ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 9

ದಿಲ್ಲು

ಬದುಕಿನಲಿ
ಬಣ್ಣವಿರಲಿ
ಬದುಕೇ
ಬಣ್ಣವಾಗದಿರಲಿ
ಏಳು ಬಣ್ಣಗಳ
ಕಾಮನಬಿಲ್ಲು
ಏಳುಬೀಳುಗಳ
ಸಹಿಸುವ ದಿಲ್ಲು
ನಮ್ಮೆಲರದಾಗಿರಲಿ

ಬದುಕು ಚಿನ್ನ

ಜೀವನವೊಂದು ಆಟ
ಅದಕೊಂದಿಷ್ಟು ಪರಿಪಾಠ
ಇದ್ದಾರೆ ಚೆನ್ನ
ಪಾಲಿಸಿದರಂತೂ
ಈ ಬದುಕು ಚಿನ್ನ!
ಗೌರವಿಸಿ ಬಾಳಬೇಕು
ಗುರುಹಿರಿಯರನ್ನ!!

ಏಕಾಂಗಿ

ಏಕಾಂಗಿಯಾಗಿ
ನಡೆಯುತ್ತಿರುವೆ
ಬಾಳದಾರಿಯ
ಕವಲಿನಲ್ಲಿ!
ಕನವರಿಸುತ್ತಿರುವೆ
ಬಾಯಿಬಿಡುತ
ಹಗಲಿರುಳಿನಲ್ಲಿ!!
ಹೆತ್ತವರ
ಕನವರಿಕೆಯಲ್ಲಿ!!

ಅಮ್ಮ

ಅಮ್ಮ ನೀನೆ ನನ್ನ
ಹೃದಯದ ವೀಣೆ
ನೀನಿಲ್ಲದೆ ನಾ
ಬದುಕು ಕಾಣೆ!
ನೀನೆ ಎಲ್ಲ..
ನೀನಿಲ್ಲದೆ ಈ
ಬದುಕು ಬವಣೆ
ನಿನ್ನಾಣೆ!!

ಡಾII ಪರಮೇಶ್ವರಪ್ಪ ಕುದರಿ

Related post

Leave a Reply

Your email address will not be published. Required fields are marked *