ಆಸೆ
ತಾರೆಗಳ
ಹೂದೋಟದಲಿ
ನಿನ್ನ ನಗುಮೊಗವ
ಕಾಣುವಾಸೆ!
ನೀ ನಕ್ಕಾಗ ನಿನ್ನ
ಹೊಳೆವ ದಂತಗಳಲಿ
ನನ್ನ ಪ್ರತಿಬಿಂಬವ
ಕಾಣುವಾಸೆ!!
ಶಂಕಿತ
ನಾನು
ನನ್ನವಳ
ಪ್ರೇಮ ಸೋಂಕಿತ!
ಆದರೆ
ಅವಳ ದೃಷ್ಟಿಯಲ್ಲಿ
ನಾನಿನ್ನೂ ಶಂಕಿತ!!
ಜೊತೆಗಿರಲು
ನಿನ್ನ ಮುದ್ದಾದ ರೂಪ
ಹೂ ನಗೆಯ ಕಂಡು
ಪ್ರೀತಿ ಇನ್ನೂ ಹೆಚ್ಚಾಗಿದೆ!
ಸಲುಗೆಯ ಸ್ನೇಹ ಕಂಡು
ಬಯಕೆಯ ಸಿಹಿ ಉಂಡು
ಸದಾ ನಿನ್ನ ಜೊತೆಗಿರಲು
ಈ ಜೀವ ಬಯಸಿದೆ!
ಏಟು
ನೋಟದಲ್ಲೂ
ಒಮ್ಮೊಮ್ಮೆ
ಏಟು ಬೀಳುತ್ತದೆ!
ಅವಳು
ನೋಡಿಯೂ
ನೋಡದಂತೆ
ಹಾದು ಹೋದಾಗ!!
ಡಾII ಪರಮೇಶ್ವರಪ್ಪ ಕುದರಿ