ಹನಿಗವನಗಳು – ನಾಗರಾಜು.ಹ

ಮುಂಜಾವಿನ ವೇಳೆಯಲಿ

ಮುಂಜಾವಿನ ವೇಳೆಯಲಿ
ಮುತ್ತಿನ ಹನಿ ಬೀಳುತಲಿ|
ಮುಂಗುರುಳಿನ ಕೇಶದಲೀ
ಹನಿಯುತಿದೆ ಮಂದಗತಿಯಲೀ|
ಹಸಿರು ಹುಲ್ಲಿನ ಹಾಸಿನಲಿ
ಹೊಳೆಯುತಿದೆ ಇಬ್ಬನಿ ಮುತ್ತಿನಲೀ||

ಸಾಹಿತ್ಯ ವೈರಿ

ಹೇ ವಿನಾಯಕ ನಿನಗೆ ನನ್ನ ನಮನ
ನನ್ನ ಸಾಹಿತ್ಯಕ್ಕೆ ಕೊಡು ನಿನ್ನ ಗಮನ|
ಗ್ರಂಥಗಳ ತಿನ್ನುವವು ನಿನ್ನ ವಾಹನ
ಗಣಕ ಯಂತ್ರಕೆ ವೈರಸ್ ನ ಆಗಮನ||
ಮತ್ತೆ ಪುಸ್ತಕದುಳುಗಳ ಆಕ್ರಮಣ
ಅಲ್ಲದೇ ಶೀತಾಂಶವೂ ಒಂದು ಕಾರಣ|
ದಯಮಾಡಿ ಕಾಪಾಡು ನಾಗಶಯನ
ನಿನಗೆ ಅರ್ಪಿಸುವೆ ನನ್ನ ಪ್ರಣಾಮ||

ಅದ್ಭುತ

ಪ್ರಪಂಚದ ವೈಶಿಷ್ಟ್ಯವೇ ಒಂದು ಅದ್ಭುತ
ಪರಮಾತ್ಮನ ಸೃಷ್ಟಿ ಅರ್ಥಗರ್ಭಿತ|
ಪ್ರತೀ ಜೀವಿಯ ಬಾಳೂ ಊರ್ಜಿತ
ಅದರಂತೆ ಜಡವಸ್ತುವೂ ಅಶಾಶ್ವತ|
ನಾಗಶಯನನ ಅಣತಿಯಂತೇ ವ್ಯವಸ್ಥಿತ
ಈ ಜಗದೊಳಗೆಲ್ಲಾ ಸೋಜಿಗ ಪ್ರಸ್ತುತ||

ನೀಲಾಕಾಶ

ನೀಲಾಕಾಶದಲಿ ಮಿನುಗುತಿಹವು
ಅಸಂಖ್ಯಾತ ತಾರೆಗಳು|
ಈ ಜಗದೊಳಗೆ ಇರುತಿಹವು
ಕೂಡಾ ಅಸಂಖ್ಯಾತ ಸಾಹಿತಿಗಳು|
ಈ ಸಾಹಿತ್ಯದ ಅಂಬರದಲಿಹವು
ಜ್ಞಾನಪೀಠ ಪ್ರಶಸ್ತಿಯ ತಾರೆಗಳು||

ನಾಗರಾಜು.ಹ
ಬೆಂಗಳೂರು

Related post

Leave a Reply

Your email address will not be published. Required fields are marked *