ದೈವ ಕೃಪೆ
ಈ ಜಗದಲ್ಲಿ
ನಮ್ಮದು – ನಿಮ್ಮದು
ಅಂತ ಏನು ಇಲ್ಲ
ಎಲ್ಲಾ ದೈವ ಕೃಪೆ!
ಅವನೊಲಿದರೆ ಏನೆಲ್ಲಾ
ಮುನಿದರೆ
ಏನೇನು ಇಲ್ಲವೇ ಇಲ್ಲಾ!!
ಸೂಕ್ತ
ಗತಿಸಿಹೋದ
ಕ್ಷಣಗಳನ್ನು
ನೆನೆದು ನೋವು
ಪಡುವುದರಲ್ಲಿ
ಯಾವ ಸುಖವು ಇಲ್ಲ!
ಬಂದುದನ್ನು ಸ್ವೀಕರಿಸುತ್ತ
ನಗುತ ಬಾಳುವುದೇ ಸೂಕ್ತ!!
ಜೀವನ ಪಾವನ
ನೋವಿಲ್ಲದ ಬದುಕಿಲ್ಲ
ವಾಸನೆ ಇಲ್ಲದ ಹೂವಿಲ್ಲ
ಸಾವಿಲ್ಲದ ಮನೆಯಿಲ್ಲ!
ನೋವಿನಲ್ಲೂ
ಸಂಭ್ರಮಿಸುವುದೇ ಜೀವನ
ಆಗಲೇ ಜೀವನ ಪಾವನ!!
ಬದಲಾವಣೆ
ಕಾಲಕ್ರಮೇಣ
ಎಲ್ಲವೂ ಬದಲಾಗುತ್ತದೆ
ಪರಿವರ್ತನೆ ಜಗದ ನಿಯಮ
ಮನಸ್ಸಿಲ್ಲದಿದ್ದರೂ ಬದಲಾವಣೆಗೆ
ಹೊಂದಿಕೊಂಡು ಬದುಕಲೇಬೇಕು
ಬದುಕುವ ಮನಸಿದ್ದರೆ!!
ಡಾII ಪರಮೇಶ್ವರಪ್ಪ ಕುದರಿ