ಸೌರವ್ಯೂಹ – 3 – ಬುಧ ಗ್ರಹ

ಸೂರ್ಯನ ಕುಟುಂಬ

ನಾಲ್ಕು ಭೂಸದೃಶ ಅಥವಾ ಸೌರವ್ಯೂಹದ ಒಳಬಾಗದಲ್ಲಿರುವ ಗ್ರಹಗಳು ದಟ್ಟವಾದ ಕಲ್ಲಿನ ಸಂಯೋಜನೆಗಳನ್ನು ಹೊಂದಿವೆ. ಕೆಲವಕ್ಕೆ ಯಾವುದೇ ಚಂದ್ರನಿಲ್ಲ ಅಥವಾ ಯಾವುದೇ ಉಂಗುರದ ವ್ಯವಸ್ಥೆಗಳನ್ನು ಹೊಂದಿಲ್ಲ. ಅವು ಹೆಚ್ಚಾಗಿ ಗಟ್ಟಿತನ ರೂಪಿಸುವ ಕಬ್ಬಿಣ್ಣ ಮತ್ತು ನಿಕ್ಕಲ್ ಗಳನ್ನೂ ತಮ್ಮ ಕಾಯ ಕೇಂದ್ರದಲ್ಲಿ ಹೊಂದಿವೆ. ಅವು ಸುಸ್ಥಿರ ಲೋಹಗಳಾದ ಸಿಲಿಕೇಟ್ ಮತ್ತು ಖನಿಜಗಳ ಗಟ್ಟಿ ಮೇಲ್ಕವಚದಿಂದ ರಚಿತವಾಗಿವೆ. ನಾಲ್ಕು ವ್ಯೂಹದ ಒಳಭಾಗದಲ್ಲಿರುವ ಶುಕ್ರ, ಭೂಮಿ ಮತ್ತು ಮಂಗಳ ಗ್ರಹಗಳು ಹವಾಮಾನ ಸೃಷ್ಟಿಸಲು ಸಾಕಷ್ಟು ಗಣನೀಯ ವಾಯುಮಂಡಲವನ್ನು ಹೊಂದಿವೆ. ಎಲ್ಲ ಮೂರು ಆಳ ಕಣಿವೆಗಳು ಮತ್ತು ಅಗ್ನಿಪರ್ವತಗಳನ್ನು ಹೊಂದಿವೆ.

ಸೂರ್ಯನ ಕುಟುಂಬಗಳಾದ ಗ್ರಹಗಳ ಬಗ್ಗೆ ಒಂದೊಂದಾಗಿ ತಿಳಿಯೋಣ.

ಬುಧ – Mercury

ಚಿತ್ರ ಕೃಪೆ : ನಾಸಾ

‘ಬುಧ’ ಸೂರ್ಯನ ಅತೀ ಸಮೀಪವಿರುವ ಹಾಗು ಸೌರಮಂಡಲದ ಅತೀ ಚಿಕ್ಕ ಗ್ರಹ (0.055 ಭೂದ್ರವ್ಯ ರಾಶಿಗಳು). ಸೂರ್ಯನಿಗೆ ಬುಧ ಗ್ರಹ 6 ಲಕ್ಷ ಕೋಟಿ ಕಿಲೋಮೀಟರ್ ನಷ್ಟು ದೂರ ಇದೆ. ಬುಧ ಯಾವುದೇ ನೈಸರ್ಗಿಕ ಉಪಗ್ರಹಗಳನ್ನು ಹೊಂದಿಲ್ಲ. ಉಲ್ಕೆಗಳ ದಾಳಿಯ ಪರಿಣಾಮ ಅಸಂಖ್ಯ ಕುಳಿಗಳು ಅದರ ಏಕ ಮಾತ್ರ ಭೌಗೋಳಿಕ ಲಕ್ಷಣ. ಬುಧದ ವಾಯುಮಂಡಲದ ಮೇಲ್ಬಾಗವು, ಸೌರಮಾರುತ ಅದರ ಮೇಲ್ಮೆಯನ್ನು ಬಡಿದು ಹಾರಿಸಿದ ಅತೀ ಸೂಕ್ಷ್ಮ ಕಣಗಳನ್ನು ಒಳಗೊಂಡಿದೆ. ಅದರ ವಾತಾವರಣ ದೊಡ್ಡ ಕಬ್ಬಿಣದ ತಿರುಳು ಮತ್ತು ತೆಳುವಾದ ಮೇಲ್ಪದರ ಇವುಗಳನ್ನು ಇನ್ನೂ ಸಮರ್ಪಕವಾಗಿ ವಿವರಿಸಲಾಗಿಲ್ಲ. ಅದರ ಹೊರ ಪದರಗಳನ್ನು ಸೂರ್ಯನ ದೈತ್ಯ ಪ್ರಭಾವದಿಂದಾಗಿ ಕಳಚಿದೆ ಎಂದು ಕಲ್ಪನೆ ಮಾಡಲಾಗಿದೆ. ಅಥವಾ ಇದು ಆರಂಭದ ಬಾಲಸೂರ್ಯನ ಪ್ರಭಾವದಿಂದ ಮೇಲ್ಪದರ ಅಂಟಿದ್ದು ಸಂಪೂರ್ಣವಾಗಿ ನಾಶವಾಗುವುದನ್ನು ತಡೆಯಲಾಗಿದೆ ಎಂದು ಹೇಳುತ್ತಾರೆ.

