ಹನಿ ಹನಿ ಹನಿಗಳು
ಪಂಜರ
ಅವಳ
ಆಗಮನಕ್ಕಿಂತ
ಮೊದಲು
ನನ್ನ ಜೀವನ
ಬಿಳಿ ಹಾಳೆ!
ಈಗ
ಬಂಗಾರದ
ಪಂಜರ!!
ನೀನು
ಒಂದು
ಕೈಗನ್ನಡಿಯಾಗಿತ್ತು
ನನ್ನ ಮನ!
ನೀನು
ಬಂದ ಮೇಲೆ
ಅದು ಹೂ ಬನ!
ಬದುಕಬೇಕು
ಮುಂಬರುವ
ಕ್ಷಣಗಳೆಲ್ಲ ದಿನಗಳೆಲ್ಲ
ಖಂಡಿತ
ಕಳೆದು ಹೋಗುತ್ತವೆ!
ನಾವು ಕಳೆದು
ಹೋದರೂ
ನೆನಪಿನಲ್ಲಿ
ಉಳಿಯುವಂತೆ
ಬಾಳಬೇಕು ಬದುಕಬೇಕು!!
ನೀ……
ನೀ
ಸಿಕ್ಕ ಮೇಲೆ
ನನಗೆ
ಬದುಕಲು
ಕಾರಣಗಳು
ಸಿಕ್ಕಿವೆ!
ಬದುಕುವ
ಆಸೆ ಹೆಚ್ಚಿದೆ!!
ನನ್ನವಳು
ತನ್ನ
ನೆರಳನ್ನೇ ಕಂಡು
ನಾಚಿಕೊಳ್ಳುವ
ನನ್ನವಳು
ಎಲ್ಲವನ್ನೂ
ದೋಚಿಕೊಳ್ಳುತ್ತಾಳೆ
ಮಾಡಿ ನನ್ನ
ಮರುಳು!
ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ
4 Comments
ಹನಿಗವಿತೆಗಳು ಚನ್ನಾಗಿವೆ ಸರ್
ಸಾಹಿತ್ಯ ಕೃಷಿ ಮಾಡುವವರಿಗೆ ಇದು
ಒಂದು ಅತ್ಯುತ್ತಮ ವೇದಿಕೆ
ವಂದನೆಗಳು ಹಾಗು ಧನ್ಯವಾದಗಳು
ವಂದನೆಗಳು ಹಾಗು ಧನ್ಯವಾದಗಳು