಿಯವರಿಂದ ನಡೆಯುತ್ತಾ ವಿಶೇಷ ಚೇತನ ಮಕ್ಕಳ ಆಶಾದೀಪವಾಗಿದೆ.

ಜ್ಞಾನ ಭಾರತಿಯಲ್ಲಿ ಲಕ್ಷಾಂತರ ಮರಗಳನ್ನು ಬೆಳೆಸಲು ಸ್ವಾಟ್, ಗ್ರೀನ್ಸ್ ಆರ್ಮಿ ಫೋರ್ಸ್, ಮಿಡಿತ ಫೌಂಡೇಶನ್, ಜೀವನ್ಮುಕ್ತಿ, ಅದಮ್ಯ ಚೇತನ, ನೆರವು, ಯೂತ್ ಫಾರ್ ಸೇವಾ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳು ಜತೆಗೂಡಿ ಎರಡು ದಶಕಗಳಿಂದ ನಿರ್ಮಾಣವಾಗಿದೆ ಜೈವಿಕ ಅರಣ್ಯ (Natural indigenous diversified Forest). ಮಾನ್ಯ ಯಲ್ಲಪ್ಪ ರೆಡ್ಡಿಯವರು ಆರಂಭಿಸಿದ್ದನ್ನು ಪ್ರಾ. ಟಿ.ಜೆ.ರೇಣುಕಾ ಪ್ರಸಾದ್ ರವರು ಮುಂದುವರಿಸಿಕೊಂಡು ಹೋಗಿದ್ದಾರೆ. ನೂರಾರು ಎಕರೆ ನಗರದಲ್ಲಿ ಅತಿ ದೊಡ್ಡ ಜೈವಿಕ ವೈವಿಧ್ಯ ವನ ಆಗಿದೆ‌. ನೂರಾರು ಜಾತಿಯ ಪಕ್ಷಿಗಳು ಹಾಗೂ ದುಂಬಿಗಳು ತುಂಬಿಕೊಳ್ಳುತ್ತಿರುವುದೇ ಸಾಕ್ಷಿ. ಈಗ ಇದನ್ನು ಕಾಂಕ್ರೀಟ್ ಕಾಡು ಮಾಡಲು ಹವಣಿಸುತ್ತಿದ್ದಾರೆ. ಪಂಚವಟಿ ಹಾಗೂ ಪಂಚವಲ್ಕಲದಲ್ಲಿ ಆಲದ ಮರಗಳು ತುಂಬಿವೆ. ಎರಡು ಕೃಷ್ಣ ಆಲ (ficus Krishnae) ಇರುವುದೂ ವಿಶೇಷ. ಭಾರತದ ವಿಶ್ವವಿದ್ಯಾಲಯಗಳಲ್ಲಿಯೇ ಮೊದಲಾಗಿದೆ ಬಯೋಡೈವರ್ಸಿಟಿ ಪಾರ್ಕ್. ಹೈಕೋರ್ಟ್ ನಿರೀಕ್ಷೆಯಂತೆ ಜಿಯೋ ಪಾರ್ಕ್ ಅಭಿವೃದ್ಧಿಯಾಗುತ್ತಿದೆ. ಕಟ್ಟೆ, ಕಲ್ಯಾಣಿಗಳಿಂದ ತುಂಬಿ ಬಯೋ-ಜಿಯೋ-ಹೈಡ್ರೋ ಪಾರ್ಕ್ ಆಗಿದೆ. ಈ ಎಲ್ಲವನ್ನೂ ನ್ಯಾಕ್ ಪರಿಶೀಲಿಸಿ ಅತ್ಯುತ್ತಮ ಗ್ರೇಡ್ ನೀಡಿದೆ.