ಹೊರಗಿನಿಂದ ನೋಡುವುದಕ್ಕೆ ನಮ್ಮ ಚಂದ್ರನಂತೆ ಕಾಣುವ ಬುಧ ಸೂರ್ಯನ ಸುತ್ತ ಪ್ರತಿ 88 ದಿನಗಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತದೆ. ಬುಧವು ಸೂರ್ಯನ ಸುತ್ತ ವೇಗವಾಗಿ ಸುತ್ತುವ ಕಾರಣ ಪ್ರಾಚೀನ ರೋಮನ್ನರು ತಮ್ಮ ದೇವತೆಯಾದ ಮರ್ಕ್ಯುರಿಯ ಆಧಾರದ ಮೇಲೆ ಇದರ ಹೆಸರಿಟ್ಟರೆಂದು ಪ್ರತೀತಿ. ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಟ್ಟರೆ ಚೀನಾ, ಕೊರಿಯಾ, ಜಪಾನ್ ಮತ್ತು ವಿಯೆಟ್ನಾಂ ಸಂಸ್ಕೃತಿಗಳಲ್ಲಿ ಬುಧವನ್ನು ಜಲ ನಕ್ಷತ್ರ ಎಂದು ಕರೆಯಲಾಗುತ್ತದೆ. ಬಿಸಿಕಾಯದ ನಕ್ಷತ್ರವೆಂದು ಯಹೂದಿಗಳು ಕರೆಯುತ್ತಾರೆ.

ಚಿತ್ರ ಕೃಪೆ : ದಿ ಮಿರರ್

ಬುಧದ ಮೇಲ್ಮೈನಲ್ಲಿ ಕಾಣಿಸುವ ಹಲವಾರು ದಿಣ್ಣೆಯ ಸಾಲುಗಳು ಒಂದು ವಿಶಿಷ್ಟವೇ ಸರಿ. ಈ ದಿಣ್ಣೆಗಳಲ್ಲಿ ಕೆಲವಂತೂ ನೂರಾರು ಕಿಲೋಮೀಟರ್ ಉದ್ದವಿದೆ. ಬುಧದಲ್ಲಿರುವ ಅತ್ಯಧಿಕ ಕಬ್ಬಿಣದಂಶವು ಸೌರಮಂಡಲದ ಇನ್ನ್ಯಾವುದೇ ಗ್ರಹಗಳಲ್ಲಿ ಇಲ್ಲ. ಬುಧದ ಮೇಲ್ಮೈ ಲಕ್ಷಣಗಳಿಗೆ ಪ್ರತಿಫಲನಾಂಶ ಲಕ್ಷಣಗಳು, ದಿಣ್ಣೆಗಳು, ಪರ್ವತಗಳು, ಸಮತಲಗಳು, ಸ್ಕ್ಯಾರ್ಪ್ಸ್, ಕಣಿವೆಗಳು ಎಂದು ಹೆಸರುಗಳನ್ನೂ ಕೊಡಲಾಗಿದೆ.

