ಶ್ರೀಮತಿ ಸೌಜನ್ಯ ದತ್ತರಾಜ್ ರವರ ಎರಡು ಕೃತಿಗಳ ಲೋಕಾರ್ಪಣೆ

ಭಾವ ನೌಕೆಯನೇರಿ ಹಾಗು ಕಥೆಯೆಂಬ ಕನ್ನಡಿಯಲ್ಲಿ ಕೃತಿಗಳ ಲೋಕಾರ್ಪಣೆ

ಇಂದು ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಸೌಜನ್ಯ ದತ್ತರಾಜ್ ರವರ ಎರಡು ಕೃತಿಗಳಾದ “ಭಾವ ನೌಕೆಯನೇರಿ” ಕವನ ಸಂಕಲನ ಹಾಗು “ಕಥೆಯೆಂಬ ಕನ್ನಡಿಯಲ್ಲಿ” ಕಥಾ ಸಂಕಲನ ಆದಮ್ಯಾ ಪ್ರಕಾಶನ ದವರಿಂದ ಲೋಕಾರ್ಪಣೆಯಾಯಿತು.

ಕನ್ನಡ ಸಾಹಿತ್ಯ ಸಮಾರಂಭಗಳ ಎಂದಿನ ಸಂಪ್ರದಾಯದಂತೆ ನಾಡಗೀತೆಯಿಂದ ಶುರುವಾದ ಕಾರ್ಯಕ್ರಮವು ನಂತರ ದೀಪವನ್ನು ಬೆಳಗಲಾಯಿತು. ಶ್ರೀಮತಿ ಸೌಜನ್ಯ ದತ್ತರಾಜ್ ರವರು ನಾಡಿನ ತಮ್ಮ ಕಥೆ ಕವನಗಳಿಂದ ಅನೇಕ ಕಡೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವದರ ಕಾರಣವೆಂಬಂತೆ ದೂರದ ಊರುಗಳಿಂದೆಲ್ಲ ಬಂದ ಜನರಿಂದ ವಿವೇಕ ಸಭಾಂಗಣ ಸಂಪೂರ್ಣ ತುಂಬಿತ್ತು.

ಕೃತಿಯ ಕುರಿತು ಮಂಜುನಾಥ್ ಅಜ್ಜಂಪುರ ರವರು ” ಸಾಹಿತ್ಯ ಕಲೆ ಭಾವದಿಂದ ಕೂಡಿದ್ದು, ಬರೆದದ್ದನ್ನು ಪ್ರಕಟಿಸುವ ಮೂಲಕ ಜನರಿಗೆ ಅಭಿವ್ಯಕ್ತಗೊಳಿಸಲಾಗುವುದು” ಎಂದು ಅಭಿಪ್ರಾಯಪಟ್ಟರು.

ಕಥೆಗಾರರಾದ ಶ್ರೀ ಆರ್. ಶಶಿಧರ್ ರವರು ” ಇಂದಿನ ಸಮಾಜವು ಮೇಲ್ನೋಟಕ್ಕೆ ಪುರುಷ ಪ್ರಧಾನವೆಂಬಂತೆ ಕಂಡರೂ ಪುರುಷನಿಗಿಂತ ಮೊದಲು ಗುರುತಿಸುವುದು ಮಹಿಳೆಯನ್ನೇ ಹಾಗಾಗಿ ಎಲ್ಲರು ತಿಳಿದಿರುವಂತೆ ಮಹಿಳೆ ಬರಿಯ ಭಾವಜೀವಿಯಲ್ಲ ಅವಳು ಪುರುಷನಿಗಿಂತ ಪ್ರಾಕ್ಟಿಕಲ್ ಮನೋಭಾವದವಳು” ಎಂದು ಕವನ ಸಂಕಲನದಿಂದ ಎರಡು ಕವನಗಳನ್ನು ಓದಿ ಅದರ ಗಾಂಭೀರ್ಯತೆಯನ್ನು ಹಾಗು ಅದರಲ್ಲಿ ಎದ್ದು ತೋರುವ ವಾಸ್ತವತೆಯನ್ನು ವಿವರಿಸಿದರು.

