ಸೌರವ್ಯೂಹ – 6 – ಭೂಮಿ-ಪೃಥ್ವಿ

 ಸೌರವ್ಯೂಹ – 6 – ಭೂಮಿ-ಪೃಥ್ವಿ

–ಭೂಮಿ- ೨–

ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ…

ಭೂಮಿಯ ಮೇಲ್ಮೈಯ ಸ್ಥಳದಿಂದ ಸ್ಥಳಕ್ಕೆ ವಿಪರೀತವಾದ ಭಿನ್ನತೆಗಳನ್ನು ಹೊಂದಿದೆ. ಸುಮಾರು 70% ಮೇಲ್ಮೈಯು ನೀರಿನಿಂದ ಆವೃತವಾಗಿದ್ದು ಭೂಖಂಡದ ಬಹುತೇಕ ಭಾಗವು ಸಾಗರ ಮಟ್ಟದ ಕೆಳಗಿದೆ. ಭೂಮಿಯ ನೆಲವನ್ನೆಲ್ಲಾ ಒಂದೇ ಎತ್ತರದಲ್ಲಿ ಸಮನಾಗಿ ಹರಡಿದರೆ, ನೀರು 2500 ಮೀಟರ್ ಗಳಿಗಿಂತ ಹೆಚ್ಚು ಮಟ್ಟಕ್ಕೆ ಏರುತ್ತದೆ. ನೀರಿನಿಂದ ಆವೃತವಾಗಿರದ ಉಳಿದ 30% ಮೇಲ್ಮೈಯು ಪರ್ವತಗಳು, ಮರುಭೂಮಿಗಳು, ಸಮತಲಗಳು, ಪ್ರಸ್ಥಭೂಮಿಗಳು, ಇತ್ಯಾದಿಗಳಿಂದ ಕೂಡಿದೆ. ಪ್ರಸ್ತುತದಲ್ಲಿ ಒಣನೆಲದ 13.31% ರಷ್ಟು ಮಾತ್ರ ಬೇಸಾಯಕ್ಕೆ ಯೋಗವಾಗಿದೆ. ಆದರೆ 4.21% ನೆಲದಲ್ಲಿ ಮಾತ್ರ ಶಾಶ್ವತ ಬೆಳೆಗಳನ್ನು ಬೆಳೆಯಬಹುದು. ಭೂಮಿಯ ನೆಲದ ಸುಮಾರು 40% ಭಾಗವು ಪ್ರಸ್ತುತದಲ್ಲಿ ಬೇಸಾಯಕ್ಕೆ ಮತ್ತು ಮೇವಿಗಾಗಿ ಬಳಕೆಯಾಗುತ್ತಿದೆ.

ಭೂಮಿಯ ಆಕಾರ ಮತ್ತು ಗಾತ್ರ

ಭೂಮಿಯ ಆಕಾರವನ್ನು ಮೊದಲು ಲಘುಗೋಲಕಲ್ಪ ಎಂದು ಕರೆಯಲಾಗಿತ್ತು. ನಂತರ ಭೂಮ್ಯಾಕಾರ (ಜಿಯಾಯ್ಡ್) ಎಂದು ಹೆಸರಿಸಲಾಯಿತು. ಆಕಾಶಕಾಯಗಳು ಗೋಳಾಕಾರವಾಗಿ ಕಾಣುವುದು ಚಂದ್ರಗ್ರಹಣ, ಸೂರ್ಯೋದಯ ಮತ್ತು ಸೂರ್ಯಾಸ್ತ, ಭೂಪರ್ಯಟನೆ, ಬೇಡ್ ಫೋರ್ಡ್ ಲೆವೆಲ್ ಪ್ರಯೋಗ, ಸಮುದ್ರದಲ್ಲಿನ ಹಡಗಿನ ದೃಶ್ಯ, ವೈಮಾನಿಕ ಮತ್ತು ಉಪಗ್ರಹಗಳಿಂದ ತೆಗೆದ ಛಾಯಾಚಿತ್ರಗಳು ಇವು ಭೂಮಿಯು ಗೋಳಾಕಾರವಾಗಿದೆ ಎಂಬುದನ್ನು ನಿರೂಪಿಸುವ ನಿದರ್ಶನಗಳಾಗಿವೆ. ಭೂಮಿಯ ಸಮಭಾಜಕ ವೃತ್ತದ ಸುತ್ತಳತೆಯು 40,076 ಕಿಲೋಮೀಟರ್ ಗಳಾಗಿದೆ. ಭೂಮಿಯ ಧ್ರವೀಯ ಸುತ್ತಳತೆ 40,006 ಕಿಲೋಮೀಟರ್ ಗಳಾಗಿದೆ. ಭೂಮಿಯ ವೃತ್ತ ಮತ್ತು ಧ್ರುವೀಯ ಸುತ್ತಳತೆಯ ವ್ಯಾಸ 70 ಕಿಲೋಮೀಟರ್ ಗಳಾಗಿದೆ. ಭೂಮಿಯ ಸಮಬಾಜಕದ ವೃತ್ತದ ವ್ಯಾಸವು 12,750 ಕಿಲೋಮೀಟರ್ ಗಳಾಗಿದೆ. ಭೂಮಿಯ ಧ್ರುವೀಯ ವ್ಯಾಸವು 12,714 ಕಿಲೋಮೀಟರ್ ಗಳಾಗಿದೆ.ಭೂಮಿಯ ಸಮಭಾಜಕದ ವೃತ್ತ ಹಾಗು ಧ್ರುವೀಯ ಸುತ್ತಳತೆಯ ವ್ಯತ್ಯಾಸವು 42 ಕಿಲೋಮೀಟರ್ಗಳಾಗಿವೆ. ಭೂಮಿಯ ಒಟ್ಟು ಭೌಗೋಳಿಕ ವಿಸ್ತೀರ್ಣವು 510 ಮಿಲಿಯನ್ ಚದರ ಕಿಲೋಮೀಟರ್ ಗಳಾಗಿವೆ. ಸಮಭಾಜಕ (equator) ವೃತ್ತದಿಂದ ಉತ್ತರಕ್ಕೆ ಕಂಡುಬರುವ ಪ್ರದೇಶವನ್ನು ಉತ್ತರಾರ್ಧಗೋಳ ದಕ್ಷಿಣಕ್ಕೆ ಕಂಡುಬರುವ ಪ್ರದೇಶವನ್ನು ಧಕ್ಷಿಣಾರ್ಧಗೋಳ ಎಂದು ಕರೆಯುವವರು.

