–ಪ್ಲುಟೊ-
ಪ್ಲುಟೊ ಸೌರಮಂಡಲದಲ್ಲಿ ತಿಳಿದಿರುವಂತೆ ಅತೀ ದೊಡ್ಡ ಕ್ಷುದ್ರ ಗ್ರಹ (ಏರಿಸ್ ನಂತರ) ಮತ್ತು ಸೂರ್ಯನನ್ನು ಪರಿಭ್ರಮಿಸುತ್ತಿರುವ ಹತ್ತನೇ ಅತೀ ಕುಳ್ಳ ಕಾಯವಾಗಿದೆ. ಮೂಲತಃ ಗ್ರಹವೆಂದು ವಿಂಗಡಿಸಲಾದ ಪ್ಲುಟೊ ಪ್ರಸ್ತುತದಲ್ಲಿ ಕೈಪರ್ ಪಟ್ಟಿಯ ಅತೀ ದೊಡ್ಡ ಸದಸ್ಯವಾಗಿ ಪರಿಗಣಿಸಲ್ಪಟ್ಟಿದೆ. ಕೈಪರ್ ಪಟ್ಟಿಯ ಬೇರೆ ಸದಸ್ಯ ಕಾಯಗಳಂತೆ ಪ್ಲುಟೊ ಪ್ರಮುಖವಾಗಿ ಕಲ್ಲು ಮತ್ತು ಮಂಜಿನಿಂದ ಕೂಡಿದ್ದು. ಸುಮಾರು ಸಣ್ಣ ಗಾತ್ರದ್ದಾಗಿದೆ.
ಭೂಮಿಯ ಚಂದ್ರನ ದ್ರವ್ಯರಾಶಿಯ ಸುಮಾರು ಐದನೇ ಒಂದು ಪಾಲು ಮತ್ತು ಅದರ ಗಾತ್ರದ ಮೂರನೇ ಒಂದು ಪಾಲಿನಷ್ಟಿದೆ. ಇದರ ಕಕ್ಷೆಯು ಬಹಳಷ್ಟು ಉತ್ಕೇಂದ್ರೀಯತೆಯನ್ನು ಹೊಂದಿದ್ದು ಪ್ಲುಟೊವನ್ನು ಸೂರ್ಯನಿಂದ 30-46 ಖಗೋಳಮಾನ ದೂರಕ್ಕೆ ಕೊಂಡೊಯ್ಯುತ್ತದೆ. ಇದರ ಕಕ್ಷೆಯು ಹೆಚ್ಚಿನ ಓರೆಯನ್ನು ಹೊಂದಿರುವ ಕಾರಣ, ಪ್ಲುಟೊ ಒಮೊಮ್ಮೆ ನೆಪ್ಟ್ಯೂನ್ ಗಿಂತ ಸೂರ್ಯನ ಹತ್ತಿರಕ್ಕೆ ಬರುತ್ತದೆ.
1970 ರಲ್ಲಿ ಅದರ ಆವಿಷ್ಕಾರದಿಂದ ಹಿಡಿದು 2006 ರವರೆಗೆ ಪ್ಲುಟೊವನ್ನು ಸೌರಮಂಡಲದ ಒಂಬತ್ತನೆಯ ಗ್ರಹವೆಂದು ಪರಿಗಣಿಸಲಾಗಿತ್ತು. ಇಪ್ಪತ್ತನೇ ಶತಮಾನದ ಕೊನೆಯ ಭಾಗದಲ್ಲಿ ಮತ್ತು 21ನೆ ಶತಮಾನದ ಮೊದಲನೇ ಭಾಗದಲ್ಲಿ ಹೊರ ಸೌರಮಂಡಲದಲ್ಲಿ ಪ್ಲುಟೊ ನಂತಹ ಹಲವು ಕಾಯಗಳು ಬೆಳಕಿಗೆ ಬಂದವು. ಇವುಗಳಲ್ಲಿ ಗಮನಾರ್ಹವಾದದ್ದು ಪ್ಲುಟೊಗಿಂತ 27% ಹೆಚ್ಚು ಭಾರಿಯಿದ್ದು ಚದರದ ತಟ್ಟೆಯ ಕಾಯವಾಗಿರುವ ಏರಿಸ್.
