ಸೌರವ್ಯೂಹ – 12 – ಕ್ಷುದ್ರ ಗ್ರಹ

ಕ್ಷುದ್ರ ಗ್ರಹ – Asteroid

ಸೌರವ್ಯೂಹ ಒಳಗಿನ ಚಿಕ್ಕ ಗ್ರಹವು “ಕ್ಷುದ್ರ ಗ್ರಹ” ವಾಗಿದೆ. ಮಂಗಳ ಹಾಗು ಗುರು ಗ್ರಹದ ನಡುವಿನ ಅಂತರದಲ್ಲಿ ಅಸಂಖ್ಯಾತ ಕ್ಷುದ್ರಗ್ರಹಗಳು (Asteroids) ಇವೆ. ಸುಮಾರು 3000 ದಷ್ಟು ಕ್ಷುದ್ರಗ್ರಹಗಳನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ. ಗುರುತಿಸಲಾಗದ ಇನ್ನೂ ಅಸಂಖ್ಯಾತವಾಗಿ ಇವೆ.

Ceres

ಇವುಗಳಲ್ಲಿ ಅತ್ಯಂತ ದೊಡ್ಡದಾದದ್ದು ‘ಸೆರೆಸ್’. ಇದರ ವ್ಯಾಸವು ಕೇವಲ 687 ಕಿಲೋಮೀಟರ್. ಇವುಗಳ ಗಾತ್ರ 16 ರಿಂದ 800 ಕಿ.ಮೀ. (1 ರಿಂದ 500 ಮೈಲಿಗಳು). ಇವು ಸೂರ್ಯನ ಸುತ್ತ ಪ್ರದಕ್ಷಿಣೆ 643 ರಿಂದ 5000 ದಿನಗಳನ್ನು ತೆಗೆದುಕೊಳ್ಳುತ್ತವೆ. ಕೆಲವು ಖಗೋಳ ವಿಜ್ಞಾನಿಗಳ ಪ್ರಕಾರ ಅಸ್ಟೆರೊಯ್ಡ್ ಗಳ ಹುಟ್ಟು ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಆಗಿದೆ. ಮಂಗಳಗ್ರಹದ ಕಕ್ಷೆ ಹಾಗು ಗುರುಗ್ರಹದ ಕಕ್ಷೆಯ ಮೇಲೆ ಸೂರ್ಯನ ಸುತ್ತಾ ಪರಿಭ್ರಮಿಸುತ್ತಿರುವ ಅಸಂಖ್ಯಾತ ಆಕಾಶಕಾಯಗಳು ಇವೆ. ಸೌರವ್ಯೂಹದ ಇತರೆ ಸದಸ್ಯರಂತೆ (ಉದಾ: ಭೂಮಿ, ಚಂದ್ರ ಇತ್ಯಾದಿ..) ಕ್ಷುದ್ರಗ್ರಹಗಳು ಸಹ ಜಡ ವಸ್ತುಗಳೇ (ನಕ್ಷತ್ರಗಳಲ್ಲ ಎಂಬ ಅರ್ಥದಲ್ಲಿ) ಮಂಗಳ ಹಾಗು ಗುರು ಕಕ್ಷೆಗಳ ನಡುವೆ ಒಂದು ಗ್ರಹ ಸೂರ್ಯನನ್ನು ಪರಿಭ್ರಮಿಸುತ್ತಿರಬಹುದು ಎಂಬ ಊಹೆಯನ್ನು ಮೊದಲು ಮಂಡಿಸಿದ್ದು ಯೊಹಾನ್ ಕೆಪ್ಲರ್.

