ಭೂ ಒಡಲು ತಂಪಾಗಿ
ಮೈಯೆಲ್ಲಾ ಹಸಿರಾಗೀ
ದೇವರ ಪ್ರೀತಿಯೆಲ್ಲಾ
ಬೆಳೆಯಾಗಿ ಹೊರಬಂದಿತೋ
ರೈತನಾ ಮಾರೀ ಮ್ಯಾಲೆ
ನಗೆಯೊಂದು ಹೊರ ಚೆಲ್ಲಿ
ಬಾನೆಲ್ಲಾ ಬೆಳಕಾಯಿತೋ
ಬಾನಾಗೆ ತಲೆ ಎತ್ತಿ ನೋಡೋದೇ ಮರೆತಾವ್ರೆ.
ಹೇಂಡ್ತೀಯ ಮೊಗದಾಗ
ಬಿದಿಗೆ ಚಂದ್ರಾನ ಕಂಡಾವ್ರೆ
ಮುನಿಸೊಂದು ನಗೆಯಾಯಿತು
ದಿನಕ್ಕೊಂದು ಉಗಾದಿ
ಮುದುಕಿಯ ಬೊಚ್ಚ ಬಾಯ್ತುಂಬ ಎಲೆ ಅಡಕಿ
ಊರೆಲ್ಲಾ ರಂಗಾಯಿತೋ
ಮಾರೀ ಮ್ಯಾಗಿನ ನೆರೆಗೆ
ಹಳೆ ಕಥೆಯ ಬಿಚ್ಚಿಟ್ಟಿತೋ.
ತೊಟ್ಟೀಲ ಕೂಸೀಗೆ ಚಂದಾದ ಹಾಡಾಯಿತೋ
ಬೆಳ್ಳಗಾಗವ್ನೆ ಊರ ಹನುಮ
ಸೇರಾವ್ರೆ ಹೆಂಗಸ್ರು
ಬೆಳಗ್ತಾರ ದೀಪ ಎಲ್ಲಾರೂ ಕುಣಿದಾಡಿ ಹಾಡೀ
ಜೋಗತೀಯ ಜೋಳೀಗೀ ಎಂದೆಂದೂ ಬತ್ತದಿರಲೀ
ನನ್ನಪ್ಪಾ. ಹರಿಸು ಊರೂ ಕೇರೀ
ಪವನ ಕುಮಾರ ಕೆ ವಿ
ಬಳ್ಳಾರಿ
ಸಂಪರ್ಕ: 9900515957
ಚಿತ್ರ ಕೃಪೆ : toperfect.com
1 Comment
Fabolus lines Sir thumba chenda aiytri