ಆಗಸ್ಟ್ 24, 2004 ರಂದು ಮೊದಲಬಾರಿಗೆ ಅಂತರರಾಷ್ಟ್ರೀಯ ಖಗೋಳಶಾಸ್ತ್ರೀಯ ಸಂಸ್ಥೆಯು “ಗ್ರಹ” ಪದವನ್ನು ವ್ಯಾಖ್ಯಾನಿಸಿತು. ಈ ವ್ಯಾಖ್ಯಾನದೊಂದಿಗೆ ಪ್ಲುಟೊ ಒಂದು ಗ್ರಹವಾಗಿ ಉಳಿದಿದೆ. ಅದನ್ನು ಏರಿಸ್ ಮತ್ತು ಸೆರಿಸ್ ಗಳೊಂದಿಗೆ. ಕುಬ್ಜಗ್ರಹವೆಂದು ವಿಂಗಡಿಸಿ ಕುಬ್ಜಗ್ರಗಳ ಪಟ್ಟಿಗೆ ಸೇರಿಸಲಾಯಿತು.
ಪ್ಲುಟೊದ ಗೋಚರ ಪ್ರಮಾಣವು ಸರಾಸರಿ 15.1 ರಷ್ಟಿದ್ದು ಇದನ್ನು ನೋಡಲು ದೂರದರ್ಶಕವು ಅತ್ಯಗತ್ಯ. ಸುಮಾರು 30 ಸೆ.ಮೀ ಕಿಂಡಿಯ ದೂರದರ್ಶಕವು ಅಪೇಕ್ಷಣೀಯ. ಇದರ ಕೋನ ವ್ಯಾಸವು ಕೇವಲ 0.11 ಅಂಗುಲಗಳಿರುವುದರಿಂದ ದೊಡ್ಡ ದೂರದರ್ಶಕಗಳಲ್ಲಿ ಇದು ಮಬ್ಬಾದ ಮತ್ತು ಬಹು ದೂರದ ಒಂದು ನಕ್ಷತ್ರದಂತೆ ಕಾಣುತ್ತದೆ. ನೋಡಲು ಇದು ತಿಳಿ ಕಂದು ಬಣ್ಣವಿದ್ದು ಸ್ವಲ್ಪವೇ ಹಳದಿ ಸಹ ಇದರಲ್ಲಿ ಸೇರಿದೆ.
ಪ್ಲುಟೊ ನ ಆವಿಷ್ಕಾರವು ಒಂದು ತಪ್ಪು ತಿಳುವಳಿಕೆಯಿಂದ ಶುರುವಾಯಿತು. ವಿಜ್ಞಾನಿಗಳು ಗ್ರಹಗಳ ಕಕ್ಷೆಗಳನ್ನು ವಿಶ್ಲೇಷಿಸುವಾಗ ಯುರೇನಸ್ ನ ಕಕ್ಷೆಯು ತಮ್ಮ ಲೆಕ್ಕಾಚಾರಗಳಿಗೆ ಹೊಂದದಿರುವುದನ್ನು ಗಮನಿಸಿದರು. ಈ ಅಸಮಂಜಸತೆಗೆ ಕಾರಣ ಒಂದು ದೂರದ ಗ್ರಹದೊಂದಿಗಿನ ಗುರುತ್ವ ಒಡನಾಡಿಗಳು ಎಂದು ಮೊದಲು ಯೋಚಿಸಲಾಯಿತು. ಆದರೆ ಪ್ಲುಟೊ ತನ್ನ ನೆರೆಯ ಗ್ರಹಗಳ ಕಕ್ಷೆಗಳ ಮೇಲೆ ಪ್ರಭಾವ ಬೀರುವಷ್ಟು ಭಾರಿಯಾಗಿಲ್ಲ. ಈ ಮೇಲಿನ ಅಸಮಂಜಸತೆಗೆ ಕಾರಣ ನೆಪ್ಟ್ಯೂನ್ ನ ದ್ರವ್ಯರಾಶಿಯನ್ನು ಸರಿಯಾಗಿ ಅಂದಾಜು ಮಾಡದಿದ್ದದ್ದು ಎಂದು ನಂತರ ತಿಳಿದುಬಂದಿತು.
