ಸಿಹಿ ವಿಷ-ಕೃತಕ ಸಿಹಿಯ ಕಹಿ ಸತ್ಯ

ಕೃತಕ ಸಿಹಿಅಸ್ಪರ್‍ಟೇಮ್

ಬೆಲ್ಲದ ಸಿಹಿ ಗೊತ್ತು, ಸಕ್ಕರೆ ಸಿಹಿ ಗೊತ್ತು ಅದರೆ ಇದೇನು ಕೃತಕ ಸಿಹಿಯ ಬಗ್ಗೆ ಹೇಳುತ್ತಿದ್ದಾರಲ್ಲ! ಎಂದು ಆಶ್ಚರ್ಯವಾಗುತ್ತಿರಬಹುದು ಅಲ್ಲವೇ? ಹೌದು ಹೀಗೊಂದು ಕೃತಕ ಸಿಹಿಯನ್ನು 50 ವರ್ಷದ ಹಿಂದೆ ಅಂದರೆ 1965 ರಲ್ಲಿ ಕಂಡು ಹಿಡಿಯಲಾಗಿತ್ತಾದರೂ ಇದು ಬಳಕೆಗೆ ಬಂದಿದ್ದು 1985 ರ ನಂತರವೇ! ಇದರ ಮೇಲೆ ನೆಡೆದ ಸುಮಾರು 25 ಸಂಶೋಧನೆಗಳ ಪಲಿತಾಂಶವನ್ನು ಕೂಲಂಕುಶವಾಗಿ ಪರಿಶಿಲಿಸಿ ಅನೇಕ ಪ್ರಯೋಗಗಳನ್ನು ಮಾಡಿ ಇದು ಸುರಕ್ಷಿತ ಎಂದು ಸಾಬೀತಾದ ನಂತರವೇ ಅಮೇರಿಕಾದ ಆಹಾರ ಹಾಗು ಔಷಧ ಪ್ರಾಧಿಕಾರ (US Food and Drug Authority) ಇದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅನುಮತಿ ನಿಡಿತು. ಈ ರಾಸಾಯನಿಕ ಕೃತಕ ಸಿಹಿಯ ಹೆಸರೇ “ಅಸ್ಪರ್‍ಟೇಮ್” 1985ರ ನಂತರ ಅಮೇರಿಕಾದ ಆಹಾರ ಹಾಗು ಔಷಧ ಪ್ರಾಧಿಕಾರ ಇದನ್ನು ತಂಪುಪಾನೀಯಗಳಲ್ಲಿ ಉಪಯೋಗಿಸಲು ಅನುಮತಿ ನೀಡಿತು. 1996 ರ ನಂತರ ಇದರ ಮೇಲ್ಲಿದ್ದ ಎಲ್ಲಾ ನಿರ್ಭಂಧವನ್ನು ತೆಗೆದುಹಾಕಿ ಇದನ್ನು ಎಲ್ಲಾ ಆಹಾರ ಪದಾರ್ಥಗಳಲ್ಲು ಉಪಯೋಗಿಸಲು ಅನುಮತಿ ನೀಡಿತು.

