ಜಾರು
ತಪ್ಪು ಮಾಡಿ ಹೆಂಡತಿ ಕೈಯಲ್ಲಿ ಸಿಕ್ಕಿಬಿದ್ದಾಗ
ತುಂಬಾ ಹುಷಾರಾಗಿ ಬೇರೇ ವಿಷಯದ ಕಡೆಗೆ
ಹಾರು.
ಯಾಮಾರಿದರೆ ಮುಖಕ್ಕೆ ಬಿಸಾಡುವಳು
ಕೈಯಲ್ಲಿರುವ ಮಿಕ್ಸಿಯ
ಜಾರು.
ದಿನಕರ
ಅವಳಿಗೆ ಚೂರೂ ಇಲ್ಲ ಅವನ ಮೇಲೆ
ಕನಿಕರ
ತಿಳಿದಿದ್ದಾಳೆ ಅವನೊಬ್ಬ
ದನ-ಕರ
ಪಾಪ ಬಡಪಾಯಿ ಗಂಡ ನಮ್ಮ ಪಕ್ಕದ ಮನೆ
ದಿನಕರ
ಮಧುಚಂದ್ರ
ಹನಿಮೂನಿಗೆ ಹೋಗುವರು
ನವದಂಪತಿಗಳು
ಸಿಮ್ಲಾ, ಡಾರ್ಜಿಲಿಂಗ್, ಕೇರಳಾ, ಊಟಿ.
ಸ್ಥಳ ಯಾವುದಾದರೇನು
ಆಗುವುದಂತೂ ಖಂಡಿತ
ಪತಿರಾಯನ ಜೇಬಿನ ಲೂಟಿ.
ಮಡದಿ ಹೇಳಿದ್ದು
ಎಲ್ಲರ ಮುಂದೆ
ಚಿನ್ನ, ಬಂಗಾರ, ಮುದ್ದು ಅಂತ
ಕರೆದು.
ಪುಸಲಾಯಿಸ ಬೇಡ ನನ್ನ
ಕವನಗಳ
ಬರೆದು.
ಕೇಳಿದ ಸರ ಕೊಡಿಸದಿದ್ದರೆ
ಕಸಕ್ಕೆ ಹಾಕುವೆನು
ಬರೆದ ಎಲ್ಲಾ ಹಾಳೆಗಳ
ಹರಿದು.
ಶ್ರೀಧರ ಕಾಡ್ಲೂರು