ಹಕ್ಕಿಯ ಚಿತ್ತಾರ
ಹಕ್ಕಿಯ ಹಿಂಡು
ಬಾನಲಿ ಹಾರಿದೆ
ಹಕ್ಕಿಯ ಹಿಂಡು
ಹಿಂದೆಯೇ ಓಡಿದೆ
ಮೋಡದ ದಂಡು
ಸೂರ್ಯನು ಪಡುವಣ
ಸೇರುವ ಹೊತ್ತು
ಆಯಿತು ಗೂಡಿಗೆ
ಹೋಗುವ ಹೊತ್ತು
ಬಗೆ ಬಗೆ
ಹಕ್ಕಿಯು ಹಾರುತಲಿಹುದು
ಸುಂದರ ಚಿತ್ತಾರವದು
ಮೂಡುತಲಿಹುದು
ಬಣ್ಣದ ಆಗಸದಿ
ಹಕ್ಕಿಯು ಹಾರಲು
ಚಿಲಿಪಿಲಿ ಕಲರವ
ಮೂಡಿರಲು
ಕವಿಮನ
ಪುಳಕಿತವಾಗಿಹುದು
ಸುಂದರ ಕವನವದು
ಮೂಡಿಹುದು
ಪ್ರಕಾಶ್ ಕೆ. ನಾಡಿಗ್
ಶಿವಮೊಗ್ಗ