ಪ್ಲುಟೊದ ವಾಯುಮಂಡಲವು ಸಾರಜನಕ, ಮಿಥೇನ್ ಮತ್ತು ಇಂಗಾಲದ ಮಾನಾಕ್ಸೈಡ್ ವಿರಳ ಲೇಪನದಿಂದ ಕೂಡಿದ್ದು, ಈ ಅನಿಲಗಳು ಗ್ರಹದ ಮೇಲ್ಮೈನ ಮಂಜಿನಿಂದ ಉದ್ಭವಿಸುತ್ತದೆ. ಪ್ಲುಟೊ ತನ್ನ ಪರಿಭ್ರಮಣೆಯ ಕಾಲದಲ್ಲಿ ಸೂರ್ಯನಿಂದ ಹೆಚ್ಚು ದೂರಕ್ಕೆ ಸರಿದರೆ ಅದರ ವಾಯುಮಂಡಲವು ನಿಧಾನವಾಗಿ ಘನೀಕರಿಸಿ ನೆಲದ ಮೇಲೆ ಬೀಳುತ್ತದೆ. ಪ್ಲುಟೊ ಸೂರ್ಯನಿಗೆ ಹೆಚ್ಚು ಹತ್ತಿರ ಬಂದಂತೆ ಅದರ ಘನ ಮೇಲ್ಮೈನ ತಾಪಮಾನವು ಹೆಚ್ಚಿ ಮಂಜು ಅನಿಲವಾಗುತ್ತದೆ. ಈ ಪ್ರಕ್ರಿಯೆಯಿಂದ ಪ್ಲುಟೊದ ಮೇಲ್ಮೈ ಸಹ ಇನ್ನು ತಣ್ಣಗಾಗುತ್ತದೆ. ಉಪಮಿಲಿವೀಟರ್ ವ್ಯೂಹವನ್ನು ಬಳಸಿ ಪ್ಲುಟೊದ ತಾಪಮಾನವು 43 ಕೆ ಅಥವಾ ನಿರೀಕ್ಷೆಗಿಂತ 10 ಕೆ ಕಡಿಮೆಯಿದೆ ಎಂದು ವಿಜ್ಞಾನಿಗಳು ಇತ್ತೀಚಿಗೆ ಕಂದು ಹಿಡಿದಿದ್ದಾರೆ.
1992 ರಲ್ಲಿ ಮೊದಲು ಕೈಪರ್ ಪಟ್ಟಿ ಕಾಯವಾದ ಆವಿಷ್ಕರಣೆಯಿಂದ ಶುರುವಾಗಿ ಪ್ಲುಟೊದ ಗ್ರಹ ಸ್ಥಾನಮಾನವು ವಿವಾದಕ್ಕೊಳಪಟ್ಟಿದೆ. ಆಗಿನಿಂದ ಮುಂದಿನ ಆವಿಷ್ಕರಣೆಗಳು ಈ ವಿವಾದವನ್ನು ತೀವ್ರಗೊಳಿಸಿವೆ.
2006 ರಲ್ಲಿ ಸಂಸ್ಥೆಯು ಗ್ರಹ ಪದಕ್ಕೆ ಒಂದು ಅಧಿಕೃತ ವ್ಯಾಖ್ಯಾನವನ್ನು ಸೃಷ್ಟಿಸಿತು. ಈ ನಿರ್ಣಯದ ಮೇರೆಗೆ ಆಕಾಶಕಾಯವನ್ನು ಒಂದು ಗ್ರಹವೆಂದು ಪರಿಗಣಿಸಲು ಅದು ಮುಖ್ಯವಾಗಿ ಮೂರು ಷರತ್ತುಗಳನ್ನು ಪಾಲಿಸಬೇಕು ಅದೆಂದರೆ:
೧. ಕಾಯವು ಸೂರ್ಯನನ್ನು ಅಥವಾ ತನ್ನ ಹತ್ತಿರದ ನಕ್ಷತ್ರವನ್ನು ಪರಿಭ್ರಮಿಸುತ್ತಿರಬೇಕು.