ಇದನ್ನು 1965 ರಲ್ಲಿ ಜೇಮ್ಸ್ ಎಂ ಸ್ಕಾಲ್‍ಟರ್ ಎಂಬ ರಾಸಾಯನಿಕ ಶಾಸ್ತ್ರಜ್ನ ಕಂಡುಹಿಡಿದ. ಅವನು ಕಂಡು ಹಿಡಿಯ ಹೊರಟಿದ್ದು ಹೊಟ್ಟೆಯಲ್ಲಾಗುವ ವೃಣವನ್ನು ಕಡಿಮೆ ಮಾಡುವ ಗ್ಯಾಸ್ಟ್ರಿನ್ ಎಂಬ ಹಾರ್ಮೋನ್‍ ನ್ನು, ಆದರೆ ಕಂಡುಹಿಡಿದದ್ದು ಈ “ಅಸ್ಪರ್‍ಟೇಮ್‍” ನನ್ನು! ಅದೂ ಆಕಸ್ಮಿಕವಾಗಿ, ಇದರ ಬಗ್ಗೆ ಪ್ರಯೋಗ ಮಾಡುತ್ತಿದ್ದಾಗ ಇವನು ಕಂಡು ಹಿಡಿದ್ದಿದ್ದ ರಾಸಾಯನಿಕ ಬೆರಳಿಗೆ ಅಂಟಿತ್ತು, ಅಕಸ್ಮಾತ್‍ ಆಗಿ ಅದನ್ನು ನೆಕ್ಕಿದ ಇವನಿಗೆ ಎಷ್ಟು ಹೊತ್ತಾದರೂ ನಾಲಗೆಯ ಮೇಲೆ ಅದರ ಸಿಹಿ ಹೋಗದೇ ಇರುವುದ್ದನ್ನು ಗಮಿನಿಸಿದ ಇವನು ಚಕಿತನಾದನು. ಅದರ ಮೇಲೆ ಪ್ರಯೋಗ ಮುಂದುವರೆಸಿದ ಇವನಿಗೆ ಸಿಕ್ಕ ಈ ರಾಸಾಯನಿಕವೇ ಈ “ಅಸ್ಪರ್‍ಟೇಮ್”. ಮುಂದೊಂದು ದಿನ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ವರದಾನವಾಗುತದೆ ಎಂದು ಯಾರು ಊಹಿಸಿರಲಿಲ್ಲ!

ನೀವೆಲ್ಲ ಕುಡಿಯುವ ತಂಪು ಪಾನೀಯ, ತಿನ್ನುವ ಚುಯಿಂಗ್ ಗಮ್ ಸಿಹಿಯಗಿರಲು ಕಾರಣ ಸಕ್ಕರೆ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಅದರಲ್ಲಿರುವುದು “ಅಸ್ಪರ್‍ಟೇಮ್” ಎಂಬ ಸಕ್ಕರೆಗೆ ಬದಲಾಗಿ ಉಪಯೊಗಿಸುವ ಕೃತಕ ಸಿಹಿ. ಇದು ಸಾಮಾನ್ಯ ಸಕ್ಕರೆಗಿಂತ 200 ಪಟ್ಟು ಅದಿಕ ಸಿಹಿಯಾಗಿರುತ್ತದೆ. ಅಂದರೆ 1 ಮಿಲಿಗ್ರಾಂ “ಅಸ್ಪರ್‍ಟೇಮ್” 200 ಮಿಲೀ ಗ್ರಾಂ ಸಾಮಾನ್ಯ ಸಕ್ಕರೆಗೆ ಸಮ. ಸಾವಿರಾರು ಲೀಟರ್ ತಂಪುಪಾನೀಯ ತಯರಿಸಲು ಟನ್ ಗಟ್ಟಲೆ ಸಕ್ಕರೆ ಉಪಯೋಗಿಸುವ ಬದಲು ಕೆಜಿಗಟ್ಟಲೆ ಈ “ಅಸ್ಪರ್‍ಟೇಮ್” ಎಂಬ ಕೃತಕ ಸಿಹಿಯನ್ನು ಉಪಯೊಗಿಸುತ್ತಾರೆ. ಸಕ್ಕರೆ ಖಾಯಿಲೆ ಇದ್ದವರಿಗೆ ಇದೊಂದು ವರದಾನವೆಂದರೆ ತಪ್ಪಾಗಲಾರದು. ಸಕ್ಕರೆ ಖಾಯಿಲೆ ಇದ್ದವರಿಗೆ ಕಾಫಿ, ಟೀ ಗೆ ಸಕ್ಕರೆ ಬದಲು ವ್ಯೆದ್ಯರು ಶಿಫಾರಸ್ಸು ಮಾಡುವ ಈಗ ಮಾರ್ಕೆಟ್ನಲ್ಲಿ ಸಿಗುವ ಇಕ್ವೊಲ್, ನ್ಯೂಟ್ರಾಸ್ವಿಟ್ ಹಾಗೂ ಸ್ಪೂನ್ ಬಿಲ್ ಎಂಬ ಸಕ್ಕರೆಗೆ ಪರ್ಯಯವಾಗಿ ಉಪಯೋಗಿಸುವ ಶುಗರ್ ಫ್ರೀ ಎಂಬ ಲೇಬಲ್ ಹಚ್ಚಿಕೊಂಡು ಬರುವ ಇವುಗಳಲ್ಲಿರುವುದು ಈ “ಅಸ್ಪರ್‍ಟೇಮ್” ಎಂಬ ಕೃತಕ ಸಿಹಿ. ಪ್ರತಿ ಗ್ರಾಂ ಅಸ್ಪರ್‍ಟೇಮ್ ದೇಹದಲ್ಲಿ ನಾಲ್ಕು ಕಿಲೋಕ್ಯಾಲೋರಿ ಶಕ್ತಿಯನ್ನು ಉತ್ಪಾದಿಸುತ್ತದೆ.

