ಕಠಿಣ
ಏನೂ ಅಪೇಕ್ಷೆ ಪಡದೆ ಶ್ರಮಿಸಿ
ಗಳಿಸಬಹುದು
ಸನ್ಮಾನ
ಶ್ರಮಿಸದೆ ಬರೋಕೆ
ಅದೇನು ಬೇಕಾಬಿಟ್ಟಿ
ಪೇಟೇಲಿ ಸಿಗೋ
ಸಾಮಾನ??
ರಾಜಿ
ತಾರಕಕ್ಕೆ ಏರುವ ಮೊದಲೇ
ಜಗಳಕ್ಕೆ ಹಾಕಿ
ತೇಪೆ
ಕಡೆಗಣಿಸಿ ದೌಲತ್ತು ತೋರಿದರೆ
ಕೋಣೆ ಹೊರಗೆ ಬಿಸಾಡುವಳು
ದಿಂಬು
ಚಾಪೆ
ಪ್ರಭಾವ
ಘೋರ ಪ್ರತಿಭಟನೆ
ಬೆಳಿಗ್ಗೆ
ಕಿಕ್ಕಿರಿದು
ಮಧ್ಯಾಹ್ನದ ಹೊತ್ತಿಗೆ
ಬಾರೆಡೆಗೆ
ಕಿಕ್ಕಿಳಿದು
ಪ್ರಯತ್ನ
ಹರಿದ ಬಟ್ಟೆ ಹೊಲಿದಂತೆ
ಒಂದು ಚಿಕ್ಕ
ಸೂಜಿ
ಒಡೆದ ಸಂಬಂಧ ಜೋಡಿಸುವುದು
ಒಂದು ಚಿಕ್ಕ
ರಾಜಿ
ಶ್ರೀಧರ ಕಾಡ್ಲೂರು