ವ್ಯತ್ಯಾಸ
ಹಳ್ಳಿ ಅಂದ್ರೆ
ಪರಿಸರ.
ಪಟ್ಟಣ ಅಂದ್ರೆ
ಅವಸರ.
ಗೆಳೆಯ
ಓದು, ಕೆಲಸ ಎಲ್ಲದರಲ್ಲೂ ಮೊದಲು,
ಮುಗಿಸಿಬಿಡುತ್ತಿದ್ದ ಎಲ್ಲವನ್ನೂ
ಸರಸರ.
ಭೂಲೋಕವನ್ನೂ ತ್ಯೆಜಿಸಿಬಿಟ್ಟ
ಏನಿತ್ತೋ ಅವಸರ.
ಕಾಣಿಕೆ
ಪ್ರಯಾಣ ಸುಖಕರವಾಗಿರಲು
ಚಾಲನೆಯಲ್ಲಿ ಇರಬಾರದು
ಅವಸರ.
ಸಂಸಾರ ಸುಖವಾಗಿರಲು
ಆಗಾಗ ತರಬೇಕು ಅವ
ಸರ.
ಭಾಷಾಭಿಮಾನ
ಎಲ್ಲರೂ ಕನ್ನಡ ಬಳಸಬೇಕು ಎಂಬುದು
ನಿರೀಕ್ಷೆ.
ದಿನೆ ದಿನೆ ಚಿಕ್ಕದಾಗುತ್ತಿರುವುದಂತೂ
ಅಕ್ಷರಶಃ ಸತ್ಯ
ಕನ್ನಡದ ಭಾಷಾ
ನಕ್ಷೆ.
ಶ್ರೀಧರ ಕಾಡ್ಲೂರು