ಸೌರವ್ಯೂಹ – 5 – ಭೂಮಿ-ಪೃಥ್ವಿ

ಭೂಮಿ – 1

ಸಮುದ್ರ ವಸನೇ ದೇವಿ ಪರ್ವತಸ್ಥನ ಮಂಡಲೇ I
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷ ನಮೋಸ್ತುತೆ II

ಭೂಮಿ ಸೂರ್ಯನ ಸಂಸಾರದಲ್ಲಿ 3 ನೇ ಗ್ರಹ. ಸೌರಮಂಡಲದಲ್ಲಿ 5 ನೇ ಅತಿ ದೊಡ್ಡ ಗ್ರಹ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡಗ್ರಹ, ಇದಲ್ಲದೆ ಎಲ್ಲರಿಗೂ ತಿಳಿದಿರುವಂತೆ ಇಡೀ ಬ್ರಹ್ಮಾಂಡದಲ್ಲೇ ಜೀವಸಂಕುಲವನ್ನು ಹೊಂದಿರುವ ಏಕೈಕ ಕಾಯ ಭೂಮಿ. ವೈಜ್ಞಾನಿಕ ಅಧ್ಯಯನದ ಪ್ರಕಾರ ಭೂಮಿಯ 460 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು. ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ನಂತರ ಸುಮಾರು 153 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.

ಸೂರ್ಯನಿಂದ ಸರಾಸರಿ ದೂರ 149,597,887.5 ಕಿಲೋಮೀಟರ್, ಸೌರವ್ಯೂಹದ ವಿವರಣೆಯಲ್ಲಿ ಈ ದೂರವನ್ನು 1 ಖಗೋಲ ಮೂಲಮಾನವಾಗಿ ಪರಿಗಣಿಸುವರು. ಅದನ್ನು ಸರಳಗೊಳಿಸಲು 15 ಕೋಟಿ ಕಿಲೋಮೀಟರ್ ಅನ್ನು 1 ಅಂತಾರಾಷ್ಟ್ರೀಯ ಖಗೋಲ ಮೂಲಮಾನವಾಗಿ ಪರಿಗಣಿಸುವರು. 15,00,00,000,KM = 1 AV = 1 ಖಗೋಳ ಘಟಕ.

ಭೂಮಿಯ ಚಿಪ್ಪು ಹಲವು ಪಲಕಗಳಾಗಿ ಒಡೆದಿವೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಅತಿಂದತ್ತ ಅಸ್ತೆನೋ ಗೋಳದ ಮೇಲೆ ಚಲಿಸುತ್ತದೆ. ಭೂಮಿಯ ಒಳಭಾಗವು ಇನ್ನು ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಇದು ಸಿಲಿಕ – ಅಲ್ಯೂಮಿನಿಯಂ ನಿಂದಾದ ಹೊರಪದರ, ಸಿಲಿಕ-ಮ್ಯಾಗ್ನೇಸಿಯಂ ನಿಂದಾದ ಕೆಳಪದರದಿಂದ ಕೂಡಿದೆ. ಖಂಡದ ಕೆಳಗೆ ಚಿಪ್ಪು ಮಂದವಿದೆ. ಆದರೆ ಸಾರದಡಿಯಲ್ಲಿ ತೆಳುವಾಗಿದೆ. ಕವಚವು ಅರೆಘನ ಸ್ಥಿತಿಯಲ್ಲಿದೆ. ಬಹುತೇಕ ಎಲ್ಲಾ ಲೋಹಗಳ ಭಂಡಾರವಿದು. ಭೂಗರ್ಭವು ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ ಕಾಂತಕ್ಷೇತ್ರದ ನೆಲೆ ಇದು. ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿದೆ.

ಈ ಜೀವಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಬದಲಾಯಿಸಿದೆ. ಮೇಲ್ಮೈನ ಸುಮಾರು 21% ಭಾಗವು ಉಪ್ಪುನೀರಿನ ಸಾಗರದಿಂದ ಆವೃತವಾಗಿದೆ. ಉಳಿದ ಮೇಲ್ಮೈ ಭೂಖಂಡಗಳು ಮತ್ತು ದ್ವೀಪಗಳಿಂದ ಕೂಡಿದೆ. ಭೂಮಿ ಮತ್ತು ಅದರ ಸುತ್ತಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ಮಿನಿಮಯ ಕ್ರಿಯೆಗಳು ಜರಗುತ್ತವೆ. ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರದಿಂದ ಸಾಗರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂ ಇತಿಹಾಸದ ಮೊದಲ ಭಾಗದಲ್ಲಿ ಧೂಮಕೇತು ಅಪ್ಪಳಿಸಿದ್ದರಿಂದ ಸಾಗರಗಳು ಉದ್ಭವವಾದವು ಎಂಬುದು ಒಂದು ಸಿದ್ದಾಂತ.

