ಕಳ್ಳಿ
ಕಣ್ಣಿಗೆ ಬಿದ್ರ
ಕಾಡ್ತಾಳೆ ಅಂತ
ಕಣ್ಣ ಮುಚ್ಚಿದೆ
ಕಳ್ಳಿ ಮನಸಿನ
ಬಾಗಲ ತಳ್ಳಿ
ಒಳಗ ಬಂದೆ ಬಿಟ್ಲು!
ಬರೋದ ಬಂದ್ಲು
ಅಲ್ಲೇ ಝಾಂಡಾ
ಊರೇ ಬಿಟ್ಲು!!
ಎರಡು ಮೆಟ್ಟಿಲು
ಅಂದು ನೀನು
ಎರಡು ಮೆಟ್ಟಿಲು
ಕೆಳಗಿಳಿಯಲಿಲ್ಲ
ನಾನಾದರೂ
ಎರಡು ಮೆಟ್ಟಿಲು
ಮೇಲೇರಲಿಲ್ಲ!
ಅದ್ಯಾರೋ ಬಂದು
ನಿನ್ನ ಕೈಹಿಡಿದ
ನೀನು ಕತ್ತು ನೀಡಿದೆ!
ಅರ್ಥೈಸಿಕೊ
ನನ್ನ ಮೌನವನ್ನೇ
ನಿನಗೆ
ಕಾಣಿಕೆಯಾಗಿ
ಕಳಿಸಿದ್ದೇನೆ!
ಈಗಲಾದರೂ
ನನ್ನ ಮನದ
ಭಾವನೆಗಳನ್ನು
ಅರ್ಥೈಸಿಕೊ!!
ನೆನಪು ಬಾರದೆ
ನಿನ್ನ ಪ್ರೀತಿಗೆ
ಕರಗಿ ನೀರಾದೆ
ಆದರೇನು ಮಾಡಲಿ
ಅರ್ಥ ಮಾಡಿಕೊಳ್ಳುವಷ್ಟರಲ್ಲಿ
ನೀ ದೂರಾದೆ!
ಅರ್ಥವಾಗಲೇ ಇಲ್ಲ
ನಿನ್ನ ಇರಾದೆ
ನಿನಗೆ ನನ್ನ
ನೆನಪು ಬಾರದೆ!!
ಡಾII ಪರಮೇಶ್ವರಪ್ಪ ಕುದರಿ