ಸೂಕ್ಷ್ಮಾಣು ಜೀವದರ್ಶಕ ಯಂತ್ರದ ಜನಕ – ಅಂಟೋನ್ ವಾನ್‍ಲ್ಲಿವೆನ್‍ಹುಕ್

ಸೂಕ್ಷ್ಮಾಣು ಜೀವದರ್ಶಕ ಯಂತ್ರದ ಜನಕ – ಅಂಟೋನ್ ವಾನ್‍ಲ್ಲಿವೆನ್‍ಹುಕ್

ವಿಜ್ಞಾನ ಕ್ಷೇತ್ರದಲ್ಲಿ ಐನ್‍ಸ್ಟೇನ್, ನ್ಯೂಟನ್, ಆರ್ಕಿಮಿಡಿಸ್, ರಾಬರ್ಟ್ ಕಾಚ್, ಮೇಡಂ ಕ್ಯೂರಿ, ಮುಂತಾದ ಮಹಾವಿಜ್ಞಾನಿಗಳ ಹೆಸರನ್ನು ಕೇಳದವರೇ ಇಲ್ಲ. ವಿಜ್ಞಾನ ಕ್ಷೇತ್ರಕ್ಕೆ ಈ ಮಹಾ ವಿಜ್ಞಾನಿಗಳು ನೀಡಿದ ಕೊಡುಗೆ ಅಪಾರ ಇದರಿಂದ ಇವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಇದರಂತಯೇ ವಿಜ್ಞಾನ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿಯೂ ಪ್ರಚಾರದಿಂದ ದೂರ ಉಳಿದಿರುವ ವಿಜ್ಞಾನಿಗಳು ಬಹಳ ಮಂದಿ ಇದ್ದು ಅಂಥವರಲ್ಲಿ ‘ಅಂಟೋನ್ ನಾನ್ ಲಿವೆನ್ ಹುಕ್’ ಸಹ ಒಬ್ಬ.

ಅಂಟೋನ್ ನಾನ್ ಲಿವನ್‍ಹುಕ್ 1632 ರಲ್ಲಿ ಹಾಲೆಂಡಿನ ಡಲ್‍ಸೆಟ್ ಎಂಬ ಹಳ್ಳಿಯಲ್ಲಿ ಹುಟ್ಟಿದನು. ಮನೆಯಲ್ಲಿ ಬಡತನವಿದ್ದುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಶಾಲೆಯನ್ನು ಬಿಡಬೇಕಾಯಿತು. ಆಮ್ಸ್ಟರ್ಡಮ್ ಹೋಗಿ ಅಲ್ಲಿನ ಒಂದು ವ್ಯಾಪಾರಿ ಮಾರಾಟಗಾರನಾಗಿ 5 ವರ್ಷಗಳ ಕಾಲ ಕೆಲಸ ಮಾಡಿದನು. ನಂತರ ಕೆಲವು ವರ್ಷಗಳ ಕಾಲ ಸ್ಥಳೀಯ ಮುನಿಸಿಪಾಲಿಟಿಯಲ್ಲಿ ಕೆಲಸ ಮಾಡಿದ್ದನು.