ಗೈಸೆಪ್ಪೆ ಪಿಯಾಝಿ

ಸಿಸಿಲಿ ದೇಶದ ಖಗೋಳಜ್ಞ “ಗೈಸೆಪ್ಪೆ ಪಿಯಾಝಿ” ಎಂಬಾತ ಆಕಾಶದ ವೃಷಭ ರಾಶಿ ವಲಯವನ್ನು ಚಿತ್ರಿಸುವುದರಲ್ಲಿ ಮಗ್ನನಾಗಿದ್ದ. 1801 ರ ಜನವರಿ 1 ರಂದು ಆವರೆಗೂ ಗುರುತಿಸದಿದ್ದ ಒಂದು ಹೊಸ ನಕ್ಷತ್ರವನ್ನು (19 ನೇ ಶತಮಾನದ ಪ್ರಥಮ ರಾಶಿ) ಗಮನಿಸಿದ. ಇದರಿಂದ ಕೊತುಹಲವಿಷ್ಟನಾಗಿ “ಗೈಸೆಪ್ಪೆ” ಮುಂದಿನ ಎರಡು ರಾಶಿಗಳ ಕಾಲವು ಎಡೆಬಿಡದೆ ಈ ನಕ್ಷತ್ರದ ಸ್ಥಾನವನ್ನು ಅವಲೋಕಿಸಿದಾಗ ಅದು ಬದಲಾಗಿದುದ್ದನ್ನು ಕಂಡ. ನಕ್ಷತ್ರಗಳ ಸಾಪೇಕ್ಷಸ್ಥಾನಗಳು ಬದಲಾಗಲು ಯುಗ ಯುಗಗಳೇ ಬೇಕು. ಅದರಿಂದ ಈ ಹೊಸ ನಕ್ಷತ್ರ ನಿಜ ನಕ್ಷತ್ರವಲ್ಲ. ಸೌರವ್ಯೂಹದ ಒಂದು ವಸ್ತುವಾಗಿರಬೇಕು “ಗೈಸೆಪ್ಪೆ” ತರ್ಕಿಸಿ ಅದು ಪ್ರಾಯಶ ಒಂದು ಧೂಮಕೇತು ಇರಬಹುದು ಎಂದು ಅಂದಾಜು ಮಾಡಿದ. ಆದರೆ ಈ ಕಾಯದ ವರ್ತನೆ ಬಲು ವಿಚಿತ್ರವಾಗಿದ್ದು ಜನವರಿ 14 ರಂದು ಅದು ತನ್ನ ದಿಶೆಯನ್ನು ಬದಲಾಯಿಸಿತು. ಆವರೆಗೂ ಸ್ಥಿರನಕ್ಷತ್ರಗಳ ಹಿನ್ನಲೆಯಲ್ಲಿ ಪಶ್ಚಿಮ ಪೂರ್ವ ದಿಶೆಯ ಚಲನೆಯನ್ನು ಪ್ರದರ್ಶಿಸಲು ತೊಡಗಿತು. “ಗೈಸೆಪ್ಪೆ” ವಿಕ್ಷೀತಾಂಶಗಳಿಗೆ ಗಣಿತವನ್ನು ಅನ್ವಯಿಸಿ ಒಂದು ಖಚಿತ ನಿರ್ಧಾರವನ್ನು ತಳೆಯುವುದು ಅವನಿಗೆ ಆಗಲಿಲ್ಲ. ಇದೊಂದು ಹೊಸ ಗ್ರಹವೆಂದೂ ಇದರ ವರ್ಷ (ಸೂರ್ಯನಿಗೆ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಅವಧಿ) ಸುಮಾರು 4 ಭೂಮಿ ವರ್ಷಗಳೆಂದೂ ಪ್ಯಾಟ್ಸಿ ಅಂದಾಜು ಮಾಡಿದ್ದ. ಈ ಗ್ರಹಕ್ಕೆ ‘ಸೆರಿಸ್’ ಎಂದು ಅವನೇ ಹೆಸರಿಟ್ಟದ್ದು.

ಗೌಸ್ ಎಂಬ ಖಗೋಳಜ್ಞನ ಲಕ್ಷ್ಯವನ್ನು ಆಗುಂತಕ ಕಾಯದ ಜಾರಿಕೆಯ ಚಾಲನೆ ವಿಶೇಷವಾಗಿ ಆಕರ್ಷಿಸಿತು. ಗೌಸ್ ತನಗೆ ದೊರೆತ ಗೈಸೆಪ್ಪೆಯ ವೀಕ್ಷಣ ಅಂಶಗಳ ಆಧಾರದ ಮೇಲೆ ನ್ಯೂಟನ್ ಸೂತ್ರಗಳ ಚೌಕಟ್ಟಿನಲ್ಲಿ ಗ್ರಹಗಳ ಕಕ್ಷೆಗಳನ್ನು ನಿರ್ಧರಿಸುವ ನವಗಣಿತ ವಿಧಾನವನ್ನೇ ರೂಪಿಸಿದ.

