ಹಗುರಾಗು ಮನವೆ

ಹಗುರಾಗು ಮನವೆ

ಕಣ್ಣ ಕಂಬನಿಯಿಂದು
ಕಥೆಯ ಹೇಳುತಲಿಹುದು,
ಗಲಿಬಿಲಿಯ ನಗೆಯು
ತಾನದರಲ್ಲಿ ಸೇರಿಹುದು,

ನಿನ್ನ ಇನಿದನಿಯಿಂದು
ಗಧ್ಗದಿತವಾಗುತಿದೆ,
ನಿನ್ನ ಮನಸಿನಲಾವ
ನೋವು ಮೀಟುತಿದೆ;

ನಿನ್ನ ನೋವನು ಕೇಳೆ
ನನ್ನ ಕಿವಿ ಕಾಯುತಿದೆ,
ನಿನ್ನ ಮನದಳಲೇನು
ನನ್ನ ಕಿವಿಯಲ್ಲುಸುರು,

ನಿನ್ನ ಸವಿ ಮನಕಿಂದು
ನೆಮ್ಮದಿಯ ತರಲೆಂದು,
ನನ್ನ ಮನ ಕಾತರದಿ
ಕಾದು ಕುಳಿತಿಹುದು!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *