ಹತ್ತರಿಕೆಯ ಹತ್ತಾರು ಗುಣಗಳು

ನಮ್ಮ ಉತ್ತರಕರ್ನಾಟಕದ ಊಟದ ಪದ್ದತಿಯ ವೈಶಿಷ್ಟವೇ ಬಿಸಿ ಬಿಸಿಯಾದ ಜೋಳದ ರೊಟ್ಟಿ, ರೊಟ್ಟಿಯೊಂದಿಗೆ ಸೊಪ್ಪು, ಕಾಳುಗಳಿಂದ ಮಾಡಿದ ಪಲ್ಯಗಳು. ಉತ್ತರಕರ್ನಾಟಕಕ್ಕೆ ಚಿರಪರಿಚಿತವಾದ ಹತ್ತರಿಕೆಯ ಸೊಪ್ಪು ಜೋಳದ ರೊಟ್ಟಿಯೊಂದಿಗೆ ಸವಿಯಲು ಬಹಳ ಸೊಗಸು.

ಹತ್ತರಿಕೆಯ ಸೊಪ್ಪು ನೋಡಲು ಮೂಲಂಗಿಯ ಸೊಪ್ಪಿನಂತೆ ಕಂಡರೂ ಕೊಂಚ ಒರಟಾಗಿರುತ್ತದೆ. ಹೊಲಗಳಲ್ಲಿ ಬೆಳೆಯುವ ಸಸ್ಯದ ಬೀಜಗಳು ಗಾಳಿಗೆ ತೂರಿ ತಮ್ಮಷ್ಟಕ್ಕೆ ತಾವೇ ಬೆಳೆಯುತ್ತವೆ. ಉತ್ತರಕರ್ನಾಟಕದ ಮಣ್ಣಲ್ಲಿ ಬೆಳೆದ ಸಸ್ಯವನ್ನು ರೈತರು ತಾವು ಊಟಕ್ಕೆ ಕೂತಾಗ ಹಾಗೇ ಕಿತ್ತು ತಂದು ಹಸಿಯ ಸೊಪ್ಪನ್ನು ತಿನ್ನುವುದು ನಿಜ.

ಹತ್ತರಿಕೆ ತಿಂದ್ರ ಹೊಟ್ಟೆಯಾಗಿನ್ ಹರಳು ಕರಗ್ತಾವ” ಎಂದು ಹತ್ತರಿಕೆ ಸೊಪ್ಪನ್ನು ಕಂಡರೆ ಉತ್ತರ ಕರ್ನಾಟಕದ ರೈತರಿಗೆ ಅಚ್ಚುಮೆಚ್ಚು. ಬರಿ ಕಲ್ಲನ್ನು ಕರಗಿಸುವುದಷ್ಟೇ ಅಲ್ಲ ಅದರ ಔಷಧೀಯ ಗುಣಗಳನ್ನು ತಿಳಿದರೆ, ಹತ್ತರಿಕೆಯನ್ನು ನಾವು ಬಳಸಬೇಕು ಎನ್ನಿಸುತ್ತದೆ.

ಹತ್ತರಿಕೆ ಸೊಪ್ಪನ್ನು ಸೇವಿಸುವುದರಿಂದ ಆಯಾಸ ಕಂಡು ಬರುವುದಿಲ್ಲ. ದೇಹಕ್ಕೆ ಬಲನೀಡಿ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಮೂಳೆಗಳ ಸವೆತ, ಚರ್ಮರೋಗವನ್ನು ನಿವಾರಿಸಿ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಗರ್ಭಿಣಿ ಸ್ತ್ರೀಯರು ಮತ್ತು ಹಾಲುಣಿಸುವ ತಾಯಂದಿರು ಹತ್ತರಿಕೆಯನ್ನು ಸೇವಿಸುವುದರಿಂದ ತಾಯಿ ಮಗುವಿಗೆ ಬಹಳಷ್ಟು ಪೌಷ್ಟಿಕಾಂಶಗಳು ದೊರೆಯುತ್ತವೆ. ಆಧುನಿಕ ಸಂಶೋಧನೆಯ ಪ್ರಕಾರ ಈ ಸೊಪ್ಪು ಏಡ್ಸ್ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಶಿಲ್ಪ

Related post

Leave a Reply

Your email address will not be published. Required fields are marked *