ಅದರೆ ಇದನ್ನು ಸಕ್ಕರೆ ಖಾಯಿಲೆ ಇದ್ದವರು ಮಾತ್ರ ವ್ಯೆದ್ಯರ ಮಾರ್ಗದರ್ಶನ ದಲ್ಲಿ ಸೇವಿಸಿದರೆ ಏನು ಅಗುವುದಿಲ್ಲ, ಅದರೆ ಅಸ್ಪರ್‍ಟೇಮ್ ನಿರಂತರವಾಗಿ ಸೇವಿಸುವುದರಿಂದ ಮಲ್ಟಿಪಲ್ ಸ್ಕ್ಲೀರೋಸಿಸ್ ಹಾಗೂ ಅಸ್ಪರ್‍ಟೇಮ್ ಪಾಯಿಸನಿಂಗ್‍ ಎಂಬ ರೋಗಕ್ಕೆ ನಾಂದಿ ಹಾಡುತ್ತದೆ ಎಂದು ಇತ್ತೀಚಿನ ವ್ಯೆದ್ಯಕೀಯ ಅದ್ಯಯನ ವರದಿಗಳು ಹೇಳುತ್ತಿದೆ. ಹೊರದೇಶಗಳಲ್ಲಿ ಮಕ್ಕಳು ಸಕ್ಕರೆ ಖಾಯಿಲೆಗೆ ತುತ್ತಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಈ ಕೃತಕ ಸಿಹಿಯಿಂದ ತಯರಿಸಿದ ತಿಂಡಿ ತಿನಿಸುಗಳನ್ನು ಹಾಗು ತಂಪು ಪಾನೀಯವನ್ನು ಕೊಡಿಸುತ್ತಿದ್ದಾರೆ! ಈಗ ಎಲ್ಲಾರಿಗೂ “ ಶುಗರ್ ಫ್ರೀ – ಡ್‍ಯಟ್ ತಿನಿಸುಗಳೇ ಬೇಕು”!! ಈ ಶುಗರ್ ಫ್ರೀ ತಿನಿಸುಗಳನ್ನು ತಿಂದು ಬೇರೆ ಖಾಯಿಲೆಗೆ ಆಹ್ವಾನ ನೀಡುತ್ತಿದ್ದಾರೆ.