೨. ಕಾಯವು ತನ್ನದೇ ಗುರುತ್ವ ಬಲದಿಂದ ಗೋಳಾಕಾರದಲ್ಲಿರುವಷ್ಟು ಭಾರಿಯಾಗಿರಬೇಕು. ವಿಶಿಷ್ಟವಾಗಿ ತನ್ನದೇ ಗುರುತ್ವವು ಕಾಯವನ್ನು ದ್ರವ್ಯಸ್ಥಿತಿ ಸಮತೋಲನದ ಆಕಾರಕ್ಕೆ ತರಬೇಕು.
೩. ಕಾಯವು ತನ್ನ ಕಕ್ಷೆಯ ನೆರೆಕೆರೆಯನ್ನು ತೆರವುಗೊಳಿಸಿರಬೇಕು.
ಉಪಗ್ರಹಗಳು
ಪ್ಲುಟೊ ಮೂರು ಸ್ವಾಭಾವಿಕ ಉಪಗ್ರಹಗಳನ್ನು ಹೊಂದಿದೆ. 1878 ರಲ್ಲಿ ಕಂಡುಹಿಡಿಯಲಾದ “ಶಾರನ್” ಎರಡು ಸಣ್ಣ ಉಪಗ್ರಹಗಳಾದ ನಿಕ್ಸ್ ಮತ್ತು ಹೈಡ್ರ್ 2005 ರಲ್ಲಿ ಬೆಳಕಿಗೆ ಬಂದವು. ಒಮ್ಮೊಮ್ಮೆ ಹೈಡ್ರ್ ನಿಕ್ಸ್ ಗಿಂತ ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಇದರಿಂದ ಹೈಡ್ರ್ ನಿಕ್ಸ್ ಗಿಂತ ದೊಡ್ಡದು ಅಥವಾ ಅದರ ಮೇಲ್ಮೈ ನ ಬೇರೆ ಬೇರೆ ಭಾಗಗಳು ವಿವಿಧ ಪ್ರಕಾಶತೆಯನ್ನು ಹೊಂದಿರಬಹುದು ಎಂದು ತಿಳಿದು ಬರುತ್ತದೆ. ಗಾತ್ರಗಳನ್ನು ಪ್ರತಿಫಲನಾಂಶಗಳಿಂದ ಅಂದಾಜು ಮಾಡಲಾಗುತ್ತದೆ.
ತನ್ನ ಅಲ್ಪ ದ್ರವ್ಯರಾಶಿ ಮತ್ತು ಭೂಮಿಯಿಂದ ಅಪಾರ ದೂರಗಳ ಕಾರಣ ಪ್ಲುಟೊ ಗಗನನೌಕೆಗಳಿಗೆ ಗಮನಾರ್ಹ ಸಮಸ್ಯೆಗಳನೊಡ್ದುತ್ತದೆ. ವೋಯೇಜರ್ 1 ಪ್ಲುಟೊ ವನ್ನು ತಲುಪಬಹುದಿತ್ತಾದರೂ ಅದರ ಅಭಿಯಂತರರು ಅದನ್ನು ಶನಿಯ ಉಪಗ್ರಹವಾದ ಟೈಟಾನ್ ನತ್ತ ಕಳುಹಿಸಲು ನಿರ್ಧರಿಸಿದ್ದರಿಂದ ನೌಕೆಯ ಪಥವು ಪ್ಲುಟೊವನ್ನು ತಲುಪಲು ಸಾಧ್ಯವಾಯಿತು. ವೋಯೇಜರ್ 2 ನೌಕೆಯು ಪ್ಲುಟೊವನ್ನು ತಲುಪುವಂತಹ ಸಂಭಾವ ಪಥವನ್ನೇ ಹೊಂದಿರಲಿಲ್ಲ ಎಂಬುದು ಸೋಜಿಗದ ವಿಷಯ.
ಕನಸು