ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 21

ಒಲುಮೆ

ಮನದಲ್ಲಿ ಅಡಗಿ ಕುಳಿತಿದೆ
ನಿನ್ನ ಪ್ರೇಮದ ಮಧುರ ನೆನಪು
ನೆನೆದಷ್ಟು ಮನಕೆ ಹೊಳಪು
ಈ ಬದುಕು ಸವಿಯಲು
ನಿನ್ನ ಸಾಂಗತ್ಯ ಬೇಕು
ಸಲುಗೆ ಬೇಕು
ಒಲುಮೆಯು ಬೇಕು!!

ತೇವ

ನಾ ನಿನಗಿಷ್ಟವೆಂದು
ನಿನ್ನ ಮುಖದ ರಂಗೇ
ಸಾರಿ ಸಾರಿ ಹೇಳುತಿದೆ!
ಆದರೂ
ನಿನ್ನ ನಾಲಿಗೆ
ಏಕೆ ಮೌನ ?
ಕಣ್ಣುಗಳೇಕೆ
ತೇವ ?

ಅವಸರವೇನಿತ್ತು?

ಹುಡುಗಿ, ನಿನ್ನನ್ನು ಬಹಳ
ಹಚ್ಚಿಕೊಂಡೆ
ನಿನ್ನ ಸಲುಗೆಯ ಸ್ನೇಹವನ್ನು
ಮೆಚ್ಚಿಕೊಂಡೆ
ನಿನಗೆ ನೀನೆ ಚೆಲುವೆ ಎಂದು
ಕೊಚ್ಚಿಕೊಂಡೆ
ತಿಳಿಯದೇ ಬದುಕಿಗೆ ಬೆಂಕಿ
ಹಚ್ಚಿಕೊಂಡೆ
ಅಂತಹ ಅವಸರವೇನಿತ್ತು ನಿನಗೆ ?
ಯೌವನದ ಮದವೇರಿತ್ತೇ ?

ಸಾರಬೇಡ

ನಿನ್ನ
ಇಚ್ಛೆಯಂತೆ
ನಿನ್ನನ್ನು ತ್ಯಜಿಸಿದ್ದೇನೆ
ಗೆಳತಿ!
ಸುಖಾ ಸುಮ್ಮನೆ
ನಾನು
ಮೋಸಗಾರ
ಎಂದು ಜಗತ್ತಿಗೆ
ಸಾರಬೇಡ!!

ಡಾII ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ

Related post

Leave a Reply

Your email address will not be published. Required fields are marked *