ಸ್ವಾರ್ಥ
ನಿಜಕ್ಕೂ ನಾನು ಈ ರೀತಿಯ ದುಸ್ಥಿತಿ ಬರುತ್ತದೆಂದು ಊಹಿಸಿರಲಿಲ್ಲ..
ಸರಿ ನೇರವಾಗಿಯೇ ವಿಷಯಕ್ಕೆ ಬರುವೆ. ನಾನು ದಾಂಡೇಲಿ ಕಾಡಿನಲ್ಲಿ ನನ್ನ ಪಾಡಿಗೆ ನನ್ನ ಪುಟ್ಟ ತಂಗಿ ಮತ್ತು ತಾಯಿ ಜೊತೆಗೆ ಹಾಯಾಗಿದ್ದೆ ನನಗೆ ಚೆನ್ನಾಗಿ ನೆನಪಿದೆ ಸರಿ ಸುಮಾರು 3 ತಿಂಗಳ ಕೂಸು. ಗೆಳೆಯ ಕರಿಯನ ಜೊತೆಗೆ ಆಟವಾಡುತ್ತಿದ್ದೆ ಒಂದು ದಿನ ಈ ರಾಮಸ್ವಾಮಿ ಕಾಡಿನ ಸಫಾರಿಗೆ ಬಂದು ನನ್ನ ಅನಾಮತ್ತಾಗಿ ತನ್ನ ಜಿಪ್ಸಿಯಲ್ಲಿ ಹಾಕಿಕೊಂಡು ಕರೆದೊಯ್ದು. ಪ್ರತಿನಿತ್ಯ ತರಬೇತಿ ಹೆಸರಲ್ಲಿ ನಾನ ತರಹದ ಪ್ರಯೋಗಗಳ ನನ್ನ ಮೇಲೆ ಹೇರಿ ಶಿಸ್ತು ಎಂದು ಹೆಸರಿಸಿದ. ಕರಿಯ ಹಾಗೂ ಕುಟುಂಬದ ನೆನಪಿನಲ್ಲಿ ಮೊದ ಮೊದಲು ನಾನೂ ಊಟವನ್ನೇ ಮಾಡುತ್ತಿರಲಿಲ್ಲ. ಕೊನೆಗೆ ವಿಧಿ ಇಲ್ಲದೆ ಇವನ ಮನೆಯ ಆಳಾದೆ ಮನೆ ಕಾಯುವ ಕೆಲಸ ನನ್ನ ಪಾಲಿನ ದಿನಚರಿಯಾಯಿತು.
ಈ ವಾರದ ಹಿಂದೆ ರಾಮಸ್ವಾಮಿ ಮತ್ತು ಕುಟುಂಬ ಭಾರತ ಧರ್ಶನ ಹೆಸರಲ್ಲಿ ಯಾತ್ರೆಗೆ ಹೋದರು. ಮನೆಯಲ್ಲಿ ಸಾಕಷ್ಟು ಸಂಪತ್ತು ಬೀರುವದಲ್ಲಿಯೇ ಇಟ್ಟು ಹೋಗಿದ್ದಾರೆ. ನನ್ನ ಪಾಲಿನ ಕರ್ತವ್ಯವನ್ನು ನಾನು ಎಡೆಬಿಡದೇ ಕಣ್ಣಿಗೆ ಎಣ್ಣೆ ಹಾಕಿ ಕೊಂಡು ಮನೆ ಕಾದಿದ್ದೆ. ದುರಾದೃಷ್ಟವಶಾತ್ ಮೊನ್ನೆ ರಾತ್ರಿ ಡಕಾಯಿತರ ಗುಂಪೊಂದು ನುಗ್ಗಿ ಎಲ್ಲವನ್ನೂ ದೋಚಿಕೊಂಡು ಹೋಯಿತು. ನಾ ನಿಸ್ಸಹಾಯಕ ಒಂಟಿ, ಎಷ್ಟು ಅರಚಿದರೂ ಈ ಜನ ಹೊರಗೆ ಬರಲಿಲ್ಲ ನೆರೆ ಮನೆಯ ಜನ ನೆಪಮಾತ್ರವೆನಿಸಿದರು. ನನ್ನ ಚೀರಾಟ ಗಮನಿಸಿ ಡಕಾಯಿತರ ಓರ್ವ ಮತ್ತು ಬರುವ ಇಂಜೆಕ್ಷನ್ ನೀಡಿದ, ನನ್ನ ಶಕ್ತಿ ಕಮರಿತು. ಮರುದಿನ ರಾಮಸ್ವಾಮಿ ಸಂಪತ್ತು ಕಳೆದ ದುಃಖದಲ್ಲಿ ಮನ ಬಂದಂತೆ ನನ್ನನ್ನು ಥಳಿಸಿದ.
ನಾನೀಗ ತಪ್ಪಿಸಿಕೊಳ್ಳಲು ಈ ಬೆಟ್ಟದ ಬಳಿ ಏಕಾಂಗಿಯಾಗಿ ನಿಂತಿರುವ ಕಾರಣ. ಮನೆಯೊಡತಿ. ತನ್ನ ಗಂಡನ ಬಳಿ ನನಗೆ ವಿಷ ಉಣಿಸಲು ಪ್ರೇರೇಪಿಸುತ್ತಿದ್ದಳು.
ಊರಿಗೆ ಹೋಗುವ ಮುಂಚೆ ಹತ್ತಿರದ ಪೋಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡದೇ. ನನ್ನ ದೂರುವುದೇ. ಇದು ನ್ಯಾಯವೇ. ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ನಮ್ಮನ್ನು ಬಳಸಿಕೊಂಡು ಮೆರೆಯುತ್ತಿದ್ದಾನೆ. ಇದಕ್ಕಾಗಿ ನಾನು ನನ್ನ ಕಾಡಿಗೆ ಮರಳುವೆ…
ಪವನ್ ಕುಮಾರ್ ಕೆ. ವಿ.
ಬಳ್ಳಾರಿ