ಸಿಹಿಭಾವದ ನೋಟ
ನೋಡುವಾ ನೋಟಗಳು
ಒಂದಾಗೆ ಸವಿಭಾವ..!
ನುಡಿಯುವಾ ಮಾತಿನಲಿ..
ಜೇನಿರಲು ಸಿಹಿಭಾವ !!
ಕುಸುಮಗಳ ಮೇಲಿರುವ
ಇಬ್ಬನಿಯ ಒಲವಿರಲಿ..!
ಮನವನುಲ್ಲಸಿಪ ನುಡಿ..
ಹೊತ್ತು ಜಾರಿಸದಿರಲಿ!!
ಸವಿನುಡಿಯ ಭಾವವಿರೆ
ಮೌನದಾ ಪರದೆಯಲಿ..!
ಬದುಕೆಂದಿಗೂ ಚೆನ್ನ..
ತಾನೊಲವಿನೊರತೆಯಲಿ !!
ನವಭಾವ ಜೀವನದಿ
ಬತ್ತುವುದೆ ಅನುರಾಗ..!
ಪ್ರೀತಿಯಿರೆ ಅನುಗಾಲ..
ಬಾಳದುವೆ ಶುಭಯೋಗ !!

ಸುಮನಾ ರಮಾನಂದ
ಬೆಳಗಾವಿ