ಹನಿಗವನ – ರಾಘವೇಂದ್ರ ಬಟಗೇರಿ
ಅಮಾವಾಸ್ಯೆಯ ಬೆಳದಿಂಗಳು
ನೋಡಲು ತುಂಬಾ ಅಂದ
ಹಾಲು ಹುಣ್ಣಿಮೆಯ ಚಂದಿರ
ನಿಜ, ಹಾಗಂತ ಅವನ ಪೂಜೆಗೆಂದು
ಅಮಾವಾಸ್ಯೆಯ ದಿನ ಬಂದಿರ
ಬದಲಾವಣೆ
ಮದುವೆಗೆ ಮುನ್ನ ನಿಮ್ಮ ಲೈಫಿಗೆ
ನೀವೇ ಆಡಳಿತ ಪಕ್ಷದ ನಾಯಕ
ಮದುವೆಯಾದರೆ ಅದೇ ಲೈಫಲಿ
ನಿಮದೆ ವಿರೋಧ ಪಕ್ಷದ ಕಾಯಕ
ಮೇಕಪ್ ಅಡುಗೆ
ಪ್ರಿಯೆಯ ಅಂದದ ಮೊಗಕೆ
ಮನಸು ಮುತ್ತಿಟ್ಟಿತ್ತು
ಅವಳ ಅಡುಗೆ ತಿನ್ನುತ
ಮೊಗವು ಕಪ್ಪಿಟ್ಟಿತ್ತು
ಸಂತೈಕೆ
ಕೇಳುವುದು ಹೆಂಡತಿಯ ಕೋರಿಕೆ
ಪ್ರಿಯ ಹಬ್ಬಕೆ ಕೊಡಿಸುವೆಯಾ ಚಿನ್ನ
ಹೇಳುವುದು ಗಂಡನ ವಾಡಿಕೆ
ಪ್ರಿಯೆ ಅದ ತೊಡದ ನೀ ನೋಡಲು ತುಂಬಾ ಚೆನ್ನ
ರಾಘವೇಂದ್ರ ಗೌಡ್ ಬಟಗೇರಿ