ಹಿಂಗ್ ಮಾಡಿದ್ರೆ ಹೆಂಗೆ – ನಾಟಕ ಪ್ರದರ್ಶನ

ಹಿಂಗ್ ಮಾಡಿದ್ರೆ ಹೆಂಗೆ – ನಾಟಕ ಪ್ರದರ್ಶನ

ಬೆಂಗಳೂರಿನ ಅಂತರಂಗ ಬಹಿರಂಗ ರಂಗ ತಂಡ ನಿರಂತರವಾಗಿ ಸುಮಾರು ಆರು ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದೆ. ತಂಡವು ಇಲ್ಲಿಯವರೆಗೂ ಆರು ನಾಟಕಗಳನ್ನು ರಂಗದ ಮೇಲೆ‌ ತಂದಿದ್ದಾರೆ. ನೂರಕ್ಕು ಹೆಚ್ಚು ಮರುಪ್ರದರ್ಶನಗಳನ್ನು ಕೊಟ್ಟಿದ್ದಾರೆ. “ಹಿಂಗ್ ಮಾಡಿದ್ರೆ ಹೆಂಗೆ” ತಂಡದ 7ನೇ ನಾಟಕ.

ನಗರದ ಒತ್ತಡ ಜೀವನದಲ್ಲಿ ಕೆಲವು ಸಮಯ ಮನಸ್ಸನ್ನು ಹಗುರಾಗಿಸಿಕೊಳ್ಳಲು ಬಹು ಮುಖ್ಯವಾಗಿ ನಗು ಬೇಕಾಗುತ್ತದೆ. ಈ ಉದ್ದೇಶದಿಂದಲೇ ಪ್ರೇಕ್ಷಕರಿಗೆ ಬರಪೂರ ಹಾಸ್ಯವನ್ನು ನೀಡಿ ಮನಸ್ಸನ್ನು ತಿಳಿಯಾಗಿಸುವ ಪ್ರಯತ್ನ ಮಾಡಿದ್ದಾರೆ ಹಾಗು ಎಂಟು ತುಂಬು ಗೃಹದ ಪ್ರದರ್ಶನಗಳನ್ನು ಕಂಡು ಜನ ಮೆಚ್ಚಿದ ಹಾಸ್ಯ ನಾಟಕ ಎಂಬ ಬಿರುದಿಗೆ ಸಹ ಪಾತ್ರವಾಗಿದೆ.

ಈ ನಾಟಕದ‌‌ ಮತ್ತೆರೆಡು ಪ್ರದರ್ಶನವಿದ್ದು, ನಾಟಕದ ವಿವರ ಕೆಳಕಂಡಂತಿದೆ.

ರಚನೆ – ನಾಗವೇಣಿ ರಂಗನ್
ನಿರ್ದೇಶನ – ಬಾಶ್ ರಾಘವೇಂದ್ರ
ಸಂಗೀತ: ಮೇಘನಾ ಹಳಿಯಾಳ

ಸ್ಥಳ – ಡಾ॥ ಸಿ. ಅಶ್ವಥ್ ಕಲಾಭವನ, ಎನ್.ಆರ್.ಕಾಲೋನಿ, ಬಸವನಗುಡಿ.
ದಿನಾಂಕ-10-06-23 ಶನಿವಾರ
ಸಮಯ- ಸಂಜೆ 7-00 ಕ್ಕೆ

ಮತ್ತು

ಸ್ಥಳ : ಸೇವಾ ಸದನ ಮಲ್ಲೇಶ್ವರಂ.
ದಿನಾಂಕ : 11-06-23 ಭಾನುವಾರ
ಸಮಯ : ಸಂಜೆ 7:00 ಕ್ಕೆ

ಟಿಕೆಟ್ ದರ : 200/-
ಡೈರೆಕ್ಟ್ ಬುಕಿಂಗ್- 8660547776,
ಆನ್ ಲೈನ್ ಬುಕಿಂಗ್ – ಬುಕ್ ಮೈ ಶೋ

ಆಸಕ್ತರು ನಾಟಕವನ್ನು ವೀಕ್ಷಿಸಿ ಅಂತರಂಗ ಬಹಿರಂಗ ತಂಡಕ್ಕೆ ಶುಭ ಕೋರಬೇಕಾಗಿ ವಿನಂತಿ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *