ಹೃದಯ ಖರೀದಿ
ಖಾಲಿಯಾದ ಹೃದಯವನ್ನು
ಕೊಳ್ಳುವವರು ಬೇಕಾಗಿದ್ದಾರೆ
ವಯಸ್ಸು 38
ಬಣ್ಣ ತುಸು ಕೆಂಪು ಆದರೆ ಬಣ್ಣಗೆಡದ ಬದುಕು
ಖಾಲೀತನ ಬೇಸರವು
ಒಮ್ಮೊಮ್ಮೆ ಸಡಗರವು
ಹಲವಾರು ಬಾರಿ ಬಾರು
ಗೆಳೆಯರೊಂದಿಗಿನ ಉದ್ರಿ ತಕರಾರು
ಖಾಲಿಯಾದ ಹೃದಯ
ಏಕಿಷ್ಟು ಗೊಂದಲ ನಿರೀಕ್ಷೆ ನಿರಾಸೆ ಸದಾ ಸ್ನೇಹಿತ
ಪುರೋಹಿತರಿಗೆ, ಅಡುಗೆಯವರಿಗೆ, ಕನ್ಯಾ ಕೊಡೊಲ್ಲ.
ಆಸ್ತಿಯ ಉಯಿಲು ಪತ್ರವೇ ಲಗ್ನಪತ್ರಿಕೆ.
ಏಕಾಂಗಿತನವೇ ಗೆಳೆಯರು
ಖಾಲಿಯಾದ ಹೃದಯಕೆ ಸದಾ ದಿಗಿಲು
ಕಾದು ಕಾದು ಹುಡುಗಿಯರಿಗೂ 38 ಬಂತು
ಆದರೂ ನಿಲ್ಲದ ತಕರಾರು

ಪವನ ಕುಮಾರ ಕೆ ವಿ ಬಳ್ಳಾರಿ