ಭಾವ ನೌಕೆಯನೇರಿ ಹಾಗು ಕಥೆಯೆಂಬ ಕನ್ನಡಿಯಲ್ಲಿ
(ಕವನ ಹಾಗು ಕಥಾಸಂಕಲನಗಳ ಬಿಡುಗಡೆ)
ಆಗಸ್ಟ್ 7 ರಂದು ಲೇಖಕಿ ಹಾಗು ಶಿಕ್ಷಕಿ ಶ್ರೀಮತಿ “ಸೌಜನ್ಯ ದತ್ತರಾಜ್” ರವರ “ಭಾವ ನೌಕೆಯನೇರಿ (ಕವನ ಸಂಕಲನ) ಹಾಗು ಕಥೆಯೆಂಬ ಕನ್ನಡಿಯಲ್ಲಿ” ಎಂಬ ಎರಡು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣ ದಲ್ಲಿ ಬಿಡುಗಡೆಯಾಗುತ್ತಿದೆ.
ಲೇಖಕಿ – ಪರಿಚಯ
ವೃತ್ತಿಯಲ್ಲಿ ಶಿಕ್ಷಕಿಯರಾದ ಶ್ರೀಮತಿ ಸೌಜನ್ಯ ದತ್ತರಾಜ್ ರವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಹಾಗು freelance ಬರಹಗಾರರೂ. ಇವರು ಬರೆದ ಕಥೆಗಳು ಹಾಗು ಕವನಗಳು ‘ತರಂಗ’, ‘ಮಂಗಳ’, ‘ವಿಶ್ವವಾಣಿ’ ಹಾಗು ಸಾಹಿತ್ಯಮೈತ್ರಿ (ಅಂತರ್ಜಾಲ ಪತ್ರಿಕೆ) ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2014ರ ‘ಕನ್ನಡಪ್ರಭ’ ದೀಪಾವಳಿ ವಿಶೇಷಾಂಕದ ಸಣ್ಣ ಕಥಾ ಸ್ಪರ್ಧೆಯಲ್ಲಿ ಬಹುಮಾನವನ್ನೂ ಸಹ ಗಳಿಸಿದ್ದಾರೆ. ಸಿನಿಮಾ, ನಾಟಕ ಮತ್ತು ಪುಸ್ತಕಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಹಾಗು ಕಥೆ, ಕವಿತೆ, ಮಕ್ಕಳಿಗಾಗಿ ನಾಟಕಗಳನ್ನೂ ಬರೆದಿರುವ ಇವರು, ಇತ್ತೀಚಿನ ದಿನಗಳಲ್ಲಿ visual mediaದಲ್ಲಿ ಚಿತ್ರಕಥೆ, ಸಂಭಾಷಣೆಗಳನ್ನು ಬರೆಯುವುದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ‘ಭಾವನೌಕೆಯನೇರಿ….’ ಎಂಬ ಕವನ ಸಂಕಲನವನ್ನೂ ಮತ್ತು ‘ಕಥೆಯೆಂಬ ಕನ್ನಡಿಯಲ್ಲಿ’ ಎಂಬ ಕಥಾ ಸಂಕಲನವನ್ನೂ ಪ್ರಕಟಿಸುತ್ತಿದ್ದಾರೆ. ಇವೆರಡೂ ಕೃತಿಗಳನ್ನು ಅದಮ್ಯ ಪ್ರಕಾಶನ ದವರು ಹೊರತಂದಿದ್ದಾರೆ.
ಭಾವ ನೌಕೆಯನೇರಿ – ಕವನ ಸಂಕಲನ
ಶ್ರೀಮತಿ ಸೌಜನ್ಯ ದತ್ತರಾಜ್ ರವರು ಭಾವನೆಗಳನ್ನು ಅದ್ಭುತವಾಗಿ ಕವನಗಳಲ್ಲಿ ಸೆರೆಹಿಡಿದು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಇದುವರೆಗೂ ಹಾಕುತ್ತ ಬಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸೌಜನ್ಯರವರು ತಮ್ಮ ಸೃಜನಶೀಲತೆ ಕವನಗಳಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. “ಭಾವ ನೌಕೆಯನೇರಿ” ಕವನ ಸಂಕಲನವು ಅವರ ಅತ್ಯುತ್ತಮ ಕವನಗಳನ್ನು ಹೊಂದಿದೆ.
ಕಥೆಯೆಂಬ ಕನ್ನಡಿಯಲ್ಲಿ – ಕಥಾ ಸಂಕಲನ
ತಮ್ಮ ಇದುವರೆಗಿನ ಅನುಭವಗಳ ಆಧಾರದ ಮೇಲೆ ಈ ಸಂಕಲನದಲ್ಲಿ ಭಾವಗಳ ಮೂಲಕ ಎಷ್ಟೋ ಘಟನೆಗಳನ್ನು ಶ್ರೀಮತಿ ಸೌಜನ್ಯ ದತ್ತರಾಜ್ ಕಥೆಗಳಾಗಿಸಿದ್ದಾರೆ.
ಈ ಎರಡೂ ಕೃತಿಗಳನ್ನು ಲೇಖಕರು ಹಾಗು ಚಿಂತಕರಾದ ಶ್ರೀ ಕೆ. ರಾಜಕುಮಾರ್ ರವರು ಲೋಕಾರ್ಪಣೆ ಮಾಡಲಿದ್ದಾರೆ. ಕಿರುತೆರೆ ಕಾರ್ಯಕ್ರಮ ನಿರ್ವಾಹಕರು ಹಾಗು ಕಥೆಗಾರರಾದ ಶ್ರೀ ಆರ್. ಶಶಿಧರ್ ರವರು ಭಾವ ನೌಕೆಯನೇರಿ ಕವನ ಸಂಕಲನದ ಬಗ್ಗೆ ಮಾತನಾಡಿದರೆ ಕವಿ, ಚಿಂತಕರು ಹಾಗು ಲೇಖಕರಾದ ಶ್ರೀ ಅಪೂರ್ವ ಅಜ್ಜಂಪುರ ರವರು ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.
ಈ ಸಮಯದಲ್ಲಿ ಲೇಖಕಿ ಹಾಗು ಶಿಕ್ಷಕಿಯರಾದ ಶ್ರೀಮತಿ ಸೌಜನ್ಯ ದತ್ತರಾಜ್ ರವರಿಗೆ ಸಾಹಿತ್ಯಮೈತ್ರಿ ಕಡೆಯಿಂದ ಅಭಿನಂದನೆಗಳು.
ಬಿಡುಗಡೆಯ ದಿನಾಂಕ: 7 ನೇ ಆಗಸ್ಟ್ 2022, ಭಾನುವಾರ
ಸಮಯ: ಬೆಳಿಗ್ಗೆ 10 ಘಂಟೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು
ಕುವೆಂಪು ಸಭಾಂಗಣ, ಮೂರನೇ ಮಹಡಿ
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ
ಬೆಂಗಳೂರು – 560018
ನೀವು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯವನ್ನು ಹಾಗು ಬರಹಗಾರರನ್ನು ಪ್ರೋತ್ಸಾಹಿಸಿಬೇಕೆಂದು ಸಾಹಿತ್ಯಮೈತ್ರಿ ವತಿಯಿಂದ ವಿನಂತಿ.
ಸಾಹಿತ್ಯಮೈತ್ರಿ ತಂಡ