ಹೃದಯಗಳ ಪಿಸುಮಾತು
ಉಹಿಸಿದ ನೆನಪೊಂದನು ಮನಸಲ್ಲಿ ಬಚ್ಚಿಟ್ಟು
ಕರೆಯುವೆನು,,,,ನೀ ಬಂದು ನೆಲೆಸಲೆಂದೆ
ಕತ್ತಲನು ಕನಸಿಂದ ತಡೆ ಹಿಡಿದಿರುವೆನು,,,,
ಬಾ ಚೆಲುವೆ ನೀ ಬಾನಿಂದ ಜಾರಿ ಬೆಳಕಾಗಿ
ಹೂ ಕನಸ ಹೊತ್ತು ನಿಂತಿರುವೆ ನಾ ನಿನಗಾಗಿ..
ಕೇಳಿಲ್ಲಿ ಚೆಲುವ ಸಿಗುತ್ತಿಲ್ಲ ಯಾಕೋ ನಿದ್ರೆಗೆ ಸಮಯ
ಹಗಲಿಗೂ ರಾತ್ರಿಗೂ ನಿನ್ನನೆ ಪರಿಚಯಿಸುತಿದೆ ಹೃದಯ
ಏನೆಂದು ಹುಡುಕುವ ನನ್ನ ನೋಟದಲಿ,,
ಕಳೆದೋಗುತಲೇ ಇರುವೆ ನಿನ್ನನೇ ಕಾಣುತಾ ನಾನಿಲ್ಲಿ.
ಬಾ ಚೆಲುವ ಬಾನಿಂದ ಜಾರಿ ಬೆಳಕಾಗಿ
ಹೂ ಕನಸ ಹೊತ್ತು ನಿಂತಿರುವೆ ನಾ ನಿನಗಾಗಿ..
ನೀ ಆಡುವ ಮಾತು ಕಾಣದೆ ಕೊಡುವ ಮುತ್ತು
ಬರಿ ಕನಸಿಗೆ ನಾ ಮೀಸಲಿಡಲಾರೆ,,
ನಮ್ಮಿಬ್ಬರ ಕನಸಿನ ದಾರಿ ಒಂದೆ ಆಗಿರುವಾಗ
ನಾ ನಿನ್ನೆದರು ಬಂದು ನಿಲ್ಲಲು ಅಂಜಲಾರೆ,,
ಇನ್ನೂ ಒಗಟಾಗಿ ಉಳಿಯೋದು ಬೇಡಾ ಬಾ ನಲ್ಲೆ
ಕರೆದು ಕೇಳಿದ ಕಡೆಗೆಲ್ಲ ಕೊನೆವರೆಗೂ,ನೀ ಹೇಳುವ
ಹೆಸರಾಗಿ ಉಳಿಯುವಾಸೆ ನನಗೆ ನಿನ್ನಲ್ಲೆ..
ಉಹಿಸಿದ ನೆನಪೊಂದನು ಮನಸಲ್ಲಿ ಬಚ್ಚಿಟ್ಟು
ಕರೆಯುವೆನು,,,,ನೀ ಬಂದು ನೆಲೆಸಲೆಂದೆ
ಕತ್ತಲನು ಕನಸಿಂದ ತಡೆ ಹಿಡಿದಿರುವೆನು,,,,
ಬಾ ಚೆಲುವೆ/ಚೆಲುವ ಬಾನಿಂದ ಜಾರಿ ಬೆಳಕಾಗಿ
ಹೂ ಕನಸ ಹೊತ್ತು ನಿಂತಿರುವೆ ನಾ ನಿನಗಾಗಿ..
ಶಿವೂ ಅಣ್ಣಿಗೇರಿ