ಆಗಿನ ವಿದ್ಯಾಭ್ಯಾಸ ಇಂದಿನ ವಿದ್ಯಾಭ್ಯಾಸದಂತೆ ಇರಲಿಲ್ಲ ಪುಸ್ತಕದಲ್ಲಿದ್ದುದ್ದನ್ನೆ ಓದಬೇಕಿತ್ತು. ದೊಡ್ಡ ಮನುಷ್ಯರು ಹೇಳಿದ್ದೇ ಅಂತಿಮ. ಅದನ್ನೇ ಓದಬೇಕಿತ್ತು, ಪುಸ್ತಕದ ವಿರುದ್ಧ ಮಾತನಾಡಿದರೆ, ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ‘ಗೆಲಿಲಿಯೋ’ ಭೂಮಿ ಸೂರ್ಯನ ಸುತ್ತ ತಿರುಗುತ್ತದೆ ಎಂದು ಹೇಳಿದ ಕಾರಣಕ್ಕಾಗಿ ಅವನನ್ನು ಕೊನೆಯುಸಿರುವ ತನಕ ಬಂಧನದಲ್ಲಿರಿಸಲಾಗಿತ್ತು. ಇಂತಹ ದಿನಗಳಲ್ಲಿ ‘ಲ್ಲಿವೆನ್ ಹುಕ್’ ತನ್ನ ಹವ್ಯಾಸವಾದ ಮೈಕ್ರೋಸ್ಕೋಪ್‍ ಅನ್ನು ಮುಂದುವರೆಸಿದರು. ಹಿಂದೆ ಬಿಟ್ಟ ಅಂಗಡಿಯಲ್ಲು ಕೆಲಸ ಮಾಡುತ್ತಿದ್ದಾಗ ದಾರದ ಎಳೆಗಳನ್ನು ಪರೀಕ್ಷಿಸಿಸಲು ಭೂತಕನ್ನಡಿಯನ್ನು ಉಪಯೋಗಿಸುತ್ತಿದ್ದನು. ಹಲವು ವರ್ಷಗಳ ಸತತ ಪರಿಶ್ರಮದ ನಂತರ ಗಾಜಿನಿಂದ ತಾನೇ ಸ್ವತಃ ಭೂತಕನ್ನಡಿಯನ್ನು ತಯಾರಿಸುವುದನ್ನು ಕಲಿತುಕೊಂಡನು. ಹೀಗೆ ತಯಾರಾದ ಭೂತಕನ್ನಡಿಯನ್ನು ತಯಾರಿಸುವುದನ್ನು ಕಲಿತುಕೊಂಡನು. ಹೀಗೆ ತಯಾರಾದ ಭೂತಕನ್ನಡಿಯನ್ನು ಟೊಳ್ಳಾದ ಲೋಹದ ಕೊಳವೆಯೊಳಗೆ ಜೋನಿನ ‘ಸೂಕ್ಷ್ಮದರ್ಶನದ ಯಂತ್ರವನ್ನು’ ಕಂಡು ಹಿಡಿದನು. ಆದರೂ ಇನ್ನೂ ಉತ್ತಮವಾದುದನ್ನು ತಯಾರಿಸಬೇಕೆಂಬ ಹಂಬಲದಿಂದ ತನ್ನ ಕೆಲಸವನ್ನು ಮುಂದುವರೆಸಿದನು.

ಆಗಿನ ಕಾಲದಲ್ಲಿ ಕನಿಷ್ಠ ವಿದ್ಯಾರ್ಹತೆಯನ್ನು ಪಡೆಯದೆ ‘ಲ್ಲಿವನ್ ಹುಕ್’ , ಸೂಕ್ಷ್ಮದರ್ಶಕ ಯಂತ್ರವನ್ನು ಯಾರ ಮಾರ್ಗದರ್ಶನವೂ ಇಲ್ಲದೇ ಕಂಡುಹಿಡಿದಿದ್ದು ಸಾಧನೆಯೆ ಸರಿ. ತಮ್ಮ ಜೀವನದ ಅವಧಿಯಲ್ಲಿ ಇಂತಹ 250 ಸೂಕ್ಷ್ಮಾಣುದರ್ಶಕ ಯಂತ್ರಗಳನ್ನು ತಯಾರಿಸಿದ್ದನು. ಅವುಗಳಲ್ಲಿ ಅತಿ ತೀಕ್ಷ್ಣವಾದ ವಸ್ತುಗಳು ತಮ್ಮ ಮೂಲ ಗಾತ್ರಕ್ಕಿಂತ 250 ರಿಂದ 300 ಪಟ್ಟು ದೊಡ್ಡದಾಗಿ ಕಾಣುವಂತಹ ಸೂಕ್ಷ್ಮದರ್ಶಕವನ್ನು ತಯಾರಿಸಿದ್ದನು. ತಾನು ತಯಾರಿಸಿದ ಸೂಕ್ಷ್ಮದರ್ಶಕದಲ್ಲಿ ಕೂದಲು, ಚರ್ಮ, ಶಾರ್ಕ್ ಮೀನಿನ ಸ್ನಾಯುಗಳು, ನೋಣದ ಮೆದುಳು, ಸಸ್ಯದ ಬೀಜಗಳು, ಕೀಟಗಳನ್ನೆಲ್ಲಾ ವೀಕ್ಷಿಸಿ ಎಲ್ಲ ವಿವರಗಳನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತಿದ್ದನು. ಈ ಎಲ್ಲ ವಿವರಣೆಗಳನ್ನು ಅವನು ‘ರಾಯಲ್ ಸೊಸೈಟಿ ಆಫ್ ಇಂಗ್ಲೆಂಡ್‍ ಗೆ ಕಳಿಸಲಾರಂಭಿಸಿದರು. ‘ಲ್ಲಿವೆನ್ ಹುಕ್‍’ ನ ಸೂಕ್ಷ್ಮದರ್ಶಕದ ಸಂಶೋಧನೆ ಹಾಗೂ ಆತ ಕಳುಹಿಸಿದ್ದ ವಿವರಗಳನ್ನು ನೋಡಿದ್ದ ರಾಯಲ್ ಸೊಸೈಟಿ ಬೆರಗುಗೊಂಡಿತು. ಮುಂದೆ ಸುಮಾರು 50 ವರ್ಷಗಳ ಕಾಲ ‘ಲ್ಲಿವೆನ್ ಹುಕ್‍’ ರಾಯಲ್ ಸೊಸೈಟಿ ಜೊತೆ ಸಂಬಂಧ ಹೊಂದಿದ್ದನು.

