ಸೌರವ್ಯೂಹ – 1

ಅನಂತ ಕೋಟಿ ಬ್ರಹ್ಮಾಂಡ ಇದು ನಾವೆಲ್ಲರೂ ಉಪಯೋಗಿಸುವ ಸಾಮಾನ್ಯ ಪದ. ಬ್ರಹ್ಮಾಂಡ ನಮ್ಮ ಊಹೆಗೂ ನಿಲುಕ್ಕದ್ದು. ಅದರಲ್ಲಿ ಸೂರ್ಯ ಒಂದು ತಾರೆ ಅಷ್ಟೇ ಇಂತಹ ತಾರೆಗಳು ಬ್ರಹ್ಮಾಂಡದಲ್ಲಿ ಅಗಣ್ಯ. ನಮ್ಮ ಸೂರ್ಯವ್ಯೂಹ ಅದರ ಸುತ್ತ ಸುತ್ತುವ ಗ್ರಹಗಳು, ಅವುಗಳ ಹುಟ್ಟು, ಮಹತ್ವ, ಜೀವಾಂಶ ಅವುಗಳ ಉಪಗ್ರಹಗಳು ಎಂದೆಂದಿಗೂ ವಿಸ್ಮಯ. ಬನ್ನಿ ವಾರದಿಂದ ವಾರಕ್ಕೆ ಅವುಗಳನ್ನು ಒಂದೊಂದಾಗಿ ತಿಳಿಯೋಣ…

ಸೌರವ್ಯೂಹದ ಹುಟ್ಟು

ಆಕಾಶಗಂಗೆ

ಆಕಾಶಗಂಗೆಯ ಒಂದು ಪ್ರದೇಶ, ಅದರಲ್ಲಿನ ಬೃಹತ್ ಅಶ್ವಿಕ ಮೋಡ (Horizontal cloud) ತನ್ನ ಗುರುತ್ವ ಕುಸಿತದಿಂದ 4.658 ಶತಕೋಟಿ ವರ್ಷಗಳ (ಸುಮಾರು 500 ಕೋಟಿ) ಹಿಂದೆ ರೂಪುಗೊಂಡಿತು ಎಂದು ಹೇಳಲಾಗಿದೆ. ಈ ಆರಂಭಿಕ ಮೋಡ ಅನೇಕ ಜ್ಯೋತಿವರ್ಷಗಳ ವಿಸ್ತಾರವಿದ್ದು ಹಲವಾರು ನಕ್ಷತ್ರಗಳಿಗೆ ಜನ್ಮ ನೀಡಿತು. ಅಶ್ವಿಕ ಮೋಡಗಳು ವಿಶಿಷ್ಟವಾಗಿರುವಂತೆ, ಈ ಒಂದು ಮೋಡ ಅಲ್ಪ ಹೀಲಿಯಂ, ಬಹಳಷ್ಟು ಜಲಜನಕವನ್ನು ಮತ್ತು ನಕ್ಷತ್ರಗಳ ಹಿಂದಿನ ಪೀಳಿಗೆಗೆ ಕೂಡಿಕೊಂಡ ಭಾರವಾದ ಮೂಲವಸ್ತುಗಳನ್ನು ಒಳಗೊಂಡಿತ್ತು.

Solar Nebula

ಸಣ್ಣ ಪ್ರಮಾಣದ ಪೂರ್ವ ಸೌರ (Pre -Solar Nebula) ಜ್ಯೋತಿರ್ಮೇಘ ಎಂಬ ಹೆಸರುಳ್ಳ ಇದು ಸೌರವ್ಯೂಹವಾಹಿತು. ಹೀಗೆ ಪತನಗೊಂಡ ಕೋನೀಯ ಆವೇಗದ ಸಂರಕ್ಷಣೆಯ ಕಾರಣ ಅದು ವೇಗವಾಗಿ ತಿರುಗಲು ಆರಂಭಿಸುತ್ತದೆ. ಹೆಚ್ಚಿನ ದ್ರವ್ಯರಾಶಿ ಸಂಗ್ರಹವಾದ ಮಧ್ಯಭಾಗವು ಸುತ್ತಲಿನ ಚಪ್ಪಟೆಯಾಕಾರದ ಡಿಸ್ಕಿಗಿಂತ ಹೆಚೆಚ್ಚು ಬಿಸಿಯಾಯಿತು. ಸಂಕುಚಿಸುತ್ತಿರುವ ಜ್ಯೋತಿರ್ಮೇಘ (Nebula) ವೇಗವಾಗಿ ತಿರುಗಲು ಸುಮಾರು 1.5 ಲಕ್ಷ ಕಿಲೋಮೀಟರ್ ವ್ಯಾಸದ ಒಂದು ಭ್ರೂಣಗ್ರಹ ತಟ್ಟೆ (Protoplanetary disc) ಆಯಿತು. ಕೇಂದ್ರದಲ್ಲಿ ದಟ್ಟವಾದ ಬಿಸಿ ಭ್ರೂಣ ತಾರೆ (Photostar) ರೂಪುಗೊಂಡಿತು. ಈ ದ್ರವ್ಯ ರಾಶಿಯುಳ್ಳ ಅಗಾಧ ವಿಶಾಲ ತಟ್ಟೆಯಿಂದ ವೃದ್ಧಿಗೊಂಡು ಗ್ರಹಗಳು ರೂಪುಗೊಂಡವು. ಇದರಲ್ಲಿ ಧೂಳು ಮತ್ತು ಅನಿಲಗಳು ಗುರುತ್ವಾಕರ್ಷಣದಿಂದ ಮತ್ತು ದೊಡ್ಡ ಕಾಯಗಳನ್ನು ನಿರ್ಮಿಸುವ ಸಲುವಾಗಿ ಒಟ್ಟುಗೂಡಿಸಲು ಪರಸ್ಪರ ಆಕರ್ಷಿಸಿತು. ಆರಂಭಿಕ ಸೌರವ್ಯೂಹದಲ್ಲಿ ಭ್ರೂಣ ಗ್ರಹಗಳು (Photo Planet) ನೂರಾರು ಅಸ್ತಿತ್ವದಲ್ಲಿದ್ದವು ಎಂದು ಊಹಿಸಬಹುದು, ಆದರೆ ಅವೆಲ್ಲವೂ, ಗ್ರಹಗಳು, ಕುಬ್ಜ ಗ್ರಹಗಳು, ಮತ್ತು ಉಳಿದ ಸಣ್ಣ ಕಾಯಗಳನ್ನು ಬಿಟ್ಟು ವಿಲೀನಗೊಂಡಿತು ಅಥವಾ ನಾಶವಾದವು.

