ಎಡಕ್ಕೆ ನೀನು
ಬಲಕ್ಕೆ ನಾನು
ಅಥವ ಅದಲು ಬದಲು
ನಡುವೆ ಬರುವ ಅವನು
ಅಥವ ಅವಳು
ಎಂಬ ಯೋಜನೆಯಲಿ
ಬೆರಗಿನ ಕಥೆ ಬರೆಯಲು
ಜೊತೆಯಾದವರು ನಾವು
ಪ್ರೇಮದ ಕಬಂಧ ಬಿಗಿ
ತೆಕ್ಕೆಯಲಿ ಬಂಧಿಯಾದವರು..
ಹೊಸ ಹರುಷದಲಿ ಇಬ್ಬರು
ಮುಗಿಲೆತ್ತರ ತೇಲಾಡಿದೆವು
ಕೈಕೈ ಹಿಡಿದು ನಡೆದೋಡಿದೆವು
ಸೈಕಲ್ ಸವಾರಿ ಹೋಗಿ
ಮಿಂಚಂತೆ ಹರಿದಾಡಿದೆವು…
ನಂತರ ಒಂದು ದಿನ –
ಹರಿಗೋಲೊಳಗೆ
ರಭಸ ಹರಿವ ನದಿಯೊಳಗೆ
ಝಲ್ಲೆನಿಸುವ ಪುಳಕಕ್ಕೆ
ಹತ್ತಿ ತೇಲಿ ತೇಲಾಡುತ್ತಾ…
ಖುಷಿಯಲಿ ಹಗುರಾಗುತ್ತಾ…
ಹಗುರಾಗಿ ನಕ್ಕು ನಲುಗುತ್ತಾ…
ಹಾಗೆ…
ದಢಕ್ಕನೆ ನೀ ಮಾಯವಾದೆ…!
ಈಜು ಬರದ ನಾನು
ಆ ಕ್ಷಣ
ದಡದಡಿಸಿ
ನಿನ್ನ ಈಜಿನ ಬಲವಿಲ್ಲದೆ…
ಈಗ ನಡುನದಿಯಲ್ಲಿ
ಒಬ್ಬನೇ ಹರಿಗೋಲಲ್ಲಿ…!
ಡಾ. ಅರಕಲಗೂಡು ನೀಲಕಂಠ ಮೂರ್ತಿ
3 Comments
ಚೆನ್ನಾಗಿದೆ,ಅಭಿನಂದನೆ.
ವಂದನೆಗಳು
ವಂದನೆಗಳು ಹಾಗು ಧನ್ಯವಾದಗಳು