ಸೌರವ್ಯೂಹ – 2

ಸೂರ್ಯನು ಬೇಕು ಬೆಳಕು ಕೊಡಲು ಸೂರ್ಯನು ಬೇಕು ಬಿಸಿಲು ಕೊಡಲು…

ಈ ವಾಕ್ಯದ ತೀವ್ರತೆ ನಮಗೆ ತಿಳಿದದ್ದು ಕಳೆದೆರಡು ವಾರಗಳಲ್ಲಿ.
ಗಂಡನೊಡನೆ ಮುನಿದ ಹೆಂಡತಿಯಂತಾಗಿದ್ದ ಸೂರ್ಯದೇವ!

ಈ ವಾರ ಸೂರ್ಯನ ಜನ್ಮ ರಹಸ್ಯವನ್ನು ತಿಳಿಯೋಣ

ಸೂರ್ಯನ ಜನನ

ಚಿತ್ರ ಕೃಪೆ: ದಿ ನ್ಯೂಯಾರ್ಕ್ ಟೈಮ್ಸ್

ಗ್ರಹಗಳು ಪಡೆಯದೇ ಉಳಿದ ಅವಶೇಷಗಳು ಕ್ಷುದ್ರ ಗ್ರಹ ಪಟ್ಟಿ ಕೈಪರ್ ಪಟ್ಟಿ. ಇಂತಹ ಮತ್ತು ಊರ್ಟ್ ಮೋಡದ ಪ್ರದೇಶಗಳಲ್ಲಿ ಸಂಗ್ರಹಗೊಂಡವು. ಹೀಗೆ ಘನೀಕರಿಸಿದ 60 ದಶಲಕ್ಷ ವರ್ಷಗಳ ಒಳಗೆ ಜಲಜನಕದ ಸಾಂದ್ರತೆಯು ಭ್ರೂಣ ಸೂರ್ಯನ (ಫೋಟೋಸ್ಟಾರ್) ಮಧ್ಯಭಾಗದಲ್ಲಿ ವೇಗೋತ್ಕರ್ಷದ ಸಮ್ಮಿಲನ ಆರಂಭಿಸಲು ಸಾಕಷ್ಟು ಒತ್ತಡ ಹೆಚ್ಚಿಸಿಕೊಂಡು ಉಷ್ಣದ ಗುರುತ್ವಾಕರ್ಷಣೆಗೆ ಸರಿಗಟ್ಟಿತು. ಸೂರ್ಯನು ಮುಖ್ಯ ಅನುಕ್ರಮ ತಾರೆಯಾದನು. ಈ ಅನುಕ್ರಮಕ್ಕೆ 10 ಶತಕೋಟಿ ವರ್ಷಗಳ ಸಮಯ ಹಿಡಿದಿದೆ. ಹಿಂದಿನ ಇತರೆ ಹಂತಗಳು ಸೇರಿ ಸುಮಾರು ಎರಡು ಶತಕೋಟಿ ವರ್ಷಗಳ ಅವಧಿ ಹಿಡಿದಿದೆ. ಸೂರ್ಯನಿಂದ ಹೊರಟ ಸೌರ ಮಾರುತವು ಹೆಲಿಯೊಸ್ಪಿಯರ್ ನನ್ನು ಸೃಷ್ಟಿಸಿತು. ಅಳಿದುಳಿದ ಅನಿಲ ಮತ್ತು ದೂಳನ್ನು ಪ್ರೋಟೋಪ್ಲಾನೆಟರಿ ಡಿಸ್ಕಿನಿಂದ ಅಂತರತಾರ ಬಾಹ್ಯಾಕಾಶಕ್ಕೆ ತಳ್ಳುತ್ತದೆ. ಇದರೊಟ್ಟಿಗೆ ದೂರ ಗ್ರಹಗಳ ರಚನೆಯ ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಸೂರ್ಯ ಈಗ ಪ್ರಮುಖಾನುಕ್ರಮ ಅನುಕ್ರಮ ಜೀವನದಲ್ಲಿ ವೃದ್ಧಿಸಿ ಪ್ರಕಾಶಮಾನವಾಗುತ್ತದೆ. ಪ್ರಾರಂಭದಲ್ಲಿ ಸೂರ್ಯನ ಪ್ರಕಾಶ ಇಂದಿನದರ 70% ಆಗಿತ್ತು.

