ಅವಳ ಮುಟ್ಟಲ್ಲೊಂದು ಮೂರು ದಿನದ ಗುಟ್ಟು
ಆ ಗುಟ್ಟಿನೋಳಗೆ ಕಾಣದ ನೋವ ಮುಚ್ಚಿಟ್ಟು
ತನ್ನ ಉಸಿರನ್ನು ನಿನಗಾಗೆ ಮುಡಪಿಟ್ಟು
ನಿನ್ನ ಶ್ರೇಷ್ಟತೆಗೆ ತಂತಾನೇ ಮೂಲೆಯಲಿ ಕೂತು
ಹುಟ್ಟಿಗೊಂದು ಅರ್ಥ ಕೊಟ್ಟವಳು ಈ ಮುಟ್ಟಾದವಳು.
ಉಟ್ಟಂತ ಸೀರೆಯ ಗಟ್ಟಿತನದ ದಿಟ್ಟ ದಿನವದು
ನಿನ್ನ ಹುಟ್ಟಿಗಾಗಿಯೇ ಎಲ್ಲಾನೂ ಗಟ್ಟಿ ಮಾಡಿಕೊಂಡ ಮನಸದು..
ತಾ ಬೆಚ್ಚಿ ಬಿದ್ದರೂ,ಖಾಲಿಯಾದ ಹೊಟ್ಟೆಯ ಮೇಲೆ
ಕೈಯಿಟ್ಟು ಮತ್ತೆ ಮತ್ತೆ ನಿನ್ನನೇ ನೆನೆಯುವುದು.
ಇವಳಿಗಿಂತ ಶ್ರೇಷ್ಠ ಇಲ್ಲ ಕೇಳು ಇಲ್ಲಿ ಯಾವದು..
ಅಗಸ ಒಗೆದ ಹಂಗಿಗೂ ಒಂದು ಕಿಮ್ಮತ್ತಿದೆ
ಮುಟ್ಟಾದ ಈ ಮೂರುದಿನದ ನಿನ್ನ ಹುಟ್ಟಿಗೂ ಶ್ರೇಷ್ಠತೆಯಿದೆ.
ಒಟ್ಟಿಗೆ ಅವನು ನಿನ್ನ ಮಾನ ಮುಚ್ಚೋಕೆ ತೊಳೆದವನು
ಈ ತಾಯಿ ನಿನ್ನ ಹುಟ್ಟಿನ ಭಾರ ಹೊಟ್ಟೇಲಿ ಹೊತ್ತವಳು.
ಕಡೆಗಣಿಸಬೇಡ ಈ ಇಬ್ಬರನ್ನು,ಕಡೆಗಣಿಸಿದರೆ.
ಕಳೆದುಕೊಳ್ಳುವೆ ನೀ ಹುಟ್ಟನ್ನು ಜೊತೆಗೆ ಮಾನವನ್ನು…
ಬಿಟ್ಟು ಬಿಡಲು ಅವಳೇನು ಬಟ್ಟೆಯಲ್ಲ ದೇವತೆಯವಳು.
ಒಳಗುಟ್ಟವಳು ಸಾಧ್ಯವಿಲ್ಲ ನಾವು ಆ ನೋವನು ಹೊರಲು..
ಗಂಡಾಗಿ ಮಾಡಬೇಕಿದ್ದಿಷ್ಟೇ,ಅವಳ ಧನಿಗೆ ಧನಿಯಾಗಿ,
ತಲೆಯ ಮೇಲೆ ತಟ್ಟುತಲೇ ಇದ್ದರೆ ನವಿರಾಗಿ,
ನೋವಿದ್ದರೂ ನಗುತಾ ನಿನ್ನ ಮಡಿಲಲ್ಲೆ
ಮಗುವಾಗಿ ಮಲಗಿ ಬಿಡುವಳು,ಈ ಮುಟ್ಟಾದವಳು…
ಶಿವೂ ಅಣ್ಣಿಗೇರಿ