ಸ್ನೇಹದ ಅನುಬಂಧ

ಸ್ನೇಹದ ಅನುಬಂಧ

ಸ್ನೇಹವೆಂದರೆ…ಬರೇ ಪದಗಳಲ್ಲ
ಆ ಪದಗಳಲಿರುವ ಅಕ್ಷರಗಳಲ್ಲ!
ಅಕ್ಷರದಲಿ ಕಾಣುವ ಹೊಂದಾಣಿಕೆಯ ಭಾವವೇ..
ಸತ್ಯದ ಗೆಳೆತನ, ಮಾತಲಿ ವಿವರಿಸಲಾರದಲ್ಲ!!

ಸ್ನೇಹವೆಂದರೆ… ದೊಡ್ಡ ಆಲದಮರದಂತೆ
ಆ ಮರದ ಚಿಕ್ಕ ಎಲೆಗಳಂತಲ್ಲ!
ಎಲೆಗಳಲಿರುವ ಹಸಿರುಸಿರಿನ ಭಾವವೇ..
ನಿತ್ಯದ ಗೆಳೆತನ, ಉದುರಿ ಬೀಳುವುದಿಲ್ಲ!!

ಸ್ನೇಹವೆಂದರೆ…ಸದಾ ಉರಿವ ನಂದಾದೀಪದಂತೆ
ಆ ದೀಪದಲಡಗಿದ ಬಿಸಿಯಲ್ಲ!
ಬಿಸಿಯಾಗದ ಬೆಚ್ಚಗಿನ ಭಾವವೇ..
ಚಿರನೂತನ ಗೆಳೆತನ, ಉರಿದು ಆರುವುದಿಲ್ಲ!!

ಸ್ನೇಹವೆಂದರೆ…ವಿಶಾಲ ಶರಧಿಯಂತೆ
ಆ ಸಾಗರದಲಿನ ಅಲೆಗಳಂತಲ್ಲ!
ಏರಿಳಿತದಲೆಗಳ ಅಪ್ಪಳಿಸುವ ಭಾವವೇ..
ಶಾಶ್ವತ ಗೆಳೆತನ, ಪ್ರಳಯಕೆ ಕೊಚ್ಚಿ ಹೋಗುವುದಿಲ್ಲ!!

ಸುಮನಾ ರಮಾನಂದ

Related post

Leave a Reply

Your email address will not be published. Required fields are marked *