ಕೃಪೆ : Sai Sathya Youtube Channel

ಸೌರವ್ಯೂಹದ ಪ್ರಧಾನ ಘಟಕ ಸೂರ್ಯ. ಇಡೀ ಸೌರವ್ಯೂಹದ ತೂಕದ 99.86% ರಷ್ಟು ದ್ರವ್ಯರಾಶಿಯನ್ನು ಸೂರ್ಯನೇ ಹೊಂದಿದ್ದಾನೆ. ಇದರಿಂದಾಗಿಯೇ ಸೂರ್ಯನು ಗುರುತ್ವಾಕರ್ಷಣೆಯಲ್ಲಿ ಅತಿ ಪ್ರಭಲನಾಗಿದ್ದಾನೆ. ಸೂರ್ಯ ಪ್ರತಿ ಸೆಕೆಂಡಿಗೆ ಸರಿ ಸುಮಾರು 600 ಮಿಲಿಯನ್ ಟನ್ ಹೈಡ್ರೋಜನ್ ನನ್ನು ಹೀಲಿಯಂ ಆಗಿ ಪರಿವರ್ತಿಸುವ ಕ್ರಿಯೆಯಲ್ಲಿ ಸರಿಸುಮಾರು ನಾಲ್ಕು ದಶಲಕ್ಷ ಟನ್ ವಸ್ತುಗಳನ್ನು ಶಕ್ತಿಯಾಗಿ ಪರಿವರ್ತಿಸುತ್ತಾನೆ. ಸೂರ್ಯನ ಹೊರತಿರುಳಿನ ಶಾಖ 15.7 ದಶಲಕ್ಷ ಕೆಲ್ವಿನ್. ಇದಕ್ಕೆ ವಿರುದ್ಧವಾಗಿ ಸೂರ್ಯನ ಮೇಲ್ಮೈ ತಾಪಮಾನವು ಸುಮಾರು 5800 ಕೆಲ್ವಿನ್.

ಎಲ್ಲಾ ಗ್ರಹಗಳು ಮತ್ತು ಇತರ ವಸ್ತುಗಳು ಸೂರ್ಯನನ್ನು ಒಂದೇ ದಿಕ್ಕಿನಲ್ಲಿ ಸುತ್ತುತ್ತವೆ. ಸೂರ್ಯನನ್ನು ಭೂಮಿಯು ಸುತ್ತುತಿರುವುದರಿಂದ ನಮಗೆ ಸೂರ್ಯನು ಖಗೋಲದಲ್ಲಿ ಪೂರ್ವದಿಂದ ಪಶ್ಚಿಮದ ಕಡೆ ಆಕಾಶದಲ್ಲಿ ಸಂಚರಿಸುವಾಗ ಕ್ರಾಂತಿವೃತ್ತ ವೆಂಬ ಪಥವನ್ನು ಚಿತ್ರಿಸುತ್ತಾನೆ.

ಸೂರ್ಯನನ್ನು ಸುತ್ತುವ ಭೂಪಥವು ಅಂಡಾಕಾರವಾಗಿದ್ದು ಭೂಮಿಯಿಂದ ಸೂರ್ಯನ ಸರಾಸರಿ ದೂರ ಸುಮಾರು 93 ಮಿಲಿಯನ್ (9,30,05,000) ಮೈಲಿಗಳು. ಇದು ಆಕಾಶದಲ್ಲಿ ನಕ್ಷತ್ರಗಳ ದೂರ ನಿರ್ಣಯಕ್ಕೆ ಆಧಾರವಾಗಿದೆ. ಸೂರ್ಯನ ಉದರವು ಭೂಮಿಯ ಗಾತ್ರದ 13 ಲಕ್ಷದಷ್ಟು ಭಾರ ಮೂರು ಲಕ್ಷದ ಮೂವತ್ತೆರಡು ಸಾವಿರದ ಒಂಬೈನೂರು (3,32,900) ಭೂದ್ರವ್ಯರಾಶಿಗಳು.

ಇಷ್ಟೂ ಸೂರ್ಯನ ಜನನ ಹಾಗು ಇತರೆ ವಿಚಾರಗಳು. ಇನ್ನು ಇತರೆ ಗ್ರಹಗಳ ಬಗ್ಗೆ ಒಂದೊಂದಾಗಿ ಪ್ರತಿವಾರವೂ ತಿಳಿಯೋಣ…

ಕನಸು

Related post