ಇಂತಹ‌ ದಿವ್ಯ ಕ್ಷೇತ್ರವನ್ನು ಹಿಂದಿನ ಆಡಳಿತ ವರ್ಗ ಹಾಳುಮಾಡುವ ಪ್ರವ್ರತ್ತಿ ಪ್ರಾರಂಭವಾಗಿದೆ. ವಿಶ್ವವಿದ್ಯಾಲಯಕ್ಕಾಗಿ ಅರಣ್ಯ ಇಲಾಖೆಯಿಂದ ಹಾಗೂ ಇತರೇ ಜಾಗವನ್ನು ಲೀಸ್ ಮಾಡಿ ಕೊಡಲಾಗಿದ್ದು, ಇತರೇ ಸಂಸ್ಥೆಗಳಿಗೆ ಮರು ಲೀಸ್ ನೋಂದಣಿ ಆಗುತ್ತಿದೆ. ಇತ್ತೀಚೆಗೆ 2020ನೇ ಇಸವಿಯಲ್ಲಿ ಬೆಳೆದು ನಿಂತ ಬಯೋ ಪಾರ್ಕ್ ಭಾಗ 1ನ್ನು ದಿಲ್ಲಿಯ ಯೋಗ ವಿಜ್ಞಾನ ಸಂಸ್ಥೆ, ಕೇಂದ್ರೀಯ ವಿಶ್ವವಿದ್ಯಾಲಯ, ನ್ಯಾಕ್, ಸಿಬಿಎಸ್ ಸಿ ಮುಂತಾದ ಸಂಸ್ಥೆಗಳಿಗೆ ನೋಂದಣಿ ಕೊಟ್ಟಿದ್ದನ್ನು ಪ್ರತಿಭಟಿಸಿ, ಪಿಐಎಲ್ ಮೂಲಕ ತಡೆಯಾಜ್ಞೆ ತಂದು ರಕ್ಷಿಸಲಾಯಿತು. ಆದಾಗ್ಯೂ ನೋಂದಣಿಗಳು ರದ್ದಾಗಿಲ್ಲ.

ಇಷ್ಟೇ ಅಲ್ಲದೆ ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಭಾಗವಾಗಿದ್ದ ಯುಪಿಸಿಸಿಗಾಗಿ ಐವತ್ತು ಎಕರೆಯಲ್ಲಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿತ್ತು. ಇಲ್ಲಿ ದಾನಿಗಳು ಸಹಾಯದಿಂದ ಹಾಗೂ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಿದ್ದ ಬಯೋ ಪಾರ್ಕ್ ಭಾಗ 8 ಸಹ್ಯಾದ್ರಿ ವನವಾಗಿತ್ತು ಮುಂದುವರೆದು ಈಗ ಯುಪಿಸಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬೇರೆಯಾಗಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಯುವಿಸಿಇಗೆ ಐವತ್ತು ಎಕರೆ ಕೊಡದಿರಲು‌ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟಿಸಿ ಉನ್ನತ ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದರು. ಆದಾಗ್ಯೂ, ಈಗ ಅಲ್ಲಿ ಜೆಸಿಬಿಗಳು ಕೆಲಸ ಪ್ರಾರಂಭಿಸಿದ್ದು ಅಲ್ಲಿ ನಿರ್ಮಾಣ ಆಗಿರುವ ಸಹ್ಯಾದ್ರಿ ವನ ನಾಶವಾಗುತ್ತದೆ. ಇಂತಹ ಹಸಿರು ಮತ್ತು ಉಸಿರು ಹಾಗೂ ನೀರಿನ ನೆಲೆಯ ಕಣಿವೆಗಳು ಪ್ರಾಣದಾಯಕ ಆಗಿ ಉಳಿಯಲೇ ಬೇಕಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ 150ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಆಗಿದ್ದು, ಐದು ಸಾವಿರ ಚದರ ಮೀಟರ್ ಮೀರಿದ ದೊಡ್ಡ ಕಟ್ಟಡಗಳನ್ನು ಪಟ್ಟಿ ಮಾಡವಲಾಗಿದ್ದು, ಅವುಗಳನ್ನು ಒಂದೆರೆಡು ಅಂತಸ್ತು ಹೆಚ್ಚಿಸಿದರೆ ಮತ್ತೊಂದು ವಿಶ್ವವಿದ್ಯಾಲಯವನ್ನೇ ನಿರ್ಮಾಣ ಮಾಡಲು ಸಾಧ್ಯ.

ಇತರೇ ಸಂಸ್ಥೆಗಳಿಗೆ ನೆಪವೊಡ್ಡಿ ಕಾಂಕ್ರೀಟಿಕರಣ ಮಾಡಿ ಜೈವಿಕ ವೈವಿಧ್ಯವನ ಹಾಳು ಮಾಡಲು ಹೊರಟಿರುವುದು ಖಂಡನೀಯ. ಪ್ರಾಣವಾಯು ಹಾಗೂ ಗುಟುಕು ನೀರಿಗೇ ಸಂಚಕಾರ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತಡೆಹಿಡಿದು ಸೂಕ್ತ ಆದೇಶಗಳನ್ನು ಪಾಲಿಸಿ ನಮ್ಮ ಸಹ್ಯಾದ್ರಿ ವನ ಸಂರಕ್ಷಿಸಬೇಕು.

