ಸದ್ದು
ನಿನ್ನ
ಕಾಲ್ಗೆಜ್ಜೆಯ
ಮಧುರವಾದ
ಸದ್ದು
ನನ್ನನ್ನು
ಗಾಢ
ನಿದ್ದೆಯಿಂದ
ಎಚ್ಚರಿಸಿತು!!
ಖೈದಿ
ಫಳ ಫಳ
ಹೊಳೆವ
ನಿನ್ನ
ಸುಂದರ
ಕಂಗಳ ನೋಟಕ್ಕೆ
ಸೋತೆ ನಾನು!
ದಯೆ ತೋರದೇ
ಈ ಕ್ಷಣ
ಬಂಧಿಸು ನನ್ನನ್ನು!!
ಬೂದಿ
ನಿನ್ನ
ನೆನಪಲ್ಲಿ
ನಾನು
ಸುಟ್ಟು ಬೂದಿ
ಆದಾಗಲೇ
ತಿಳಿಯಿತು
ಎಲ್ಲ ಬೆಂಕಿಯನ್ನೂ
ನೀರು
ಆರಿಸಲಾರದೆಂದು!!
ಒರತೆ
ನಿನ್ನ
ಕೊರತೆ
ಅದಾಗಲೆಲ್ಲ
ನನ್ನ
ಕಣ್ಣಲ್ಲಿ
ಕಣ್ಣೀರ ಒರತೆ!
ಅದೇಕೆ
ನನ್ನ ಬಿಟ್ಟು
ಇನ್ನೊಬ್ಬನಲ್ಲಿ ಬೆರೆತೆ!!

ಡಾII ಪರಮೇಶ್ವರಪ್ಪ ಕುದರಿ