ಹರಿವು

ಮನಸ್ಸು ಮೀನಿನಂತೆ! ಬರುವುದೆಲ್ಲ
ನಿಂತ ನೀರಲ್ಲ, ಅದು ಬಹುಷಃ
ದುಮ್ಮಿಕ್ಕುವ ಜಲಪಾತದಂತೆ ,
ಬೋರ್ಗೆವ ನದಿ,
ಭೂರಮೆಯ ಅಪ್ಪಣೆ ಕೇಳೋಲ್ಲ!
ಹರಿದು ಸಾಗರವ ದಡ ಮುಟ್ಟುತ್ತಾಳೆ.

ಎಲ್ಲಾ ಅವನ / ಅವಳ ಅಪ್ಪಣೆಯಂತೆ,
ಅಪ್ಪಣೆ – ಒಪ್ಪುಗೆ ಕೇಳಲು ಬಿಡುವೆಲ್ಲಿ
ಅವಳಿಗೆ, ಬಿಡುವಾದರೂ ಎಲ್ಲಿ?
ಹೇಳಿದ್ದು-ಕೇಳಿದ್ದು
ನೋಡಿದ್ದು-ಕೇಳಿದ್ದು
ಆ ಗುಡ್ಡ ಕಣಿವೆಗಳೇ

ಹರಿದು ಹೋಗು, ನಮಗಾದರೂ
ಇದೇ ದುಃಖ್ಖ ದುಃಮಾನಗಳು
ನಿನಗಿಲ್ಲ ಯಾಕೆ ವೈ-ರಾಗ್ಯ
ನಮ್ಮ ಸೀಳಿ ಹೋಗಲು
ನಿನಗಿಲ್ಲ ಕಾರಣ!ಯಾಕೆಂದರೆ ಸಾಗರ
ನೀನು ಬರಲು ಕಾಯುತ್ತಿದ್ದೆ ಬೋರ್ಗರೆಯಲು

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *