ಸೌಂದರ್ಯ
ನಿಸರ್ಗ ಸೌಂದರ್ಯ
ನೋಡಿ ನೀ ಮೈಮರೆತಿದ್ದೆ
ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದೆ!
ನಾನು ಮೈ ಮರೆತಿದ್ದೆ
ಚಪ್ಪಾಳೆ ತಟ್ಟಿದ್ದೆ
ನಿಸರ್ಗ ಸೌಂದರ್ಯ – ನೋಡಿ ಅಲ್ಲ
ನಿನ್ನ ಮುಗ್ಧ ಸೌಂದರ್ಯ – ನೋಡಿ!!
ಕುರುಡ
ಅವಳು
ನಕ್ಕಾಗಲೆಲ್ಲ
ಫಳ ಫಳ ಹೊಳೆವ
ಹಲ್ಲುಗಳ ಹೊಳಪಿಗೆ
ಕಣ್ಣುಗಳ ಮಿಂಚಿಗೆ
ಎಷ್ಟೋ ಸಾರೆ ನಾ
ಕುರುಡನಾಗಿದ್ದೇನೆ!!
ಎತ್ತ?
ಸಿಹಿ ನೆನಪುಗಳನ್ನು
ಸ್ಮರಿಸುತ್ತ
ದಿನ ಕಳೆಯುತ್ತಿರುವೆ
ಎಣಿಸುತ್ತ
ನನ್ನ ಮನಸೋ ಬರಿ
ನಿನ್ನ ಸುತ್ತ
ನೀ ಹೊರಟಿರುವೆ
ನನ್ನ ಬಿಟ್ಟು ಎತ್ತ!
ಕನಸಿನೂರಿಗೆ
ಕನಸುಗಳನು ಹೊತ್ತು
ಸಾಗುತಿರುವೆ
ದೂರದ ಕನಸಿನೂರಿಗೆ
ಅಲ್ಲಿ ಸ್ವಚ್ಛಂದವಾಗಿ
ಇರಬಹುದಂತೆ!
ಹೆಜ್ಜೆ ಹಾಕುತ್ತಿದ್ದೇನೆ
ಅವಳೊಂದಿಗೆ
ನಾಳೆಯ ಬದುಕ
ಬಂಡಿ ಎಳೆಯಲು!!
ಡಾII ಪರಮೇಶ್ವರಪ್ಪ ಕುದರಿ
ಚಿತ್ರಕೃಪೆ: https://webneel.com/