ಲ್ಯಿವೆನ್ ಹುಕ್‍ನ ಸಂಶೋಧನೆಗಳಲ್ಲಿ ಅತ್ಯಂತ ಮುಖ್ಯವಾದದ್ದು ಮಳೆ ನೀರಿನಲ್ಲಿ ಸೂಕ್ಷ್ಮಾಣುಜೀವಿಗಳನ್ನು ಗುರುತಿಸಿದ್ದು, ಇವುಗಳೇ ಭೂಮಿಯ ಮೇಲಿನ ಅತ್ಯಂತ ಸಣ್ಣ ಜೀವಿಗಳೆಂದು ನಂಬಿದ್ದನು. ಅಷ್ಟೆ ಅಲ್ಲದೇ ದೇವರು ಈ ಜೀವಿಗಳನ್ನು ಸೃಷ್ಟಿಸಿ ಮಳೆಯ ನೀರಿನೊಂದಿಗೆ ಭೂಮಿಗೆ ಕಳಿಸಿದ್ದನೆಂದು ತಿಳಿದಿದ್ದನು. ಅಲ್ಲದೇ ಬಾವಿ, ಕೆರೆ, ನದಿ, ಹಳ್ಳ, ಕೊಳ್ಳಗಳಲ್ಲಿರುವ ಎಲ್ಲ ಸೂಕ್ಷ್ಮಾಣು ಜೀವಿಗಳನ್ನು ತಾನು ತಯಾರಿಸಿದ ಸೂಕ್ಷ್ಮಾಣುದರ್ಶಕ ದಲ್ಲಿ ನೋಡುತ್ತಿದ್ದನು. ಇದಲ್ಲದೇ ಸೂಕ್ಷ್ಮಾಣು ಜೀವಿಗಳನ್ನು ಗಾಜಿನ ತಟ್ಟೆಗಳಲ್ಲಿ ಬೆಳೆಸುವ ವಿಧಾನಕ್ಕೆ ಅಡಿಪಾಯ ಹಾಕಿದನು. ಈ ವಿಧಾನಗಳು ಇಂದಿಗೂ ಬಳಕೆಯಲ್ಲಿದೆ ಜೈವಿಕ ತಂತ್ರಜ್ಞಾನದಲ್ಲಿ ಬಳಸುವ ಅನೇಕ ಪ್ರಯೋಗಗಳಿಗೆ ಈ ವಿಧಾನಗಳು ಬಹಳ ಉಪಯುಕ್ತವಾಗಿವೆ.

ಲ್ಯಿವೆನ್ ಹುಕ್‍ನು ತಾನು ತಯಾರಿಸಿದ ಸೂಕ್ಷ್ಮಾಣು ದರ್ಶಕವನ್ನು ಯಾರಿಗೂ ಮುಟ್ಟಲೂ ಸಹ ಬಿಡುತ್ತಿರಲಿಲ್ಲ. ರಾಯಲ್ ಸೊಸೈಟಿಯವರು, ಸೂಕ್ಷ್ಮಾಣು ದರ್ಶಕವನ್ನು ತಯಾರಿಸುವ ವಿಧಾನವನ್ನು ತಿಳಿಸಬೇಕೆಂದು ಕೇಳಿದಾಗ ಅದನ್ನು ಹೇಳಲು ಸಾಧ್ಯವಿಲ್ಲವೆಂದು ಬೇಕಾದರೆ ಸೂಕ್ಷ್ಮಾಣು ಜೀವಿಗಳನ್ನು ತನ್ನ ಸೂಕ್ಷ್ಮದರ್ಶಕ ಯಂತ್ರದಲ್ಲಿ ತೋರಿಸುವುದಾಗಿ ಹೇಳಿದ್ದನಂತೆ. ಇದರಿಂದ ಬೇಸರಗೊಂಡ ರಾಯಲ್ ‘ಸೊಸೈಟಿ ಲ್ಯಿವೆನ್ ಹುಕ್‍’ ನನ್ನು ಕರೆದು ಸೂಕ್ಷ್ಮದರ್ಶಕ ಯಂತ್ರವನ್ನು ತಯಾರಿಸಲು ಹೇಳಿದ್ದರು ‘ಲ್ಯಿವೆನ್ ಹುಕ್’ ಸೂಕ್ಷ್ಮದರ್ಶಕ ಯಂತ್ರ ತಯಾರಿಸಿದ ನಂತರ ನೀರಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ತೋರಿಸಿದನು. ಇದನ್ನು ನೋಡಿದ ರಾಯಲ್ ಸೊಸೈಟಿ ‘ಲ್ಯಿವೆನ್ ಹುಕ್’ ಹಿಂದೆ ಪ್ರತಿಪಾದಿಸಿದ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳಿರುತ್ತವೆ ಎಂಬುದನ್ನು ಒಪ್ಪಿಕೊಂಡಿತು. ಆ ದಿನ ‘ಲ್ಯಿವೆನ್ ಹುಕ್‍’ ನ ಜೀವನದಲ್ಲಿ ಅತ್ಯಂತ ಸಂತೋಷದ ದಿನ ‘ಲ್ಯಿವೆನ್ ಹುಕ್‍’ ಗೆ ಅಂದು ರಾಯಲ್ ಸೊಸೈಟಿಯ ಗೌರವ ಸದಸ್ಯತ್ವ ಸಿಕ್ಕಿತು.

‘ಲ್ಯಿವೆನ್ ಹುಕ್‍’ ನ ಅತ್ಯಂತ ಪ್ರಮುಖ ಸಾಧನೆಗಳಲ್ಲಿ ಮುಖ್ಯವಾದದ್ದು ಹಲ್ಲಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಗುರುತಿಸಿದನು. ಮನುಷ್ಯನ ವೀರ್ಯಾಣುವನ್ನು ಮೊದಲ ಬಾರಿಗೆ ಸೂಕ್ಷ್ಮ ದರ್ಶಕದಲ್ಲಿ ನೋಡಿದ ಕೀರ್ತಿ ‘ಲ್ಯಿವೆನ್ ಹುಕ್‍’ ಗೆ ಸೇರುತ್ತದೆ. ಅಲ್ಲದೆ ಅದನ್ನು ನಾಯಿಯ ವೀರ್ಯಾಣುವಿನೊಂದಿಗೆ ಹೋಲಿಸಿ ನೋಡಿದ್ದನು. ಮೀನಿನ ಬಾಲ ಮತ್ತು ರೆಕ್ಕೆಗಳಲ್ಲಿ ರಕ್ತನಾಳಗಳಿರುತ್ತದೆ ಎಂದು ಕಂಡು ಹಿಡಿದಿದ್ದನು. ರಕ್ತ ಕಣಗಳಲ್ಲಿ ಜೀವ ಕೋಶಗಳಿರುತ್ತದೆ ಎಂಬುದನ್ನು ಕಂಡುಹಿಡಿದ ಕೀರ್ತಿ ‘ಲ್ಯಿವೆನ್ ಹುಕ್‍’ ನದು. ಸ್ವತಃ ತನ್ನ ಮಲವನ್ನು ಪರೀಕ್ಷಿಸಿ ಅದರಲ್ಲಿ ರೋಗಾಣುಗಳಿರುತ್ತವೆ ಎಂದು ಗುರುತಿಸಿದನು. ಆರೋಗ್ಯವಂತ ಮತ್ತು ಅನಾರೋಗ್ಯ ಪೀಡಿತ ಮನುಷ್ಯರಲ್ಲಿ ರೋಗಾಣುಗಳನ್ನು ಕಂಡು ಹಿಡಿದನು. ಆದರೆ ಈ ಸೂಕ್ಷ್ಮಾಣುಗಳೇ ಅನೇಕ ಖಾಯಿಲೆಗಳಿಗೆ ಕಾರಣ ಎಂಬುದನ್ನು ಪತ್ತೆ ಹಚ್ಚುಲು ಅವನಿಗೆ ಸಾಧ್ಯವಾಗಲಿಲ್ಲ.

ಲ್ಯಿವೆನ್‍ಹುಕ್‍ನ ಈ ಎಲ್ಲಾ ಸಂಶೋಧನೆಗಳು ಇಂದಿನ ಸೂಕ್ಷ್ಮಾಣು ಜೀವ ವಿಜ್ಞಾನದ [Microbiology] ಬೆಳವಣಿಗೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು ಮೈಕ್ರೋಬಯಾಲಾಜಿ ಕ್ಷೇತ್ರಕ್ಕೆ ‘ಲ್ಯಿವೆನ್ ಹುಕ್‍’ ನ ಕೊಡುಗೆ ಅಪಾರವಾದದ್ದು, ಇತ್ತೀಚಿನ ದಿನಗಳಲ್ಲಿ ಮುಂದುವರೆಯುತ್ತಿರುವ ಜೈವಿಕ ತಂತ್ರಜ್ಞಾನದ ಬೆಳವಣಿಗೆಗೂ ‘ಲ್ಯಿವೆನ್‍ಹುಕ್’ ಕಾರಣಕರ್ತ ಎಂದರೆ ತಪ್ಪಾಗಲಾರದು.

ಅಂದಿನ ರಷ್ಯಾದ ರಾಜ ಪೀಟರ್ ಹಾಗೂ ಆತನ ಪತ್ನಿ ‘ಲ್ಯಿವೆನ್ ಹುಕ್‍’ ನನ್ನು ವೈಯಕ್ತಿಕವಾಗಿ ಭೇಟಿ ಕೊಟ್ಟು ಅಭಿನಂದಿಸಿದ್ದರು. ಅವರು ಸಹ ಸೂಕ್ಷ್ಮದರ್ಶಕದಲ್ಲಿ ಸೂಕ್ಷ್ಮಾಣು ಜೀವಿಗಳನ್ನು ನೋಡಿ ಸಂತಸಪಟ್ಟಿದ್ದರು. 1723 ನೇ ಇಸವಿಯಲ್ಲಿ ತನ್ನ 90ನೇ ವಯಸ್ಸಿನಲ್ಲಿ ‘ಲ್ಯಿವೆನ್‍ಹುಕ್’ ನಿಧನ ಹೊಂದಿದನು. ಮರಣ ಶಯ್ಯೆಯಲ್ಲಿದ್ದಾಗಲೂ ಸಹ ತನ್ನ ಸ್ನೇಹಿತರನ್ನು ಕರೆದು ತನ್ನ ಸಂಶೋಧನೆಯ ಕಾಗದಗಳನ್ನು ರಾಯಲ್ ಸೊಸೈಟಿ ಆಫ್ ಇಂಗ್ಲೆಂಡಿಗೆ ಕಳಿಸಬೇಕೆಂದು ಹೇಳಿದ್ದನಂತೆ.

ಇವೆಲ್ಲ ಸಾಧನೆಗಳನ್ನು ಮಾಡಿದ ಲ್ಯಿವೆನ್ ಹುಕ್‍ ತನ್ನ 90 ನೇ ವಯಸ್ಸಿನಲ್ಲಿ 26 ಆಗಸ್ಟ್ 1723 ರಂದು ಮರಣಹೊಂದಿದನು.

ಡಾ|| ಪ್ರಕಾಶ್ ಕೆ ನಾಡಿಗ್
ತುಮಕೂರು

Related post

Leave a Reply

Your email address will not be published. Required fields are marked *