ಇವುಗಳ ನಿರಂತರ ಸೇವನೆ ಮಲ್ಟಿಪಲ್ ಸ್ಕ್ಲೀರೋಸಿಸ್ ಹಾಗೂ ಅಸ್ಪರ್‍ಟೇಮ್ ಪಾಯಿಸನಿಂಗ್‍ಗೆ ಕಾರಣವಾಗುತ್ತದೆ..ಈ ಅಸ್ಪರ್‍ಟೇಮ್ ಪಾಯಿಸನಿಂಗ್ ಹೇಗೆ ಆಗುತ್ತದೆ? ನಮ್ಮ ದೇಹದ ಉಷ್ಣತೆ 86 ಡಿಗ್ರಿ ಫಾರನ್‍ಹೀಟ್‍ಗೆ ತಲುಪುತ್ತಲೇ ಅಸ್ಪರ್‍ಟೇಮ್‍ ನಲ್ಲಿರುವ ಆಲ್ಕೊಹಾಲ್ 4:5:1 ಅನುಪಾತದಲ್ಲಿ ಅಸ್ಪರ್‍ಟಿಕ್ ಆಮ್ಲ, ಫೆನ್ಯಲ್ ಅಲನಿನ್ ಆಗಿ ಪರಿವರ್ತನೆಯಾಗಿ ಕೊನೆಯ ಹಂತದಲಿ ಫಾರ್ಮಿಕ್ ಆಮ್ಲವಾಗಿ ಪರಿವರ್ತನೆ ಆಗುತ್ತದೆ. ಈ ಫಾರ್ಮಿಕ್ ಆಮ್ಲ ನಮ್ಮ ದೇಹದ ಪಚನಕ್ರಿಯೆಯ ಮೇಲೆ ಪರಿಣಾಮ ಬೀರಿ “ ಮೆಟಬಾಲಿಕ್ ಆಸಿಡೊಸಿಸ್” ಗೆ ಕಾರಣವಾಗುತ್ತದೆ. ಕೆಂಪಿರುವೆ ಕಚ್ಚಿದಾಗ ಅದು ಕಚ್ಚಿದ ಜಾಗದಲ್ಲಿ ಉರಿಯಾಗುತ್ತದೆ ಅಲ್ಲವೇ? ಈ ಕೆಂಪಿರುವೆಗಳಲ್ಲು ಈ ಫಾರ್ಮಿಕ್ ಆಮ್ಲ ಇರುತ್ತದೆ. ಇರುವೆ ಕಚ್ಚಿದಾಗ ಉಂಟಾಗುವ ನೋವಿಗೆ ಕಾರಣವಾದ ಫಾರ್ಮಿಕ್ ಆಮ್ಲ ನಮ್ಮ ದೇಹದಲ್ಲೇ ಉತ್ಪಾದನೆಯಾದರೆ ಏನು ಗತಿ? ಇದರಿಂದಾಗಿ ದೇಹದಲ್ಲಿ ತಡೆಯಲಸಾದ್ಯವಾದ ಉರಿ, ಉತ, ಸ್ನಾಯುಗಳಲ್ಲಿ ಊತ, ಬಿಗಿತ ಪ್ರಾರಂಭವಾಗಿ ಅದು ಮಲ್ಟಿಪಲ್ ಸ್ಕ್ಲೀರೋಸಿಸ್ ಹಾಗು ಲ್ಯುಪಸ್‍ಗೆ ನಾಂದಿ ಹಾಡುತ್ತದೆ.

ರೋಗಿಗೆ ಇದು ಅಸ್ಪರ್‍ಟೇಮ್ ಪಾಯಿಸನಿಂಗ್‍ನಿಂದಾದ ಖಾಯಿಲೆ ಎಂದು ಗೊತ್ತಾಗುವುದೆ ಇಲ್ಲ ಹಾಗಾಗೆ ಅವರು ಕೃತಕ ಸಿಹಿ ಇರುವ ಆಹಾರದ ಸೇವನೆ ಮುಂದುವರೆಸುತ್ತಾರೆ.ಇದರಿಂದಾಗಿ ಅವರ ಆರೋಗ್ಯ ಹದಗೆಡುತ್ತಲೆ ಇರುತ್ತದೆ. ಡಯಟ್ ಕೋಕ್ ಹಾಗೂ ಡಯಟ್ ಪೆಪ್ಸಿ ಕುಡಿಯುವರಲ್ಲಿ ಮಲ್ಟಿಪಲ್ ಸ್ಕ್ಲೀರೋಸಿಸ್ ಖಾಯಿಲೆ ಹೆಚ್ಚು ಎಂದು ಅಧ್ಯಯನಗಳು ಹೇಳುತ್ತದೆ ಕೃತಕ ಸಿಹಿಯ ನಿರಂತರ ಬಳಕೆ ಜೀವಕ್ಕೆ ಮಾರಕವಾಗಲೂಬಹುದು.ಅಸಾದ್ಯ ಸ್ನಾಯು ಸೆಳೆತ, ಕೀಲುನೋವು, ಮೂಳೆಸಂದುಗಳಲ್ಲಿ ನೋವು, ತಲೆಸುತ್ತು, ನಿದ್ದೆ ಮಂಪರು, ತಲೆನೋವು, ಅರೆಕಾಲಿಕ ಮರೆವು, ಖಿನ್ನತೆ, ಮಾತನಾಡುವಾಗ ಕೆಲವೊಮ್ಮೆ ತೊದಲುವುದು, ಮಂದ ದೃಷ್ಟಿ ಮುಂತಾದುವುಗಳು ಮಲ್ಟಿಪಲ್ ಸ್ಕ್ಲೀರೋಸಿಸ್‍ನ ಲಕ್ಷಣವಾಗಿರಬಹುದು. ಡಯಟ್ ಸೋಡಾ ಅಥವ ಈ ಸಾಲ್ಟ್ ಡ್ರಿಂಕ್ಸ್ ಗಳನ್ನು ಕುಡಿಯುವವರು “ಅಸ್ಪರ್‍ಟೇಮ್ ಪಾಯಿಸನಿಂಗ್” ನಿಂದ ಬಳಲುತ್ತಾರೆ. ಹೌದು ನೀವು ಯವುದಾದರೋ ತಂಪುಪಾನಿಯ ಅಥವ ತಿಂಡಿತಿನಿಸುಗಳ ಮೇಲೆ “ಶುಗರ್ ಫ್ರೀ” ಎಂದು ಬರೆದಿದ್ದರೆ ಅದರ ಸಹವಾಸಕ್ಕೆ ಹೊಗದಿರುವುದೇ ಓಳ್ಳೆಯದು!!

ಅಸ್ಪರ್‍ಟೇಮ್ ರಕ್ತಪ್ರಾಹವನ್ನು ದಾಟಿ ಮೆದುಳಿನ ನರಗಳನ್ನು ಹಾಳು ಗೆಡವಬಲ್ಲದು. ಇದರಿಂದ ನಡುಕ, ಖಿನ್ನತೆ ಹಾಗೂ ಉದ್ವೇಗವನ್ನು ತರಿಸುತ್ತದೆ.. ಗರ್ಬಿಣಿಯರು ಇದನ್ನು ಸೇವಿಸುವುದರಿಂದ ಹುಟ್ಟಿದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆಯಲ್ಲದೇ ವಿಕಲಾಂಗ ಮಕ್ಕಳ ಜನನಕ್ಕೂ ಕಾರಣವಾಗುತ್ತದೆ ಎಂದು ಅದ್ಯಯನಗಳು ಹೇಳುತ್ತದೆ. ಮಲ್ಟಿಪಲ್ ಸ್ಕ್ಲೀರೋಸಿಸ್, ಲ್ಯುಪಸ್ ಹಾಗು ಹಲವು ಮೆದುಳು ಸಂಬಂದಿ ರೋಗಗಳಿಗೆ ನಾಂದಿ ಹಾಡುತ್ತಿರುವ ಈ ಸಿಹಿ ವಿಷದ ಅದ್ಯಯನವನ್ನು ಆದರಿಸಿ ಇದನ್ನು ನಿಷೇಧಿಸುವ ಬಗ್ಗೆ ಚಿಂತನೆಗಳು ನೆಡೆಯುತ್ತಲೇ ಇದೆ, ಅದರೂ ಯವುದಾದರು ತಂಪುಪಾನಿಯ ಅಥವ ತಿಂಡಿತಿನಿಸುಗಳ ಮೇಲೆ “ಶುಗರ್ ಫ್ರೀ” ಎಂದು ಬರೆದಿದ್ದರೆ ಅದರ ಸಹವಾಸಕ್ಕೆ ಹೊಗದಿರುವುದೇ ಓಳ್ಳೆಯದು!! ಏನೇ ಅಗಲಿ ಜನಸಮಾನ್ಯರು ಎಚ್ಚರದಿಂದ ಇರಬೇಕು ಅಲ್ಲವೇ?

ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ

Related post

1 Comment

  • ಲೇಖನ ತುಂಬಾ ಚೆನ್ನಾಗಿದೆ. ಹಾಗೆಯೇ ಬೆಲ್ಲದ ಬಗ್ಗೆಯೂ ಸ್ವಲ್ಪ ತಿಳಿಸಿ. ಹಲವಾರು ತರಹದ ಬೆಲ್ಲಗಳು ಮಾರುಕಟ್ಟೆಯಲ್ಲಿ ಇವೆ. ಯಾವುದು ಉತ್ತಮ ತಿಳಿಸಿ

Leave a Reply

Your email address will not be published. Required fields are marked *