ಸಾಹಿತ್ಯಮೈತ್ರಿಗೆ ಶುಭಾಶಯಗಳು

ಸಾಹಿತ್ಯ ಮೈತ್ರಿ – ಇ-ಪತ್ತಿಕೆಯ ಮೊದಲ ವಾರ್ಷಿಕೋತ್ಸವಕ್ಕೆ ಶುಭಾಶಯಗಳು. ವಾರ್ಷಿಕೋತ್ಸವ ಎಂದು ಏಕೆ ಹೇಳಿದೆ ಎಂದರೆ, ‘ಸಾಹಿತ್ಯ ಮೈತ್ರಿ’ ಪ್ರಾರಂಭವಾದಂದಿನಿಂದಲೂ ಸೊಗಸಾದ ಲೇಖನ ಸರಣಿಗಳು, ಕಾದಂಬರಿ, ಕಥೆಗಳು.. ಇನ್ನಿತರ ‘ಜ್ಞಾನ ಮೈತ್ರಿ’ಯನ್ನು ಕಾಪಿಡುವ ಬರಹಗಳ ಉತ್ಸವವೇ ಜರುಗುತ್ತಿದೆ.

‘ಸಾಹಿತ್ಯ ಮೈತ್ರಿ’ ಎಂಬ ಹೆಸರು ಬಂದದ್ದೂ ಒಂದು ಕೌತುಕವೇ. ಎಷ್ಟೋ ಹೆಸರುಗಳನ್ನು ಗುಡ್ಡೆ ಹಾಕಿಕೊಂಡು ಯಾವುದು ಸೂಕ್ತ ಎಂದು ತಲೆಬಿಸಿ ಮಾಡಿಕೊಳ್ಳುತ್ತಿರುವಾಗ ಅದೊಂದು ದಿನ ‘ಸಾಹಿತ್ಯ ಮೈತ್ರಿ’ ಹೆಸರು ಸೂಚಿಸಿದ್ದು ಕುಮಾರ್ (ಸಹೋದರ). ಹೆಸರು ಆಪ್ತವೆನಿಸಿತು. ಹೆಚ್.ಎಸ್.ವೆಂಕಟೇಶ ಮೂರ್ತಿಯವರು ಪತ್ರಿಕೆಯನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಿದರು. ಅಂದಿನಿಂದ ಇಂದಿನವರೆಗೂ ಬರಹಗಳ ಉತ್ಸವವೇ ಇಲ್ಲಿ ಸಾಗುತ್ತಿದೆ.

ಈಗಾಗಲೇ ಹೆಸರು ಮಾಡಿರುವ ಬರಹಗಾರರು ಈ ಪತ್ರಿಕೆಗೆ ಬರೆದು ಬೆನ್ನುತಟ್ಟಿದ್ದಾರೆ. ಎಲೆಮರೆಯ ಬರಹಗಾರರನ್ನು ಮೈತ್ರಿ ತಂಡವು ಗುರುತಿಸಿ ವೇದಿಕೆಯನ್ನು ಒದಗಿಸಿದೆ. ಹೊಸ ಬರಹಗಾರರಿಗೆ ತಾವು ಕೊಟ್ಟು ಹುಮ್ಮಸ್ಸು ನೀಡಿದೆ.

ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಶ್ರೇಷ್ಠ ಬರಹಗಾರರಾದ ಡಾ. ಅರಕಲಗೂಡು ನೀಲಕಂಠ ಮೂರ್ತಿ, ಪತ್ರಕರ್ತರು, ಬರಹಗಾರರಾದ ಕಗ್ಗೆರೆ ಪ್ರಕಾಶ್, ಪರಿಸರ ತಜ್ಞ ಕಲ್ಗುಂಡಿ ನವೀನ್, ಖ್ಯಾತ ಕಾದಂಬರಿಕಾರರಾದ ಯತಿರಾಜ್ ವೀರಾಂಬುಧಿ, ಹಿಂದಿ ಚಿತ್ರರಂಗದ ಇತಿಹಾಸದ ಪುಟಗಳನ್ನು ನವಿರಾಗಿ ತೆರೆದಿಡುವ ಡಿ.ಎನ್.ಸುರೇಶ್, ಅಶ್ವಶಕ್ತಿಯ ಬರಹಗಳ ಸಜ್ಜನ ಮಿತ್ರರಾದ ಪರಮೇಶ್ವರಪ್ಪ ಕುದುರಿಯವರು, ಚಂದದ ಕವನಗಳನ್ನು ಬರೆಯುವ ದಿವ್ಯ ಎಲ್.ಎನ್. ಸ್ವಾಮಿ, ಪುಟ್ಟ ಪುಟ್ಟ ಸಾಲುಗಳಲ್ಲಿ ಅನೇಕ ಭಾವಗಳನ್ನು ಹಿಡಿದಿಡುವ ಸುಕೃತಿ ಕಂದ, ಲೀಲಾಜಾಲದಿಂದ ಅಕ್ಷರಗಳೊಂದಿಗೆ ಆಡುವ ಸೌಜನ್ಯ ದತ್ತರಾಜ್, ತುಂಕೂರು ಸಂಕೇತ್, ಎಳೆಯ ಮನಸಿನ ಅನಂತ ಕುಣಿಗಲ್…. ಹೀಗೆ ಇನ್ನೂ ಸಾಕಷ್ಟು ಹಿರಿ-ಕಿರಿಯ ಬರಹಗಾರರು ನಮ್ಮ ಮೈತ್ರಿಯ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೈತ್ರಿಪಡೆ ಇದೇ ಉತ್ಸಾಹದಿಂದ ಮುನ್ನಡೆಯುತ್ತಿರಲಿ. ಮೈತ್ರಿ ಪಡೆಯ ಪ್ರತ್ಯಕ್ಷ, ಪರೋಕ್ಷ ಕಾರಣಕರ್ತರಿಗೆ ನನ್ನ ನಮನಗಳು.

ಎಲ್ಲರ ಮನಗಳಲ್ಲು ಮೈತ್ರಿ ಸೇತುವೆ ಆಗಿರುವ ನಮ್ಮ ‘ಸಾಹಿತ್ಯ ಮೈತ್ರಿ’ ಪತ್ರಿಕೆಯ ಮೊದಲ ಹುಟ್ಟುಹಬ್ಬದ ಶುಭಾಶಯಗಳು.

ಸದಾ ತಾವೆಲ್ಲರು ಮೈತ್ರಿ ಬಳಗದೊಂದಿಗೆ ಹೀಗೆಯೇ ಮೈತ್ರಿ ನಿಭಾಯಿಸಲು ಕೋರಿಕೆ.

ನಿಕಿತಾ ಅಡವೀಶಯ್ಯ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಒಂದೇ ಒಂದು ವರ್ಷದಲ್ಲಿ ಈ ಸಾಧನೆ ಆಶ್ಚರ್ಯದೊಡನೆ ಆನಂದದ ಓಕುಳಿಯನ್ನು ಮೈಮೇಲೆ ಚಿಮ್ಮಿಸುತ್ತದೆ. ವೈವಿಧ್ಯಮಯ ಲೇಖನಗಳು, ಮನಮುಟ್ಟುವ ಕವನಗಳು, ಕಥೆಗಳು ಎಲ್ಲವೂ ಪ್ರಬುದ್ಧತೆಗೆ ಸಾಕ್ಷಿಯಾಗಿ ಪ್ರಕಟವಾಗುತ್ತಿವೆ. ಮತ್ತು ಪ್ರತಿ ವಾರ ವೇಳೆಗೆ ಸರಿಯಾಗಿ ಅಚ್ಚಾಗಿ ಬರುವ ಈ ಔತಣಕ್ಕಾಗಿ ಎದುರು ನೋಡುವಂತಿದೆ. ಸುಂದರ ಚಿತ್ರಗಳ ಹಾಗೂ ಫೋಟೋ ಆಯ್ಕೆ ಕೂಡ ಶ್ಲಾಘನೀಯ. ಎಲ್ಲಕ್ಕಿಂತ ಮಿಗಿಲಾಗಿ ‘ಸಾಹಿತ್ಯ’ವನ್ನು ಹೃದಯ ತುಂಬಿದ ‘ಮೈತ್ರಿ’ಯೊಡನೆ ಬೆರೆಸಿ ಉಣಲಿಕ್ಕುತ್ತಿರುವ ‘ಸಾಹಿತ್ಯ ಮೈತ್ರಿ’ಗೆ ಯುಗಾದಿ ಹಬ್ಬದ ಮತ್ತು ವರ್ಷದ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ,

Related post

Leave a Reply

Your email address will not be published. Required fields are marked *