ಭೂಗ್ರಹವನ್ನು ಹಲವಾರು ಹೆಸರುಗಳಿಂದ ಗುರುತಿಸಲ್ಪಡುತ್ತದೆ. ಇಲ, ಇಳೆ, ಉರ್ಬರೆ, ಉರ್ವಿ, ಕರಣ, ಕ್ಷಮಾ, ಕ್ಷಯ, ಕಾಂತ, ಕಾಶ್ಯಪ, ಕ್ಷಿತಿ, ಕ್ಷಿತಿವಧು, ಕುಂಬಿನಿ, ಕುವ, ಕುವಲಯ, ಕ್ಷೋಣಿ, ಗಂಧವತಿ, ಗಹ್ವರಿ, ಗ್ರಹ, ಗೋತ್ರೆ, ಚತ್ರುರಂತ, ಜಗತಿ, ಜಮೀನ, ಜಲರಸನೆ, ತಿರ್ಯತಲೋಕ, ತಿರೆ, ಧನಸ್, ಧನ್ವಾ, ಧರಣಿ, ಧರಣಿ ಚಕ್ರ, ಧರಣಿತಲ, ಧರಣಿಮಂಡಲ, ಧರ, ಧರಾಗ್ರ, ಧಾರತಲಾ, ಧರದಾರೆ, ಧರೆ, ಧರಿತ್ರಿ, ಧಾತ್ರಿ, ಧೇನು, ನಗಧರೇ, ಪರಿಗ್ರಹ, ಪೃಥ್ವಿ, ಪೃಥು, ಪುಣ್ಯಭೂಮಿ, ಪೊಡವಿ, ಭುವಿ, ಭುವನ, ಭೂ, ಭುಗೋಳ, ಭೂತದಾತ್ರಿ, ಭೂದೇವಿ, ಭೂಮ, ಭೂಮಿಕೆ, ಭೂಮಂಡಲ, ಮಟ್ಟಿ, ಮಣ್ಣು, ಮರ್ತ್ಯಲೋಕ, ಮೃತ್ರ, ಮೃತ್ತಿಕಾ, ಮಹಿಮಂಡಲ, ಮಹಿತಲ, ಮಾತೃ, ಮಾತೆ, ಮಾಧವಿ, ಮೇಧಿನಿ, ರತ್ನಗರ್ಭ, ರನ್ನವಸಿರ್, ರಸನೇ, ರಸಾ, ರಸೆ, ರೂಢಿ, ರೋಧಸಿ, ವಲ್ಲಿ, ವಸುಂಧರಾ, ವಸುಧಾ, ವಸುಮತಿ, ವಾಸವಿ, ವಿಪುಲ, ಶಾರ್ವರಿ, ಶೈಲಧರೆ, ಸಮುದ್ರವಸನೇ, ಸರ್ವಂಸಹ, ಸಾಗರಾಂಬರ, ಸಾರಂಗ, ಸ್ಥಿರ, ಹಲಾಹಲೆ, ಹಾಳು, ಹಿರಣ್ಯಗರ್ಭ, ಹೇಮಗರ್ಭೆ ಇನ್ನು ಅವೆಷ್ಟೋ ಹೆಸರುಗಳು ನಮ್ಮ ಭೂಮಿಗೆ.

ಇವಿಷ್ಟು ನಮ್ಮ ಭೂಮಿಗೆ ಸಂಬಂದಿಸಿದ ಸಾಮಾನ್ಯ ಮಾಹಿತಿಗಳು ಇನ್ನು ಎಷ್ಟೋ ವಿಷಯಗಳು ಮೊಗೆದಷ್ಟೂ, ಬಗೆದಷ್ಟೂ.

ಮತ್ತೊಂದು ಗ್ರಹದ ವಿಷಯಗಳೊಡನೆ ಮುಂದಿನವಾರ ಭೇಟಿಯಾಗೋಣ….

ಕನಸು

Related post

Leave a Reply

Your email address will not be published. Required fields are marked *