ಸ್ವಾರ್ಥ
ದಯೆ ಅನುಕಂಪ
ಪ್ರೀತಿ ಪ್ರೇಮ ಮಮತೆ
ವಾತ್ಸಲ್ಯ ಬಾಂಧವ್ಯ
ಮಾನವೀಯ ಮೌಲ್ಯಗಳೆಲ್ಲ ಮಣ್ಣಾದವು ಕಣ್ಣಾಲೆಗಳು ತೇವವಾದವು!
ಕೊರೋನ ತಂದ
ಭಯಾನಕತೆ ಸಾವುಗಳಲ್ಲಿ
ಎಲ್ಲ ಸಂಬಂಧಗಳೂ
ಕಳೆದುಕೊಳ್ಳುತಿವೆ ಅರ್ಥ
ಗೆದ್ದು ಬೀಗಿತು ಸ್ವಾರ್ಥ!!
ಮನೆಯೊಡೆಯ ಸತ್ತರೆ
ಸತಿಗೂ ಬೇಕಿಲ್ಲ ಸುತನಿಗೂ ಬೇಕಿಲ್ಲ
ಅಂತಿಮ ದರ್ಶನ!
ಅನಾಥ ಶವವೆಂದು
ಸುಡಲು ಪಾಲಿಕೆಗೆ ಮಾರ್ಗದರ್ಶನ!
ಮಡಿದವರ ಬಳಿ
ಇರುವ ನಗ ನಾಣ್ಯ,
ಎ.ಟಿ.ಎಮ್. ಕಾರ್ಡ್,
ಪಡೆಯಲು ಇಲ್ಲ
ಯಾವುದೇ ಮಡಿವಂತಿಕೆ
ಮರೆತೇ ಹೋಯಿತು
ಹೃದಯವಂತಿಕೆ!!
ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ
ಚಿತ್ರ ಕೃಪೆ : https://www.globaltimes.cn/