ಪ್ರಕಟಣೆ : ಸಾಹಿತ್ಯಮೈತ್ರಿ ತಂಡ

Related post

24 Comments

 • Save Bangalore University
  Why simply destroying everything unnecessaryly 😡😡

 • Save Bangalore University, I oppose the decision

 • Save bangalore university

 • Save Bangalore University, we only have one area for telling nature gifted by God. Already Bangalore we see many places is destroyed. This bio park helping many students and scholars to carry out many research in many aspects of biodiversity. Despite these useful things. Please save this bio park as it’s needed for future generation.

 • Save Bangalore University

 • Save Bengaluru university bio park 🙏☹️☘️

 • It’s always said, when you can’t create something don’t attempt to destroy something. It’s irony that humans has to remind eachother everytime such cruel acts occur. We the residents staying close in and around Nagarbhavi are so lucky to have Bangalore University campus close to our are which is the natural Oxygen Cylinder and whatever happens we ppl have to stand up and give everything that we have to protect Bangalore University and possibly nurture it where possible… Let’s all stand United and raise our voices

 • Please do save Bengaluru University,
  We have only bio park left around us.
  “SAVE BENGALURU UNIVERSITY”

 • Save Bio

 • Save Bengaluru University from all Unnatural Activities.
  Already we lost Bengaluru, Atleast keep this location as it is, Don’t Do any upgrade in this locality let it be

 • #SaveBangaloreUniversity, we have been destroying the nature and greenery of Bangalore city by saying development as a reason.

  Bangalore University is one of rare place, where we can still find peacocks and other birds living their lives. Let’s not destroy the home of these birds and the healthy atmosphere we have been blessed with. Instead, let’s plan to preserve it.

  I strongly support to #SaveBangaloreUniversity🙏🙏🙏🙏

 • Save Bangalore University campus. plant more trees.

 • Save BANGALORE UNIVERSITY AND SAVE BANGALORE

 • Bengaluru University has a variety of plant kingdom, the bio park and its nature has a good results on reducing global warming.

  Being a farmer Student of BU, I stand and strongly support to #SaveBangaloreUniversity ❤💛

 • Bangalore university is the only green blanket left on the western part of Bangalore .. destroying it will mean more temperatures rising and pollution engulfing the whole area . We have to stop this at any cost

 • Even now government and departments are not serious about saving forest area which is located in Bangalore University… Almost in the name development everything is vanished it’s high time to take action on this ..

 • Pls save Bangalore University

 • Human greed has no boundaries, destroying everything to make money, but what is the use of this money ,if you don’t get timely rains , oxygen to breathe , can’t understand the logic behind this destruction, our forefathers were intelligent enough to safeguard these forests , with education we are becoming illiterate

 • Please save the biopark and lungs of Bangalore

 • Please save forest area in Bangalore University

 • Namma Bengaluru is now facing severe environmental crisis like drought, hot climate, less rainfall, ground water levels have dropped. Thanks to concrete jungle and unscientific development of roads, flyovers, underpass…which have contributed for uprooting and cutting of trees🌳🌲🌳.
  🙏Wake-up Bengaluruians there are only few lung spaces left in the city – like Cubbon Park, Lalbagh and Namma Bengaluru University -which is in Danger…!!!
  Save Trees 🎄 🌳, Save Environment and Save Mother Earth 🌍

 • Please do save Bengaluru University, Bangalore university is the only green blanket left around this part of Bengaluru. Let’s not destroy nature’s home for birds and the reason for healthy atmosphere we are blessed with.
  “SAVE BENGALURU UNIVERSITY”

 • City which was called as Garden city is already changed as concrete city, we have very few places where we can get ample oxygen like Bangalore University surrounded by variety of flora and fauna which is indeed need for current and future generation, request to kindly save this and safeguard ourselves from suffering from various chronic diseases!

 • Pls save Bangalore University

Leave a Reply

Your email address will not be published. Required fields are marked *