ಸೆರೆಸ್ ಅವಿಷ್ಕಾರಣದ ವರ್ಷ ಜನವರಿ 1801, ಪಲ್ಲಾಸ್ – ಮಾರ್ಚ್ 1802, ಜೂನೋ – 1804, ವೆಸ್ಟ್ – 1807, ಐದನೆಯದರ ಶೋಧವಾದದ್ದು 1845 ರಲ್ಲಿ 1890 ರ ವೇಳೆಗೆ 300 ಕ್ಕೂ ಮಿಕ್ಕಿ ಭಿನ್ನ ಕ್ಷುದ್ರಗ್ರಗಳನ್ನು ಆವಿಷ್ಕರಿಸಲಾಯಿತು. ಇಂದಿನವರೆಗೂ 60000 ಕ್ಕೂ ಮೇಲ್ಪಟ್ಟು ಕ್ಷುದ್ರಗ್ರಹಗಳ ಒಂದು ಯಾದಿಯೇ ಸಿದ್ಧವಾಗಿದೆ.

ಕ್ಷುದ್ರಗ್ರಹಗಳ ಸಮಗ್ರ ದ್ರವ್ಯರಾಶಿ ಖಚಿತವಾಗಿ ತಿಳಿದಿಲ್ಲ. ಅದು ಸುಮಾರಾಗಿ ಚಂದ್ರನ 1/20 ರಷ್ಟು ಅಥವಾ ಭೂಮಿಯ 1/1600 ರಷ್ಟು ಇರಬಹುದೆಂದು ಅಂದಾಜು. ಈ ದೃಷ್ಟಿಯಲ್ಲಿ ಕ್ಷುದ್ರಗ್ರಹಗಳೆಲ್ಲವನ್ನು ಒಂದುಗೂಡಿಸಿ ಒಂದೇ ಗ್ರಹವನ್ನಾಗಿ ಮಾಡಿದರು ಅದೊಂದು ಪ್ರಥಮ ದರ್ಜೆಯ ಗ್ರಹವಾಗಲಾರದು. ಆದ್ದರಿಂದ ಸೌರವ್ಯೂಹದ ರಚನೆಯ ಕಾಲದಲ್ಲೇ ಭೂಮಿ, ಮಂಗಳ, ಇವೇ ಮೊದಲಾದ ಗ್ರಹಗಳ ಗಾತ್ರದಲ್ಲೇ ಒಂದು ಗ್ರಹ ಮಂಗಳ ಹಾಗು ಗುರು ಕಕ್ಷೆಗಳ ನಡುವೆ ರಚಿತವಾಗಿದ್ದು ಮುಂದೆ ಅದೇ ಒಡೆದುಹೋಗಿ ಕ್ಷುದ್ರಗ್ರಹಗಳಾದವೆನ್ನವ ಊಹೆಗೆ ಸರಿಯಾದ ಸಮರ್ಥನೆ ದೊರಕುವುದಿಲ್ಲ. ಸೌರವ್ಯೂಹದ ರಚನೆಯ ಕಾಲದ ಅವಶೇಷಗಳೇ ಈ ಭಿನ್ನ ಆಕರಗಳ ದ್ರವ್ಯರಾಶಿಗಳ ತುಣುಕುಗಳ ಸಮುದಾಯವಾಗಿರಬೇಕು ಎಂದು ನಂಬಲಾಗಿದೆ.

ಸೌರವ್ಯೂಹದ ಉಗಮ ವಿಕಾಸನಗಳನ್ನು ಚರ್ಚಿಸುವಾಗ ಸೌರವ್ಯೂಹದ ಪ್ರಾಚಲಗಳ ಮತ್ತು ಸ್ಥಿರಾಂಕಗಳ ನಿರ್ಧಾರವನ್ನು ಮಾಡುವಾಗ ಸೌರವ್ಯೂಹದ ವೈಚಿತ್ರವನ್ನು ಮತ್ತು ವೈಶಿಷ್ಟವನ್ನು ಅಭ್ಯಸಿಸುವಾಗ ಕ್ಷುದ್ರ ಗ್ರಹಗಳ ಪಾತ್ರ ಮಹತ್ವಪೂರ್ಣವಾದದ್ದು.

ಕನಸು

Related post

Leave a Reply

Your email address will not be published. Required fields are marked *