ದಾರಿ
ನಿಮ್ಮ ಜೀವನದ ಪತನಕ್ಕೆ
ನಾಂದಿ ಹಾಡಿದ
ದಾರಿ.
ನಿಮ್ಮ
ಬೇಜವಾಬ್ದಾರಿ.
ಧ್ಯಾನ
ಬುದ್ದನ ಸಿದ್ಧಾಂತ ಪಾಲಿಸುವವರು
ಕೇವಲ ಐ ಟಿ
ಉದ್ಯೋಗಿಗಳೆ.
ದಿನಕ್ಕೆ ಹನ್ನೆರೆಡು ತಾಸು
ಅವನ ಹಾಗೆ ಕೆಲಸ
ಕೂತಲ್ಲೆ…
ಸಿದ್ಧಾಂತ
ನಮ್ಮ ಮನೆಯಲ್ಲೂ ಉಂಟು
ಬುದ್ದನ ದೊಡ್ಡ ಕಲ್ಲಿನ
ಮೂರ್ತಿ.
ಅದರ ಮುಂದೆ ಅವನ ಹಾಗೆ
ಗಟ್ಟಿಯಾಗಿ ಹನ್ನೆರೆಡು ತಾಸು ಕೂತೂ
ನಾನು ಕಾರ್ಯ
ಪ್ರವೃತ್ತಿ.
ತೀರ್ಪು
ಮಹಿಳೆ ಅಂದರೆ
ಎಂದೆಂದಿಗೂ ನಯ,
ವಿನಯ.
ಗಂಡಸರದ್ದು,
ಕೇವಲ ಮೂಕಾಭಿ-
ನಯ.

ಶ್ರೀಧರ ಕಾಡ್ಲೂರು
1 Comment
ಒಂದಕ್ಕಿಂತ ಒಂದು ಮೋಹಕ ಹನಿ…👌👌