ಕವಿ ಹಾಗು ಕಥೆಗಾರರಾದ ಶ್ರೀ ಅಪೂರ್ವ ಅಜ್ಜಂಪುರ ರವರು ” ಸೌಜನ್ಯ ದತ್ತರಾಜ್ ರವರನ್ನು ನಾನು ಚಿಕ್ಕಂದಿನಿಂದಲೇ ಬಲ್ಲೆ, ಹಿಂದೆ ಶಾಲೆಗಳಲ್ಲಿ ಚಿಕ್ಕ ಮಕ್ಕಳು ಪದ್ಯ ಕವನ ಕಥೆ ಮುಂತಾದವುಗಳನ್ನು ಬರೆದಾಗ ಅವರನ್ನು ಪ್ರೋತ್ಸಾಹಿಸಲು ನೋಟೀಸ್ ಬೋರ್ಡ್ ಗಳಲ್ಲಿ ಹಾಕುತ್ತಿದ್ದರು, ಸೌಜನ್ಯ ರವರು ತಾವು ಚಿಕ್ಕವರಿದ್ದಾಗಲೇ ಪದ್ಯಗಳನ್ನು ಕಥೆಗಳನ್ನು ರಚಿಸುತ್ತ ಇಂದು ತಮ್ಮದೇ ಆದ ಪುಸ್ತಕ ಪ್ರಕಟಣೆಯಾಗುವ ತನಕ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುತ್ತ ಬಂದಿದ್ದಾರೆ” ಎಂದು ಕಥಾ ಸಂಕಲನಗಳಲ್ಲಿದ್ದ ಎಲ್ಲಾ ಒಂಬತ್ತು ಕಥೆಗಳ ಕುರಿತು ಕಿರು ವಿಮರ್ಶೆಗಳನ್ನು ಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕರು ಹಾಗು ಚಿಂತಕರಾದ ಶ್ರೀ ಕೆ. ರಾಜಕುಮಾರ್ ರವರು ” ಹಿಂದೆ ಮಹಿಳಾ ಸಾಹಿತ್ಯವೆಂದರೆ ಅಡುಗೆ ಮನೆ ಸಾಹಿತ್ಯ ಎಂದೇ ಬಹಳಷ್ಟು ಜನರಲ್ಲಿ ತಪ್ಪು ಅಭಿಪ್ರಾಯವಿತ್ತು ಆದರೆ ಈಗ ಸಾಮಾಜಿಕ ಮಾಧ್ಯಮಗಳು ಹೆಚ್ಚಾಗಿರುವುದರಿಂದ ಮಹಿಳಾ ಸಾಹಿತ್ಯ ಉನ್ನತ ಮಟ್ಟದಲ್ಲಿರುವುದಕ್ಕೆ ಸೌಜನ್ಯ ರವರ ಈ ಎರಡು ಕೃತಿಗಳೇ ಸಾಕ್ಷಿ ಎಂದು ಕೃತಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಲೇಖಕಿ ಶ್ರೀಮತಿ ಸೌಜನ್ಯ ದತ್ತರಾಜ್ ರವರು ತನ್ನ ಬರವಣಿಗೆಯನ್ನು ಇದುವರೆಗೂ ಪ್ರೋತ್ಸಾಹಿಸುತ್ತ ಬಂದಿರುವ ಜನರನ್ನು ನೆನೆದು ಕೃತಿಗಳ ಲೋಕಾರ್ಪಣೆಗೆ ಸಾಕ್ಷಿಯಾದ ಎಲ್ಲರಿಗು ತಮ್ಮ ವಂದನೆಗಳನ್ನು ಅರ್ಪಿಸಿದರು.

ಇದೀಗ ಎರಡೂ ಕೃತಿಗಳು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದ್ದು ಆಸಕ್ತರು ಅದಮ್ಯ ಪ್ರಕಾಶನದ ರವರನ್ನು 9986806272 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದರೆ ಪುಸ್ತಕ ತಲುಪುವ ಏರ್ಪಾಟು ಮಾಡುತ್ತಾರೆ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *