ಹಾಯ್ಕುಗಳು
ಒಡೆದ ಹೃದಯ
ಒಡೆದ ಹೃದಯ
ಒಂದುಮಾಡಿದರೇನು
ಮನಸು ಒಂದೇ!
ಅಲಂಕಾರ ದೀಪ
ದೇವರ ಚಿತ್ರ,
ಶುಭ ಕಾರ್ಯದಲಿದ
ಬಳಸುವರು
ಚತುರ್ಮಂಗಗಳು
ತಿಳಿಸುವುವು
ಕೇಳು,ಚಿಂತಿಸು,ಮಾತು.
ನೋಡದಿರೆಂದು
ಬೆಳಕು
ಅಧಮನಿಗೆ
ಸಜ್ಜನರ ಜ್ಯೋತಿಯ
ಬೆಳಕು ಇಲ್ಲ
ಲಕ್ಷ್ಮೀ
ಧನಿಕನಿಗೆ
ಲಕ್ಷ್ಮೀ ಪುತ್ರನಾಗುವ
ಯೋಗವು ಇದೆ
ದೀಪ
ಜ್ಞಾನಾಂಧನಿಗೆ
ಗುರೋಪದೇಶ ದೀಪ
ದಾರಿತೋರ್ವುದು
ಗ್ರಹಣ
ಗ್ರಹಣದಲಿ
ಪಾಣೀಗ್ರಹಣ ಹೆಚ್ಚು
ಶಕ್ತಿಯುತವು
ಹಬ್ಬ
ಹಬ್ಬಗಳೆಲ್ಲವು
ಜ್ಞಾನಜ್ಯೋತಿಯ ತೋರಿ
ರಂಜಿಸುವುವು
ನಾಗರಾಜು.ಹ
ಇಸ್ರೋ ಬಡಾವಣೆ,
ಬೆಂಗಳೂರು