ಸಬಲವಾಗಿಲ್ಲದ ಬುಧದ ವಾಯುಮಂಡಲದಲ್ಲಿ ಜಲಜನಕ, ಹೀಲಿಯಮ್, ಆಮ್ಲಜನಕ, ಸೋಡಿಯಮ್, ಕ್ಯಾಲ್ಷಿಯಂ ಮತ್ತು ಪೊಟಾಷಿಯಂಗಳು ಸೇರಿವೆ. ಬುಧವು ತನ್ನ ಅಕ್ಷರೇಖೆಯಲ್ಲಿ ಸುತ್ತುವುದು ಬಹಳ ನಿಧಾನ. ಬುಧದ ಮೇಲ್ಮೈನ ಕೆಲವೆಡೆಗಳಲ್ಲಿ, ಸೂರ್ಯವು ಸುಮಾರು ಅರ್ಧ ದೂರ ಏರಿ, ನಂತರ ಹಿಂದಿರುಗಿ ಮತ್ತೆ ಮುಳುಗುವುದನ್ನು ಒಂದೇ ಬುಧ ದಿನದಲ್ಲಿ ನೋಡಬಹುದು. ಇದಕ್ಕೆ ಕಾರಣ, ಸೂರ್ಯನಿಂದ ಗರಿಷ್ಠ ದೂರವನ್ನು ತಲುಪುವ ಸುಮಾರು ೪ ದಿನಗಳ ಮುನ್ನ, ಬುಧದ ಕಕ್ಷೀಯ ಪರಿಭ್ರಮಣ ವೇಗವು ಅದರ ಅಕ್ಷೀಯ ಪರಿಭ್ರಮಣದ ವೇಗದಷ್ಟೇ ಇರುತ್ತದೆ. ಇದರಿಂದ, ಸೂರ್ಯನ ಚಲನೆಯು ನಿಂತಂತೆ ಕಾಣುತ್ತದೆ; ಬುಧವು ಸೂರ್ಯನಿಂದ ಕನಿಷ್ಠ ದೂರದಲ್ಲಿರುವಾಗ ಗ್ರಹದ ಕಕ್ಷೀಯ ಪರಿಭ್ರಮಣ ವೇಗವು ಅಕ್ಷೀಯ ಪರಿಭ್ರಮಣ ವೇಗಕ್ಕಿಂತ ಹೆಚ್ಚಾಗುತ್ತದೆ. ಇದರಿಂದ, ಸೂರ್ಯವು ಪ್ರತಿಗಾಮಿ ಚಲನೆಯಲ್ಲಿರುವಂತೆ ಕಾಣುತ್ತದೆ.

ಬುಧದ ಅವಲೋಕನೆ ಜಟಿಲವಾದ್ದರಿಂದ, ಈ ಗ್ರಹವನ್ನು ಬೇರೆ ಗ್ರಹಗಳಷ್ಟು ಅಧ್ಯಯನ ಮಾಡಲಾಗಿಲ್ಲ. ಸೂರ್ಯನ ಅತೀ ಸಮೀಪವಿರುವ ಕಾರಣ ಸೂರ್ಯನ ಪ್ರಖರತೆಯಿಂದ ಬುಧ ಗ್ರಹವನ್ನು ಸ್ಪಷ್ಟವಾಗಿ ಕಾಣಲಾಗುವುದಿಲ್ಲ. ಬುಧವನ್ನು ಬೆಳಿಗ್ಗೆ ಅಥವಾ ಸಂಜೆಯಿರುವ ನಸುಬೆಳಕಿನಲ್ಲಿ ಮಾತ್ರ ಸ್ವಲ್ಪ ಕಾಲದವರೆಗೆ ನೋಡಬಹುದು. ಹಬಲ್ ದೂರದರ್ಶಕಕ್ಕೆ ಬುಧವನ್ನು ನೋಡಲಾಗುವುದೇ ಇಲ್ಲ. ಬುಧವು ಭೂಮಿಯ ಉತ್ತರಾರ್ಧಗೋಳಕ್ಕಿಂತ ದಕ್ಷಿಣಾರ್ಧಗೋಳದಿಂದ ಹೆಚ್ಚು ಸುಲಭವಾಗಿ ಕಾಣುತ್ತದೆ. ಗೆಲಿಲಿಯೋ 17 ನೇ ಶತಮಾನದಲ್ಲಿ ದೂರದರ್ಶಕದಿಂದ ಬುಧ ಗ್ರಹವನ್ನು ಅವಲೋಕನೆ ಮಾಡಿದರು. ಆದರೆ ಅವರ ದೂರದರ್ಶಕವು ಬುಧದ ಪಕ್ಷಗಳನ್ನು ನೋಡುವುಷ್ಟು ಪ್ರಬಲವಾಗಿರಲಿಲ್ಲ.

ಇನ್ನೂ ಅನೇಕ ವಿಶಿಷ್ಟಗಳಿರುವ ಬುಧ ಗ್ರಹದ ಬಗ್ಗೆ ಅನೇಕ ಪುಸ್ತಕಗಳು ಬಂದಿವೆ ಅದರಲ್ಲಿ “ಎಕ್ಸ್ಪ್ಲೋರ್ ಮರ್ಕ್ಯುರಿ, ದಿ ಸೀಕ್ರೆಟ್ಸ್ ಆಫ್ ಮರ್ಕ್ಯುರಿ” ಇನ್ನೂ ಅನೇಕ ಪುಸ್ತಕ ಅಥವಾ ಅಂತರ್ಜಾಲದಲ್ಲಿ ಹುಡುಕಿ ಮಾಹಿತಿ ತಿಳಿದುಕೊಳ್ಳಬಹುದು.

ಕನಸು

Related post

Leave a Reply

Your email address will not be published. Required fields are marked *