ಸಿದ್ದಗಂಗೆಯ ಸಿದ್ಧಪುರುಷ

ಸಿದ್ದಗಂಗೆಯ ಸಿದ್ಧಪುರುಷ

ಶರಣು ಬಂದೆನು ನಿಮಗೆ ಶ್ರೀ ಶಿವಕುಮಾರರೇ !
ತುಮಕೂರು ಸಿದ್ದಗಂಗೆಯ ಬೆಳಗಿಸಿದವರೇ!!
ಜಗವೆಲ್ಲಾ ಕೊಂಡಾಡುವ ಪುಣ್ಯಾತ್ಮರೇ!
ಜ್ಞಾನ ಕರ್ಮ ಧರ್ಮಗಳ ಆರಾಧಕರೇ||

ಹಣೆಯಲ್ಲಿ ವಿಭೂತಿ ಧರಿಸಿ
ಕೊರಳಲ್ಲಿ ರುದ್ರಾಕ್ಷಿಯ ಧರಿಸೀ|
ದಾಸೋಹಕ್ಕಾಗೀ ಬೆನ್ನು ಬಾಗಿಸಿ
ಶಿವ ಧರೆಗೆ ಕಳಿಸಿದ ಸನ್ಯಾಸೀ||

ಕರ್ನಾಟಕದ ರತ್ನಾಕರರು ನೀವು
ಗೌರವ ಡಾಕ್ಟರೇಟ್ ಲಭಿಸಿದವು|
ಆಧುನಿಕ ಬಸವಣ್ಣನವರೇ ನೀವು
ನಮ್ಮಯ ದೇವಮಾನವರು ನೀವು||

ನಾಗಶಯನನ ಪ್ರಪೌತ್ರರ ಸೇವಕರು
ಗಂಗಮ್ಮ ಹೊನ್ನಾಪುರದ ಕುಲಪುತ್ರರು|
ಬನದ ಹುಣ್ಣಿಮೆಯಲಿ ಲಿಂಗೈಕ್ಯ ರಾದವರು
ನಮ್ಮ ಸಿದ್ದಗಂಗೆಯ ಸಿದ್ಧಪುರುಷರು||

ನಾಗರಾಜು.ಹ
ಬೆಂಗಳೂರು

Related post

Leave a Reply

Your email address will not be published. Required fields are marked *