ಪ್ರೀತಿಯೇ ಔಷದಿ
ಎಲ್ಲ ನಲಿವಿಗೂ
ಪ್ರೀತಿಯೇ ಪ್ರೇರಣೆ
ಎಲ್ಲ ನೋವಿಗೂ
ಪ್ರೀತಿಯೇ ಔಷದಿ!
ಮತ್ತೇಕೆ ಜಿಪುಣತನ
ಕೈ ತುಂಬ ಹಂಚಿ
ಎದೆ ತುಂಬ ಹರಡಿ!!
ಅಭಿನಂದನೆ
ಪ್ರೀತಿಯ ಪಾದರಕ್ಷೆ
ನಿನ್ನಿಂದಲೇ ಈ ಜೀವಕೆ ರಕ್ಷೆ
ನೀ ಇಲ್ಲದೆ ಒಂದು ಹೆಜ್ಜೆ
ಕೂಡ ಎತ್ತಿಡಲೂ
ನಾನು ಅಸಮರ್ಥ!
ನಿನ್ನಿಂದಲೇ ನನ್ನ ಚಲನವಲನ
ನಿನಗಿದೋ ವಂದನೆ
ಅಭಿನಂದನೆ!!
ಧನ್ಯವಾದ
ಪ್ರೀತಿಯ ಮನಸೇ
ನನ್ನದೊಂದು ಬಿನ್ನಹ
ಮರೆತು ಹೋದವರ ಬಗ್ಗೆ
ನೀನು ಚಿಂತಿಸಬೇಡ!
ಇದ್ದಷ್ಟು ದಿನ
ಅವರು ನೀಡಿದ
ಸಂತೋಷಕ್ಕೆ
ಧನ್ಯವಾದ ತಿಳಿಸು!!
ಭರ್ತಿಯಾಗಿದೆ
ನನ್ನದು ನಿಜವಾದ
ಪ್ರೀತಿ ಎಂದು
ಎಷ್ಟು ಹೇಳಿದರು
ನೀ ಕೇಳದಾದೆ!
ಇಂದು ನಿನ್ನ ಸ್ಥಿತಿ ನೋಡಿ
ಕರಳು ಕಿತ್ತು ಬರುತಿದೆ!
ಆದರೇನು ಮಾಡಲಿ
ನಾನೀಗ ಅಸಹಾಯಕ
ನಿನ್ನ ಸ್ಥಾನ ಭರ್ತಿಯಾಗಿದೆ!!
ಡಾII ಪರಮೇಶ್ವರಪ್ಪ ಕುದರಿ