ಎರಡನೇ ಮಹಾಯುದ್ಧದ ನಂತರ ಸಾಗರ ವಿಜ್ಞಾನ ಹೆಚ್ಚು ಅಭಿವೃದ್ಧಿಯಾಯಿತು. ಇದರ ಪರಿಣಾಮವಾಗಿ ಖಂಡಗಳ ಅಲೆತದ ಸಿದ್ದಾಂತಕ್ಕೆ ಸಾಗರ ತಳದಲ್ಲಿ ಪುರಾವೆಗಳು ಲಭ್ಯವಾದವು. ಈಗಿನ ತಿಳಿವಿನ ಪ್ರಕಾರ ಕೇವಲ ಅದು ಖಂಡಗಳ ಸರಿತವಲ್ಲ ಬದಲಿಗೆ ಖಂಡಗಳನ್ನು ಹೊತ್ತ ಶಿಲಾಫಲಕಗಳ ಸರಿತ. ಈ ಸಿದ್ದಾಂತದನ್ವಯ ಸಾಗರ ತಳದ ಸ್ವರೂಪ, ಜ್ವಾಲಾಮುಖಿಗಳ ಹಂಚಿಕೆ, ಭೂಕಂಪನಗಳ ತೀವ್ರತೆ, ಪರ್ವತಗಳ ಉಗಮ ಮುಂತಾದ ಭೂವೈಜ್ಞಾನಿಕ ಪ್ರಕ್ರಿಯೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಬಹುದು.

ಸುಮಾರು 25 – 58 ಕೋಟಿ ವರ್ಷಗಳ ಹಿಂದೆ ತೀವ್ರವಾದ ಹಿಮನದಿಗಳ ಚಟುವಟಿಕೆಗಳು ಭೂಮಿಯ ಬಹುತೇಕ ಮೇಲ್ಮೈಯನ್ನು ಹಿಮದ ಪದರದಲ್ಲಿ ಹೊದೆಸಿದ್ದವು ಎಂದು 1960 ರಿಂದೀಚೆಗೆ ಶಂಕಿಸಲಾಗಿದೆ. ಈ. ವಾದವನ್ನು ಹಿಮ ಉಂಡೆ ಭೂಮಿ ಎಂದು ಕರೆಯಲಾಗಿದೆ. ಬಹುಕೋಶ ಜೀವಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿದ ಕೇಂಬ್ರಿಯನ್ ಸ್ಪೋಟದ ಸ್ವಲ್ಪವೇ ಮುನ್ನ ಈ ಹಿಮಯುಗವು ಘಟಿಸಿದ್ದವು. ಈ ಸ್ಪೋಟದ ನಂತರ ಐದು ದೊಡ್ಡ ಅವನತಿಗಳು ಅಂದರೆ ಜೀವಿಗಳ ಹಿಂದೆ ಅದು ಕೊನೆಯ ಬಹುಷಃ ಒಂದು ದೊಡ್ಡ ಉಲ್ಕೆಯ ಭೂಮಿಯ ಮೇಲೆ ಅಪ್ಪಳಿಸಿದಾಗ ಉಂಟಾಯಿತು. ಡೈನಾಸೋರ್ಗಳು ಮತ್ತಿತರ ದೊಡ್ಡ ಸರಿಸೃಪಗಳು ನಾಶವಾದರು ಚಿಕ್ಕಪುಟ್ಟ ಜೀವಿಗಳು ಉಳಿದುಕೊಂಡವು…

ಮುಂದಿನವಾರಕ್ಕೆ…

ಕನಸು

Related post

1 Comment

  • Pratyagatma Chintana by Nenamshi is full of anubhavasaara and gives lot of guidance to human beings. My sincere respects to the author.Also thank Chi Gurudatta for sharing this on a daily basis.

Leave a Reply

Your email address will not be published. Required fields are marked *