ಸೋತೆ
ಪ್ರೀತಿಯ ಕನಸೇ
ನನ್ನ ಪ್ರೀತಿಯನ್ನು
ಕನಸಾಗೇ ಇರಿಸಿದೆ ನೀನು!
ನನಸಾಗಲು ಹವಣಿಸಿ
ಸೋತೆ ನಾನು
ನೀನು ಸಹಕರಿಸಲಿಲ್ಲ
ಅವಳು ಸಹಕರಿಸಲಿಲ್ಲ!!!
ಕೂಡಿಡಲಾಗಿದೆ
ನನ್ನ ಹೃದಯವೆಂಬ
ಪೆನ್ ಡ್ರೈವಲ್ಲಿ
ಮನಸ್ಸೆಂಬ
ಸಿಮ್ ಕಾರ್ಡಲ್ಲಿ
ಜೀವನ ಎಂಬ
ಲ್ಯಾಪ್ ಟ್ಯಾಪಲ್ಲಿ
ಎಲ್ಲ ನೆನಪುಗಳನ್ನು
ಕೂಡಿಡಲಾಗಿದೆ!!
ಸುದ್ದಿ
ಇದೀಗ
ಬಂದ ಸುದ್ದಿ!
ಅವಳಿನ್ನೂ
ನನ್ನ ನೆನಪಲ್ಲೇ
ಬದುಕಿದ್ದಾಳಂತೆ!!!
ಜೀವಂತ
ನೆನಪುಗಳೆಂದೂ
ಬದಲಾಗುವುದಿಲ್ಲ
ಅವು ನೆನಪಾಗಿ
ಉಳಿಯುವಂತೆ
ಜೀವಂತವಾಗಿಡಬೇಕು
ಸದಾ ಅವುಗಳನ್ನು
ಮಾತನಾಡಿಸುತ್ತಿರಬೇಕು!!
ಡಾ. ಪರಮೇಶ್ವರಪ್ಪ ಕುದರಿ