ಆರಂಭಿಕ ಸೌರವ್ಯೂಹದಲ್ಲಿ

Solar System overview

ಬಿಸಿ ಭ್ರೂಣ ತಾರೆಗಳಲ್ಲಿ ಹೆಚ್ಚಿನ ಕುದಿಯುವ ಬಿಂದುಗಳಿದ್ದುದ್ದರಿಂದ ಕೇವಲ ಲೋಹಗಳು ಮತ್ತು ಸಿಲಿಕೇಟ್ ಗಳು ಸೂರ್ಯನ ಹತ್ತಿರ ಬೆಚ್ಚಗಿನ ಒಳ ಸೌರವ್ಯೂಹದಲ್ಲಿ ಘನ ರೂಪದಲ್ಲಿ ಕಂಡು ಬರುತ್ತವೆ, ಮತ್ತು ಅಂತಿಮವಾಗಿ ಬುಧ, ಶುಕ್ರ, ಭೂಮಿ ಮತ್ತು ಮಂಗಳದಲ್ಲಿನ ನೈಸರ್ಗಿಕ ಗ್ರಹಗಳನ್ನು ರೂಪಿಸಿವೆ, ಏಕೆಂದರೆ ಲೋಹದ ಅಂಶಗಳನ್ನು ಕೇವಲ ಸೌರ ಜ್ಯೋತಿರ್ಮೇಘವು ಸ್ವಲ್ಪವೇ ಭಾಗ ಒಳಗೊಂಡಿತ್ತು. ಘನ ರೂಪಿ ಗ್ರಹಗಳು ದೊಡ್ಡ ಗಾತ್ರದಲ್ಲಿ ಬೆಳೆಯಲು ಸಾಧ್ಯವಾಗಿಲ್ಲ. ಹಿಮರೇಖೆಗಿಂತ ಮೀರಿ ರೂಪುಗೊಂಡ ದೈತ್ಯ ಗ್ರಹಗಳು (ಗುರು, ಶನಿ, ಯುರೇನಿಯಸ್ ಮತ್ತು ನೆಪ್ಟ್ಯೂನ್) ಮತ್ತಷ್ಟು ದೂರಸರಿದವು. ಮಂಗಳ ಮತ್ತು ಗುರುಗ್ರಹಗಳ ಕಕ್ಷೆಯ ನಡುವಿನ ಬಿಂದುವು ಹಿಮದ ಸಂಯುಕ್ತಗಳು ಘನವಸ್ತುವಾಗಿ ಉಳಿಯಲು ಸಾಕಷ್ಟು ತಂಪಾದ ಸ್ಥಿತಿ ಇದೆ. ಈ ಗ್ರಹಗಳು ರೂಪುಗೊಂಡ ಮಂಜಿನ ಪ್ರಮಾಣ ಒಳಭಾಗದಲ್ಲಿರುವ ಗಟ್ಟಿ ಗ್ರಹಗಳಲ್ಲಿದ್ದ ಲೋಹಗಳು ಮತ್ತು ಸಿಲಿಕೇಟ್ ಗಳ ಪ್ರಮಾಣಕ್ಕಿಂತ ಬಹಳ ಹೆಚ್ಚಿಗೆ ಇತ್ತು. ಜಲಜನಕ ಮತ್ತು ಹೀಲಿಯಂ ಹಗುರವಾದ ಮತ್ತು ವಿಫುಲ ಅಂಶಗಳ ದೊಡ್ಡ ವಾಯುಮಂಡಲವನ್ನ ಹಿಡಿಯಲು ಬೃಹತ್ತಾಗಿ ಬೆಳೆಯಿತು. ಗ್ರಹಗಳು ಪಡೆಯದೇ ಉಳಿದ ಅವಶೇಷಗಳು ಕ್ಷುದ್ರಗ್ರಹಗಳಾಗಿ ಊರ್ಟ್ ಮೋಡ ಪ್ರದೇಶಗಳಲ್ಲಿ ಸಂಗ್ರಹಗೊಂಡವು.

ಇನ್ನಷ್ಟು ಮಾಹಿತಿ ಮುಂದಿನವಾರದಲ್ಲಿ…

ಕನಸು

Related post